ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

37 ಬಾಲ್‌ಗಳಲ್ಲಿ ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್‌; ಐಪಿಎಲ್‌ ಟೂರ್ನಿಗೆ ಮರಳುವಂತೆ ಫ್ಯಾನ್ಸ್‌ ಕರೆ!

ಆಸ್ಟ್ರೇಲಿಯಾ ಚಾಂಪಿಯನ್ಸ್‌ ವಿರುದ್ಧದ 2026ರ ವಿಶ್ವ ಲೆಜೆಂಡ್ಸ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ನಾಯಕ ಎಬಿ ಡಿ ವಿಲಿಯರ್ಸ್‌ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಶತಕ ಸಿಡಿಸಿದ ಬೆನ್ನಲ್ಲೆ ಐಪಿಎಲ್‌ ಟೂರ್ನಿಗೆ ಮರಳಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

WLC 2026: 37 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ ಎಬಿ ಡಿ ವಿಲಿಯರ್ಸ್‌!

ವಿಶ್ವ ಲೆಜೆಂಡ್ಸ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್. -

Profile
Ramesh Kote Oct 10, 2026 5:00 PM

ನವದೆಹಲಿ: ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ (AB De Villiers) ಈಗಾಗಲೇ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದರೂ ಎಬಿ ಡಿ ವಿಲಿಯರ್ಸ್‌ ಅವರ ಆಟ ಮಾತ್ರ ಇನ್ನೂ ಹಾಗೆಯೇ ಉಳಿದಿದೆ. 42ರ ವಯಸ್ಸಿನ ಬ್ಯಾಟ್ಸ್‌ಮನ್‌ ಸದ್ಯ 2026ರ ವಿಶ್ವ ಲೆಜೆಂಡ್ಸ್‌ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ (WLC 2026) ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ಪರ ಆಡುತ್ತಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್‌ ವಿರುದ್ದದ ಪಂದ್ಯದಲ್ಲಿ ಎಬಿಡಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ.

ವಿಶ್ವ ಲೆಜೆಂಡ್ಸ್‌ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್‌ ಭರ್ಜರಿ ಶತಕ ಸಿಡಿಸಿದ ಬೆನ್ನಲ್ಲೆ ಭಾರತೀಯ ಅಭಿಮಾನಿಗಳು ಆರ್‌ಸಿಬಿ ಮಾಜಿ ಆಟಗಾರನನ್ನು ಐಪಿಎಲ್‌ ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡುವಂತೆ ಸಲಹೆ ನೀಡಿದ್ದಾರೆ. ಅದರಲ್ಲಿಯೂ ಅವರು ಬಲಿಷ್ಠ ಆಸ್ಟ್ರೇಲಿಯಾ ಚಾಂಪಿಯನ್ಸ್‌ ಎದುರು 37 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಅಂದ ಹಾಗೆ 2027ರ ಐಪಿಎಲ್‌ ಟೂರ್ನಿಯ ಆಟಗಾರರ ಮಿನಿ ಹರಾಜು ಈ ವರ್ಷಾಂತ್ಯದಲ್ಲಿ ನಡೆಯಲಿದೆ.

WCL 2026: 39 ಎಸೆತಗಳಲ್ಲಿ 70 ರನ್‌ ಚಚ್ಚಿದ ಎಬಿ ಡಿ ವಿಲಿಯರ್ಸ್‌, ಮಿಸ್ಟರ್‌ 360 ಅಬ್ಬರಕ್ಕೆ ವಿಂಡೀಸ್‌ ಉಡೀಸ್‌!

ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‌, ಐಪಿಎಲ್‌ನಲ್ಲಿ ಅವರನ್ನು ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದ್ದ ಅದ್ಭುತ ಹೊಡೆತಗಳ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಅವರ ಈ ಪ್ರದರ್ಶನದ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ತಾರೆ ಮತ್ತೊಮ್ಮೆ ಐಪಿಎಲ್‌ಗೆ ಮರಳಬಹುದೇ ಎಂಬ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯುಸಿಎಲ್) ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಡಿವಿಲಿಯರ್ಸ್ ಒಟ್ಟು 181 ರನ್ ಗಳಿಸಿದ್ದಾರೆ. 181ರ ಸರಾಸರಿ ಹಾಗೂ 229.11ರ ಗಮನಾರ್ಹ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು, ತಮ್ಮ ಸ್ಫೋಟಕ ಆಟದ ಸಾಮರ್ಥ್ಯ ಇನ್ನೂ ಕುಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.



