ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚೇತೇಶ್ವರ್‌ ಪೂಜಾರಗೂ ಮುನ್ನ ವಿದಾಯದ ಪಂದ್ಯವಾಡದ ಟಾಪ್‌ ಐವರು ಬ್ಯಾಟರ್ಸ್‌!

ಭಾರತೀಯ ಟೆಸ್ಟ್‌ ಕ್ರಿಕೆಟ್‌ ದಂತಕಥೆ ಚೇತೇಶ್ವರ್‌ ಪೂಜಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಭಾನುವಾರ (ಆಗಸ್ಟ್‌ 24) ಅವರು ನಿವೃತ್ತಿ ಘೋಷಿಸಿದರು. ನಿವೃತ್ತಿಯಾಗುವ ಮುನ್ನ ವಿದಾಯದ ಪಂದ್ಯವಾಡಲು ಅವಕಾಶ ಸಿಗದ ಅಗ್ರ 5 ಭಾರತೀಯ ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ವಿದಾಯದ ಪಂದ್ಯವಾಡದ ಭಾರತದ ಅಗ್ರ ಐವರು ಬ್ಯಾಟರ್ಸ್‌!

ಚೇತೇಶ್ವರ್‌ ಪೂಜಾರಗೂ ಮುನ್ನ ವಿದಾಯದ ಪಂದ್ಯವಾಡದ ಅಗ್ರ ಐವರು ಬ್ಯಾಟರ್ಸ್‌.

Profile Ramesh Kote Aug 25, 2025 7:46 PM

ನವದೆಹಲಿ: ಭಾರತೀಯ ಟೆಸ್ಟ್‌ (Indian Cricket Team) ಕ್ರಿಕೆಟ್‌ನ ದಂತಕತೆ ಚೇತೇಶ್ವರ್‌ ಪೂಜಾರ (Cheteshwar Pujara) ಕಳೆದ ಭಾನುವಾರ (ಆಗಸ್ಟ್‌ 24) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರ ಪೂಜಾರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಅವರು ತಮ್ಮ ರಾಷ್ಟ್ರೀಯ ತಂಡದ ಪರ ಆಡಲು ಅಕಾಶ ಸಿಗಲೇ ಇಲ್ಲ. ಅಂದ ಹಾಗೆ ಚೇತೇಶ್ವರ್‌ ಪೂಜಾರಗೂ ಮುನ್ನ ನಿವೃತ್ತಿಯ ಮುನ್ನ ವಿದಾಯದ ಪಂದ್ಯವನ್ನು ಆಡದ ಭಾರತದ ಅಗ್ರ 5 ಕ್ರಿಕೆಟಿಗರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಚೇತೇಶ್ವರ್‌ ಪೂಜಾರ ಭಾರತೀಯ ಟೆಸ್ಟ್‌ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ರಾಹುಲ್‌ ದ್ರಾವಿಡ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರ ಸ್ಥಾನವನ್ನು ಟೆಸ್ಟ್‌ ತಂಡದಲ್ಲಿ ಪೂಜಾರ ತುಂಬಿದ್ದರು. ಅವರು ಸುಮಾರು ಒಂದೂವರೆ ದಶಕದ ಕಾಲ ಭಾರತ ಟೆಸ್ಟ್‌ ತಂಡದಲ್ಲಿದ್ದರು. ಅವರು 104 ಟೆಸ್ಟ್‌ ಪಂದ್ಯಗಳಿಂದ 43.60ರ ಸರಾಸರಿಯಲ್ಲಿ 7195 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 19 ಶತಕಗಳನ್ನು ಬಾರಿಸಿದರು.

ತಾವು ಎದುರಿಸಿದ ನಾಲ್ವರು ಕಠಿಣ ಬೌಲರ್‌ಗಳನ್ನು ಹೆಸರಿಸಿದ ಚೇತೇಶ್ವರ್‌ ಪೂಜಾರ!

ಗೌತಮ್ ಗಂಭೀರ್

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ತಾನು ನಿವೃತ್ತಿ ಪಡೆಯುವುದಕ್ಕೂ ಮುನ್ನ ವಿದಾಯ ಪಂದ್ಯ ಆಡಲು ಅವಕಾಶ ಸಿಗಲಿಲ್ಲ. ಗೌತಮ್ ಗಂಭೀರ್ 2018 ರಲ್ಲಿ ನಿವೃತ್ತರಾಗಿದ್ದರು. ಗಂಭೀರ್ ಭಾರತ ಪರ 58 ಟೆಸ್ಟ್, 147 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಚೇತೇಶ್ವರ್‌ ಪೂಜಾರ

ಭಾರತದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರಿಗೆ ನಿವೃತ್ತಿಯಾಗುವ ಮೊದಲು ವಿದಾಯ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಅವರು ಆಸ್ಟ್ರೇಲಿಯಾ ವಿರುದ್ಧ 2023 ರಲ್ಲಿ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

Cheteshwar Pujara: ಕ್ರಿಕೆಟ್‌ ನಿವೃತ್ತಿ ಘೋಷಿಸಿದ ಪೂಜಾರಗೆ ಶುಭ ಹಾರೈಸಿದ ಭಾರತದ ಮಾಜಿ ತಾರೆಯರು

ಶಿಖರ್ ಧವನ್

ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಅವರು 2022ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಗಬ್ಬರ್ ಅವರಿಗೆ ವಿದಾಯ ಪಂದ್ಯವನ್ನು ಆಡುವ ಅವಕಾಶವೂ ಸಿಗಲಿಲ್ಲ.

ಎಂಎಸ್ ಧೋನಿ

2020ರ ಆಗಸ್ಟ್ 15 ರಂದು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತರಾಗಿದ್ದರು. ಮಾಹಿ ಈ ನಿರ್ಧಾರವನ್ನು ಹಠಾತ್ತನೆ ತೆಗೆದುಕೊಂಡರು. 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರ ಧೋನಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ಪಂದ್ಯ ಸೆಮಿಫೈನಲ್ ಆಗಿತ್ತು.

Cheteshwar Pujara: ಪೂಜಾರ ಕ್ರಿಕೆಟ್‌ ಸಾಧನೆಯ ಇಣುಕು ನೋಟ

ವೀರೇಂದ್ರ ಸೆಹ್ವಾಗ್

ಭಾರತದ ದಂತಕಥೆಯ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ವಿದಾಯ ಪಂದ್ಯ ಆಡಲು ಅವಕಾಶ ಸಿಗಲಿಲ್ಲ. ವೀರು 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಅದು ಟೆಸ್ಟ್ ಪಂದ್ಯವಾಗಿತ್ತು.