ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy: ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌

Ishan Kishan: ಪಂದ್ಯಾವಳಿಯಲ್ಲಿ ಪೂರ್ವ ವಲಯ ತಂಡವನ್ನು ಇಶಾನ್‌ ಕಿಶನ್ ಮುನ್ನಡೆಸಬೇಕಿತ್ತು. ತಂಡವು ಯುವ ಮತ್ತು ಅನುಭವದ ಪರಿಪೂರ್ಣ ಮಿಶ್ರಣವನ್ನು ಹೊಂದಿತ್ತು. ಕಿಶನ್ ಅನುಪಸ್ಥಿತಿಯಲ್ಲಿ, ಉಪನಾಯಕ ಅಭಿಮನ್ಯು ಈಶ್ವರನ್ ಈಗ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯವನ್ನು ಮುನ್ನಡೆಸಲಿದ್ದಾರೆ.

ದುಲೀಪ್‌ ಟ್ರೋಫಿಯಿಂದ ಹೊರಬಿದ್ದ ಇಶಾನ್‌ ಕಿಶನ್‌

Abhilash BC Abhilash BC Aug 18, 2025 11:54 AM

ನವದೆಹಲಿ: ಇದೇ ತಿಂಗಳ 28 ರಿಂದ ಬೆಂಗಳೂರಿನಲ್ಲಿ ನಡೆಯುವ ದುಲೀಪ್‌ ಟ್ರೋಫಿ(Duleep Trophy) ಕ್ರಿಕೆಟ್‌ ಟೂರ್ನಿಯಿಂದ ವಿಕೆಟ್‌ಕೀಪರ್‌ ಇಶಾನ್ ಕಿಶನ್(Ishan Kishan) ಹೊರಬಿದ್ದಿದ್ದಾರೆ. ಇಶಾನ್‌ ಬದಲಿಗೆ ಒಡಿಶಾ ಕ್ರಿಕೆಟ್ ಅಸೋಸಿಯೇಷನ್ 27 ವರ್ಷದ ಆಶೀರ್ವಾದ್ ಸ್ವೈನ್(Aashirwad Swain) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಲ ದಿನಗಳ ಹಿಂದಷ್ಟೇ ತಂಡದ ವೇಗಿ ಆಕಾಶ್‌ದೀಪ್‌ ಕೂಡ ಗಾಯದಿಂದ ಹೊರಬಿದ್ದರು.

ಪಂದ್ಯಾವಳಿಯಲ್ಲಿ ಪೂರ್ವ ವಲಯ ತಂಡವನ್ನು ಕಿಶನ್ ಮುನ್ನಡೆಸಬೇಕಿತ್ತು. ತಂಡವು ಯುವ ಮತ್ತು ಅನುಭವದ ಪರಿಪೂರ್ಣ ಮಿಶ್ರಣವನ್ನು ಹೊಂದಿತ್ತು. ಕಿಶನ್ ಅನುಪಸ್ಥಿತಿಯಲ್ಲಿ, ಉಪನಾಯಕ ಅಭಿಮನ್ಯು ಈಶ್ವರನ್ ಈಗ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯವನ್ನು ಮುನ್ನಡೆಸಲಿದ್ದಾರೆ. ಸ್ವೈನ್ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ, ಸ್ವಸ್ತಿಕ್ ಸಮಲ್ ಅವರನ್ನು ಸ್ಟ್ಯಾಂಡ್‌ಬೈ ಆಗಿ ಆಯ್ಕೆ ಮಾಡಲಾಗಿದೆ.

"ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡಕ್ಕೆ ಒಡಿಶಾದ ವಿಕೆಟ್ ಕೀಪರ್-ಬ್ಯಾಟರ್ ಆಶೀರ್ವಾದ್ ಸ್ವೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಇಶಾನ್ ಕಿಶನ್ ಬದಲಿಗೆ! ಅವರು ಸಂದೀಪ್ ಪಟ್ನಾಯಕ್ ಅವರೊಂದಿಗೆ ತಂಡಕ್ಕೆ ಸೇರುತ್ತಾರೆ. ಆದರೆ ಸ್ವಸ್ತಿಕ್ ಸಮಲ್ ಅವರನ್ನು ಸ್ಟ್ಯಾಂಡ್‌ಬೈ ಆಗಿ ಹೆಸರಿಸಲಾಗಿದೆ" ಎಂದು ಒಡಿಶಾ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೆಯಲ್ಲಿ ತಿಳಿಸಿದೆ. ಪೂರ್ವ ವಲಯ ತಂಡವು ಆಗಸ್ಟ್‌ 28ರಂದು ತನ್ನ ಮೊದಲ ಪಂದ್ಯದಲ್ಲಿ ಉತ್ತರ ವಲಯ ತಂಡವನ್ನು ಎದುರಿಸಲಿದೆ. ಉತ್ತರ ವಲಯವನ್ನು ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ.

ಪೂರ್ವ ವಲಯ ಪರಿಷ್ಕೃತ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಸಂದೀಪ್ ಪಟ್ನಾಯಕ್, ವಿರಾಟ್ ಸಿಂಗ್, ಡೆನಿಶ್ ದಾಸ್, ಶ್ರೀದಂ ಪಾಲ್, ಶರಣದೀಪ್ ಸಿಂಗ್, ಕುಮಾರ್ ಕುಶಾಗ್ರಾ, ರಿಯಾನ್ ಪರಾಗ್, ಉತ್ಕರ್ಷ್ ಸಿಂಗ್, ಮನೀಷಿ, ಸೂರಜ್ ಸಿಂಧು ಜೈಸ್ವಾಲ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಆಶೀರ್ವಾದ್ ಸ್ವೈನ್.

ಇದನ್ನೂ ಓದಿ ದುಲೀಪ್‌ ಟ್ರೋಫಿ ಟೂರ್ನಿಯಿಂದ ಭಾರತ ತಂಡದ ವೇಗಿ ಆಕಾಶ್‌ ದೀಪ್‌ ಔಟ್‌!

ಮೀಸಲು ಆಟಗಾರರು: ಮುಖ್ತಾರ್ ಹುಸೇನ್, ವೈಭವ್ ಸೂರ್ಯವಂಶಿ, ಸ್ವಸ್ತಿಕ್ ಸಮಲ್, ಸುದೀಪ್ ಕುಮಾರ್ ಘರಾಮಿ, ರಾಹುಲ್ ಸಿಂಗ್.