Asia Cup hockey: ಹಾಕಿ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್‌ಗೆ ನಾಯಕತ್ವ
8 ತಂಡಗಳ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವು, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ 2026ರ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ. ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್-4 ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ.


ನವದೆಹಲಿ: ಮುಂಬರುವ ಹಾಕಿ ಏಷ್ಯಾ ಕಪ್‌ಗಾಗಿ(Asia Cup hockey) ಭಾರತ ತಂಡವನ್ನು ಘೋಷಿಸಲಾಗಿದ್ದು, ಹರ್ಮನ್‌ಪ್ರೀತ್ ಸಿಂಗ್(Harmanpreet Singh) ನಾಯಕಯಾಗಿದ್ದಾರೆ. 18 ಸದಸ್ಯರ ತಂಡವನ್ನು ಬುಧವಾರ(ಆ.20) ಹಾಕಿ ಇಂಡಿಯಾ ಪ್ರಕಟಿಸಿದೆ. ತಂಡವೂ ಯುವ ಮತ್ತು ಅನುಭವಿಗಳಿಂದ ಕೂಡಿದೆ. ಪಾಕಿಸ್ತಾನ ಈ ಟೂರ್ನಿಯಿಂದ ಹಿಂದೆ ಸರಿದ ನಂತರ, ಭಾರತವು ಜಪಾನ್, ಚೀನಾ ಮತ್ತು ಕಜಕಿಸ್ತಾನ್‌ಗಳೊಂದಿಗೆ ಪೂಲ್ 'ಎ' ನಲ್ಲಿ ಸ್ಥಾನ ಪಡೆದಿದೆ. ಭಾರತ ತಂಡವು ಆಗಸ್ಟ್ 29 ರಂದು ಚೀನಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಜಪಾನ್ ಮತ್ತು ಕಜಕಿಸ್ತಾನ್ ವಿರುದ್ಧದ ಪಂದ್ಯಗಳನ್ನು ಆಡಲಿದೆ.
ಗೋಲ್‌ಕೀಪಿಂಗ್ ಕರ್ತವ್ಯಗಳನ್ನು ಕೃಷ್ಣ ಬಿ.ಪಾಠಕ್ ನಿರ್ವಹಿಸಿದರೆ, ಸೂರಜ್ ಕರ್ಕೇರಾ ಬ್ಯಾಕಪ್ ಆಟಗಾರರಾಗಿದ್ದಾರೆ. ತಂಡದಲ್ಲಿರುವ ಮಿಡ್‌ಫೀಲ್ಡರ್‌ಗಳಾಗಿ ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್ ಮತ್ತು ಹಾರ್ದಿಕ್ ಸಿಂಗ್ ಇದ್ದಾರೆ. ಫಾರ್ವರ್ಡ್ಸ್ ಆಟಗಾರರಾಗಿ ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್ ಮತ್ತು ಶಿಲಾನಂದ್ ಲಾಕ್ರ ಕಾಣಿಸಿಕೊಂಡಿದ್ದಾರೆ.
8 ತಂಡಗಳ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವು, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ 2026ರ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದೆ. ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್-4 ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ.
ಭಾರತ ತಂಡ
ಗೋಲ್‌ಕೀಪರ್ಸ್: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ.
ಡಿಫೆಂಡರ್ಸ್: ಸುಮೀತ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ , ಜುಗರಾಜ್ ಸಿಂಗ್.
ಮಿಡ್‌ಫೀಲ್ಡರ್ಸ್: ರಾಜಿಂದರ್ ಸಿಂಗ್, ರಾಜ್‌ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.
ಫಾರ್ವರ್ಡ್ಸ್: ಮನ್‌ದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಶಿಲಾನಂದ್ ಲಾಕ್ರ.
ಮೀಸಲು ಆಟಗಾರರು: ನೀಲಮ್ ಸಂಜೀಪ್ ಕ್ಸೆಸ್, ಸಿಲ್ವಂ ಕಾರ್ತಿ.
ಇದನ್ನೂ ಓದಿ ಹಾಕಿ ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಚೀನಾ ಮೊದಲ ಎದುರಾಳಿ