ಡಿವಿಲಿಯರ್ಸ್ ಅವರ ಈ ಅಂಕಿಅಂಶಗಳು ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಕೆಲವೇ ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಮತ್ತು ಸಿಕ್ಸರ್‌ಗಳ ಮೂಲಕ ಬೌಂಡರಿ ಗೆರೆ ದಾಟಿಸುವ ಅವರ ಸಾಮರ್ಥ್ಯ ಈಗಲೂ ಅಷ್ಟೇ ಪರಿಣಾಮಕಾರಿಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಹೀಗಾಗಿ, ಈ ಅನುಭವಿ ದಕ್ಷಿಣ ಆಫ್ರಿಕಾ ಬ್ಯಾಟರ್ ಐಪಿಎಲ್‌ಗೆ ಭರ್ಜರಿಯಾಗಿ ಮರಳುವ ಸಾಧ್ಯತೆ ಕುರಿತು ಕುತೂಹಲ ಹೆಚ್ಚಾಗಿದೆ.

ಐಪಿಎಲ್‌ ಮರಳಿದ ಎಂದ ಫ್ಯಾನ್ಸ್‌

ಆಸ್ಟ್ರೇಲಿಯಾ ಚಾಂಪಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ 6 ಬೌಂಡರಿಗಳು ಹಾಗೂ 11 ಸಿಕ್ಸರ್‌ಗಳೊಂದಿಗೆ ಭರ್ಜರಿ ಶತಕ ಬಾರಿಸಿದರು. ಆ ಮೂಲಕ 15.4 ಓವರ್‌ಗಳಿಗೆ 210 ರನ್‌ಗಳ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ಚೇಸ್‌ ಮಾಡಿತು. ಎಬಿಡಿ ಅವರ ಈ ಸ್ಪೋಟಕ ಇನಿಂಗ್ಸ್‌ನಿಂದಾಗಿ ಅವರನ್ನು ಫ್ಯಾನ್ಸ್‌ ಐಪಿಎಲ್‌ಗೆ ಆಹ್ವಾನಿಸುತ್ತಿದ್ದಾರೆ.

“ತಮಾಷೆ ಮಾಡುತ್ತಿಲ್ಲ, ಎಬಿ ಡಿವಿಲಿಯರ್ಸ್ ಈಗಿನ ಐಪಿಎಲ್ ಬೌಲರ್‌ಗಳ ವಿರುದ್ಧವೂ ಸುಲಭವಾಗಿ ಅಬ್ಬರಿಸಬಲ್ಲರು. ದಯವಿಟ್ಟು ಮತ್ತೆ ಐಪಿಎಲ್‌ಗೆ ಮರಳಿ, ನನ್ನ ನೆಚ್ಚಿನ ಆಟಗಾರನೇ!” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

IND vs WI 3rd T20I: ಶಿವಂ ದುಬೇ ಔಟ್‌? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

“ಎಬಿ ಡಿವಿಲಿಯರ್ಸ್ ಅವರೇ, ದಯವಿಟ್ಟು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ,” ಎಂದು ಮತ್ತೊಬ್ಬ ಅಭಿಮಾನಿ ಮನವಿ ಮಾಡಿದ್ದಾರೆ.

“ನಿಸ್ಸಂದೇಹವಾಗಿ, 42 ವರ್ಷದ ಎಬಿ ಡಿವಿಲಿಯರ್ಸ್ ಐಪಿಎಲ್ ಹರಾಜಿಗೆ ಪ್ರವೇಶಿಸಿದರೆ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಮೌಲ್ಯಯುತ ಆಟಗಾರ ಎನಿಸಿಕೊಳ್ಳಲಿದ್ದಾರೆ,” ಎಂದು ಮತ್ತೊಬ್ಬ ಅಭಿಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.