ಆಸ್ಟ್ರೇಲಿಯಾ ಎ ವಿರುದ್ಧ ಭಾರತ ಎ ತಂಡದ ವನಿತೆಯರಿಗೆ ದೊಡ್ಡ ಅಂತರದ ಸೋಲು!
ಆಸ್ಟ್ರೇಲಿಯಾ ಎ ಮಹಿಳಾ ತಂಡದ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಎ ಮಹಿಳಾ ತಂಡ ಎರಡನೇ ಅನಧೀಕೃತ ಟಿ20ಐ ಪಂದ್ಯದಲ್ಲಿ 114 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಆ ಮೂಲಕ ಈ ಸರಣಿಯಲ್ಲಿ ಭಾರತದ ವನಿತೆಯರು 2-0 ಹಿನ್ನಡೆಯನ್ನು ಅನುಭವಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ಎ ಮಹಿಳಾ ತಂಡಕ್ಕೆ ಸೋಲು.

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಎ (India A) ಮಹಿಳಾ ಕ್ರಿಕೆಟ್ ತಂಡ ಸತತ ಎರಡನೇ ಸೋಲು ಅನುಭವಿಸಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಭಾರತ ಮಹಿಳಾ ತಂಡ ಅನಧಿಕೃತ ಎರಡನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ (Australia A) ಮಹಿಳೆಯರ ವಿರುದ್ಧ 114 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಸತತ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಭಾರತ ಮಹಿಳಾ ತಂಡ ಸರಣಿಯಲ್ಲಿ 2-0 ಹಿನ್ನಡೆಯನ್ನು ಅನುಭವಿಸಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20 ಸರಣಿಯನ್ನು ಕಳೆದುಕೊಳ್ಳುವಂತಾಗಿದೆ.
ಮೆಕೆಯ ಗ್ರೇಟ್ ಬಾರಿಯರ್ ರೀಫ್ ಅಂಗಣದಲ್ಲಿ ನಡೆದಿದ್ದ ಎರಡನೇ ಅನಧಿಕೃತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಎ ಮಹಿಳಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತ್ತು. ಆಸ್ಟ್ರೇಲಿಯಾ ಪರ ಅಲೀಸಾ ಹೀಲಿ ಕೇವಲ 44 ಎಸೆತಗಳಲ್ಲಿ 70 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆಗೆ ತಹ್ಲಿಯಾ ವಿಲ್ಸನ್ (43), ಅನಿಕಾ ಲೀರಾಯ್ಡ್ (35) ಹಾಗೂ ಕರ್ಟ್ನಿ ವೆಬ್ (26*) ಅವರು ಆಸ್ಟ್ರೇಲಿಯಾ ತಂಡಕ್ಕೆ ನೆರವು ನೀಡಿದ್ದರು.
ಭಾರತ ಎ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ರಾಧ ಯಾದವ್ ಬೌಲ್ ಮಾಡಿದ್ದ ನಾಲ್ಕು ಓವರ್‌ಗಳಿಗೆ 35 ರನ್ ನೀಡಿ ಎರಡು ವಿಕೆಟ್ ಕಿತ್ತರು. ಪ್ರೇಮಾ ರಾವತ್ ಅವರು ನಾಲ್ಕು ಓವರ್‌ಗಳಲ್ಲಿ ಕೇವಲ 26 ರನ್‌ಗಳನ್ನು ನೀಡಿ 2 ವಿಕೆಟ್ ಕಿತ್ತಿದ್ದರು.
ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ಇಬ್ಬರು ಆಟಗಾರರು!
ಬಳಿಕ 188 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ಎ ತಂಡ ಬ್ಯಟಿಂಗ್ ಕುಸಿತ ಅನುಭವಿಸಿತು. ಆರಂಭದಲ್ಲಿ ಕಿಮ್ ಗರ್ಥ್ ಮತ್ತು ಟೆಸ್ ಫ್ಲಿಂಟಾಫ್ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಭಾರತದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದ್ದರು. ಮಿನ್ನು ಮಣಿ ಹಾಗೂ ವೃಂದಾ ದಿನೇಶ್ ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಆಟಗಾರ್ತಿಯರು ವೈಯಕ್ತಿಕ ಎರಡಂಕಿ ಮೊತ್ತವನ್ನು ಕಲೆ ಹಾಕಲಿಲ್ಲ. ಆ ಮೂಲಕ ಪ್ರವಾಸಿ ತಂಡ ತನ್ನ ಇನಿಂಗ್ಸ್ ಅನ್ನು 15.1 ಓವರ್‌ಗಳಿಗೆ ಮುಗಿಸಿತು.
ಭಾರತ ತಂಡ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಆಘಾತ ಅನುಭವಿಸಿದ್ದ ಬಳಿಕ ಭಾರತ ತಂಡ ಮತ್ತೆ ಕಮ್‌ಬ್ಯಾಕ್ ಮಾಡಲು ಆಸೀಸ್ ಬೌಲರ್‌ಗಳು ಬಿಡಲಿಲ್ಲ. ಆಸ್ಟ್ರೇಲಿಯಾ ಪರ ಕಿಮ್ ಗಾರ್ಥ್ ಅವರು ಮೂರು ಓವರ್‌ಗಳಿಗೆ ಕೇವಲ 7 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಫ್ಲಿಂಟಾಫ್ ಹಾಗೂ ಎಮಿ ಎಡ್ಜರ್ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಲ್ಯೂಸಿ ಹ್ಯಾಮಲ್ಟನ್ ಮತ್ತು ಸಿಯಾನ್ ಗಿಂಗರ್ ಅವರು ತಲಾ ಒಂದೊಂದು ವಿಎಕಟ್ ಕಿತ್ತಿದ್ದರು.
Aussie stars Alyssa Healy and Kim Garth led an all-round dominant display as Australia A sealed a T20 series victory in Mackay #AusAvIndA https://t.co/wmkiupE87C pic.twitter.com/ftQzrEzuLv
— cricket.com.au (@cricketcomau) August 9, 2025
ಆರಂಭಿಕ ಎರಡು ಪಂದ್ಯಗಳನ್ನು ಸೋಲು ಅನುಭವಿಸಿದ ಬಳಿಕ ಭಾರತ ಎ ತಂಡ ಸರಣಿಯನ್ನು ಕಳೆದುಕೊಂಡಿತು. ಇನ್ನು ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯ ಆಗಸ್ಟ್ 10 ರಂದು ಭಾನುವಾರ ನಡೆಯಲಿದೆ.
ಸ್ಕೋರ್ ವಿವರ
ಆಸ್ಟ್ರೇಲಿಯಾ ಎ ಮಹಿಳಾ ತಂಡ: 20 ಓವರ್‌ಗಳಲ್ಲಿ 187/4. ಅಲಿಸಾ ಹೀಲಿ (70), ತಹ್ಲಿಯಾ ವಿಲ್ಸನ್ (43); ರಾಧಾ ಯಾದವ್ (2/35)
ಭಾರತ ಎ ಮಹಿಳಾ ತಂಡ: 15.1 ಓವರ್‌ಗಳಲ್ಲಿ 73ಕ್ಕೆ ಆಲೌಟ್. ವೃಂದಾ ದಿನೇಶ್ (21), ಮಿನ್ನು ಮಣಿ (21); ಕಿಮ್ ಗಾರ್ಥ್ (4/7), ಎಮಿ ಎಡ್ಜರ್ (2/17)