ಜಸ್‌ಪ್ರೀತ್ ಬುಮ್ರಾ ಅಲ್ಲ, ಭಾರತ ತಂಡದ ಅತ್ಯುತ್ತಮ ಬೌಲರ್ ಹೆಸರಿಸಿದ ವಸಿಮ್ ಅಕ್ರಮ್!
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ದಂತಕಥೆ ವೇಗದ ಬೌಲರ್ ವಾಸಿಮ್ ಅಕ್ರಮ್, ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಅತ್ಯುತ್ತಮ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅಲ್ಲ, ಮೊಹಮ್ಮದ್ ಸಿರಾಜ್ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸಿರಾಜ್ 23 ವಿಕೆಟ್‌ಗಳನ್ನು ಕಬಳಿಸಿದ್ದರು.

ಭಾರತದ ಅತ್ಯುತ್ತಮ ಬೌಲರ್ ಮೊಹಮ್ಮದ್ ಸಿರಾಜ್ ಎಂದ ವಸಿಮ್ ಅಕ್ರಮ್.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ(IND vs ENG) ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಿರಾಜ್ ಈ ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲ, ಈ ಸರಣಿಯಲ್ಲಿ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ ಬೌಲರ್ ಕೂಡ ಮೊಹಮ್ಮದ್ ಸಿರಾಜ್. ಅವರು ಐದು ಪಂದ್ಯಗಳಲ್ಲಿ ಒಟ್ಟು 185.3 ಓವರ್‌ಗಳನ್ನು ಬೌಲ್ ಮಾಡಿದ್ದಾರೆ, ಇದರಲ್ಲಿ ಎರಡು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿರುವ ಸಾಧನೆಯೂ ಸೇರಿದೆ. ಪಾಕಿಸ್ತಾನ ಕ್ರಿಕೆಟ್ ದಂತಕಥೆ ವೇಗಿ ವಸಿಮ್ ಅಕ್ರಮ್ (Wasim Akram), ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ವೇಗಿ ಎಂದು ವಸಿಮ್ ಅಕ್ರಮ್ ನಂಬಿದ್ದಾರೆ. ಸಿರಾಜ್ ಯಾವುದೇ ವಿರಾಮವಿಲ್ಲದೆ ಟೀಮ್ ಇಂಡಿಯಾ ಪರ ನಿರಂತರವಾಗಿ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಮತ್ತೊಂದೆಡೆ, ಜಸ್‌ಪ್ರೀತ್ ಬುಮ್ರಾ ಬಗ್ಗೆ ಹೇಳುವುದಾದರೆ, ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರಣ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಈ ಕಾರಣದಿಂದಾಗಿ ಅವರನ್ನು ಸಾಕಷ್ಟು ಟೀಕಿಸಲಾಗಿತ್ತು.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಮೊಹಮ್ಮದ್ ಸಿರಾಜ್ ಬಗ್ಗೆ ವಸೀಮ್ ಅಕ್ರಮ್ ಹೇಳಿದ್ದೇನು?
ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ರಮ್, "ನಾನು ಕೆಲಸವಿಲ್ಲದಿದ್ದಾಗ ಕ್ರಿಕೆಟ್ ನೋಡುವುದು ಅಪರೂಪ, ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಓವಲ್ ಟೆಸ್ಟ್‌ನ ಕೊನೆಯ ದಿನದಂದು ನಾನು ಟಿವಿಗೆ ಅಂಟಿಕೊಂಡಿದ್ದೆ. ಸಿರಾಜ್ ಅದ್ಭುತ ಉತ್ಸಾಹ ಮತ್ತು ಉತ್ಸುಕತೆಯನ್ನು ಹೊಂದಿದ್ದರು. ಐದು ಟೆಸ್ಟ್ ಪಂದ್ಯಗಳಲ್ಲಿ ಸುಮಾರು 186 ಓವರ್‌ಗಳನ್ನು ಬೌಲ್ ಮಾಡಿದ ನಂತರವೂ ಕೊನೆಯ ದಿನದಂದು ಅದೇ ಉತ್ಸಾಹದಿಂದ ಬೌಲ್ ಮಾಡುವುದು ಅವರ ಉತ್ತಮ ಸಹಿಷ್ಣುತೆ ಮತ್ತು ಮಾನಸಿಕ ಶಕ್ತಿಯನ್ನು ತೋರಿಸುತ್ತದೆ," ಎಂದು ಹೇಳಿದ್ದಾರೆ.
ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
"ಅವರು ಇನ್ನು ಮುಂದೆ ಕೇವಲ ಪೋಷಕ ಬೌಲರ್ ಅಲ್ಲ. ಅವರು ಭಾರತೀಯ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅದನ್ನು ಪೂರ್ಣ ಹೃದಯದಿಂದ ಮಾಡುತ್ತಿದ್ದಾರೆ. ಬ್ರೂಕ್ ಕ್ಯಾಚ್ ತಪ್ಪಿಸಿಕೊಂಡಾಗಲೂ ಅವರು ತಮ್ಮ ಗಮನವನ್ನು ಕಳೆದುಕೊಳ್ಳಲಿಲ್ಲ. ಇದು ಹೋರಾಟಗಾರನ ಲಕ್ಷಣ. ಟೆಸ್ಟ್ ಕ್ರಿಕೆಟ್ ಇನ್ನೂ ಜೀವಂತವಾಗಿದೆ. ಇದಲ್ಲದೆ, ಕೊನೆಯ ದಿನವೂ ಭಾರತ ಪಂದ್ಯವನ್ನು ಗೆಲ್ಲುತ್ತದೆ ಎಂದು ನಾನು ಆಶಿಸಿದ್ದೆ, ಅದು ಕೇವಲ ವಿಕೆಟ್ ಪಡೆಯುವ ವಿಷಯ," ಎಂದು ವಸೀಮ್ ಅಕ್ರಮ್ ತಿಳಿಸಿದ್ದಾರೆ.
ಡ್ರಾನಲ್ಲಿ ಅಂತ್ಯವಾಗಿದ್ದ ಟೆಸ್ಟ್ ಸರಣಿ
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾನಲ್ಲಿ ಅಂತ್ಯವಾಗಿತ್ತು. ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ಅಷ್ಟೇ ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿಯೂ ಭಾರತ ತಂಡ, ಶುಭಮನ್ ಗಿಲ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನವನ್ನು ತೋರಿರುವುದು ಅದ್ಭುತ