ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: 'ಇತಿಹಾಸ ಬದಲಿಸಲು ಸಾಧ್ಯವಿಲ್ಲ'; ಭಾರತ ವಿರುದ್ಧ ಕಳಪೆ ಸಾಧನೆ ಒಪ್ಪಿಕೊಂಡ ಪಾಕ್‌ ನಾಯಕ

T20 World Cup 2026: ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಎಂಟು ಬಾರಿ ಮುಖಾಮುಖಿಯಾಗಿವೆ ಎಂಬುದು ಕುತೂಹಲಕಾರಿಯಾಗಿದೆ. ಭಾರತ ತಂಡವು ಏಳು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ. 9ನೇ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.

ಭಾರತ ವಿರುದ್ಧ ಕಳಪೆ ಸಾಧನೆ ಒಪ್ಪಿಕೊಂಡ ಪಾಕ್‌ ನಾಯಕ

Pakistan skipper Salman Agha -

Abhilash BC
Abhilash BC Feb 14, 2026 4:36 PM

ಕೊಲಂಬೊ, ಫೆ.14: 2026 ರ ಟಿ20 ವಿಶ್ವಕಪ್‌(T20 World Cup 2026)ನ ಬಹು ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ(Salman Ali Agha) ಭಾರತವೇ ಗೆಲುವಿನ ಫೇವರಿಟ್‌ ಎಂದಿದ್ದಾರೆ.

ಪಂದ್ಯಕ್ಕೂ ಮುನ್ನ, ಶನಿವಾರ ನಡೆದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಅಲಿ ಅಘಾ, ಭಾರತದ ವಿರುದ್ಧ ತಮ್ಮ ತಂಡ ಹೊಂದಿರುವ ಕಳಪೆ ದಾಖಲೆಯನ್ನು ಒಪ್ಪಿಕೊಂಡರು ಮತ್ತು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದರ ಕುರಿತು ಮಾತನಾಡಿದರು.

"ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯರ ವಿರುದ್ಧ ನಮಗೆ ಉತ್ತಮ ದಾಖಲೆ ಇಲ್ಲ. ನಾವು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿ ದಿನವೂ ಹೊಸ ದಿನ" ಎಂದು ಸಲ್ಮಾನ್ ಅಲಿ ಆಘಾ ಹೇಳಿದರು.

IND vs PAK: ಭಾರತದೊಂದಿಗೆ ಹಸ್ತಲಾಘವ ಮಾಡಲು ಪಾಕ್‌ ಮುಕ್ತವಾಗಿದೆ; ನಾಯಕ ಸಲ್ಮಾನ್ ಆಘಾ

ಇದೇ ವೇಳೆ ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತ ತಂಡದ ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮ ಬಗ್ಗೆಯೂ ಮಾತನಾಡಿದ ಅವರು, "ಅಭಿಷೇಕ್ ಶರ್ಮಾ ಒಬ್ಬ ಉತ್ತಮ ಆಟಗಾರ, ಮತ್ತು ನಾವು ಅತ್ಯುತ್ತಮ ತಂಡದ ವಿರುದ್ಧ ಉತ್ತಮವಾಗಿ ಆಡಲು ಬಯಸುತ್ತೇವೆ ಮತ್ತು ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು.

ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ಆಘಾ, "ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಅವರನ್ನು ಎರಡು ಬಾರಿ ಪರೀಕ್ಷಿಸಿ ಕ್ಲಿಯರ್ ಮಾಡಿದೆ. ಈ ಗದ್ದಲ ಏನೆಂದು ನನಗೆ ತಿಳಿದಿಲ್ಲ. ಹೇಗಾದರೂ, ಅವರು ತಲೆಕೆಡಿಸಿಕೊಳ್ಳುವುದಿಲ್ಲ" ಎಂದರು.

“ನಮ್ಮಲ್ಲಿ ಪ್ರಾಬಲ್ಯ ಸಾಧಿಸುವ ಅನೇಕ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳಿವೆ. ನಮ್ಮಲ್ಲಿ 15 ಆಟಗಾರರಿದ್ದಾರೆ, ಮತ್ತು ನಾನು ಯಾವುದೇ 11 ಆಟಗಾರರನ್ನು ಆಡಿಸಬಲ್ಲೆ. ಅವರ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಸಲ್ಮಾನ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಎಂಟು ಬಾರಿ ಮುಖಾಮುಖಿಯಾಗಿವೆ ಎಂಬುದು ಕುತೂಹಲಕಾರಿಯಾಗಿದೆ. ಭಾರತ ತಂಡವು ಏಳು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ.