ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

28 ಎಸೆತಗಳಲ್ಲಿ 74 ರನ್‌ ಚಚ್ಚಿದ ಅಭಿಷೇಕ್‌ ಶರ್ಮಾ, ಪವರ್‌ಪ್ಲೇನಲ್ಲಿ ಮೂರನೇ ಗರಿಷ್ಠ ಮೊತ್ತ ದಾಖಲಿಸಿದ ಎಸ್‌ಆರ್‌ಎಚ್‌!

SRH vs PBKS: ಪಂಜಾಬ್‌ ಕಿಂಗ್ಸ್‌ ವಿರುದ್ದದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಐಪಿಎಲ್‌ ಇತಿಹಾಸದಲ್ಲಿಯೇ ಪವರ್‌ಪ್ಲೇನಲ್ಲಿ ಮೂರನೇ ಗರಿಷ್ಠ ಮೊತ್ತವನ್ನು ಕಲೆ ಹಾಕಿದೆ. ಇದಕ್ಕೆ ಕಾರಣ 28 ಎಸೆತಗಳಲ್ಲಿ 74 ರನ್‌ ಚಚ್ಚಿದ್ದ ಅಭಿಷೇಕ್‌ ಶರ್ಮಾ.

IPL: ಪವರ್‌ಪ್ಲೇನಲ್ಲಿ ಮೂರನೇ ಗರಿಷ್ಠ ಮೊತ್ತ ದಾಖಲಿಸಿದ ಎಸ್‌ಆರ್‌ಎಚ್‌!

28 ಎಸೆತಗಳಲ್ಲಿ 74 ರನ್‌ ಚಚ್ಚಿದ ಅಭಿಷೇಕ್‌ ಶರ್ಮಾ. -

Profile
Ramesh Kote Apr 11, 2026 5:50 PM

ಚಂಡೀಗಢ: ಅಭಿಷೇಕ್‌ ಶರ್ಮಾರ (Abhishek Sharma) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಇತಿಹಾಸದಲ್ಲಿಯೇ ಜಂಟಿ ಮೂರನೇ ಅತ್ಯಂತ ಗರಿಷ್ಠ ಮೊತ್ತವನ್ನು ಕಲೆ ಹಾಕಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಪವರ್‌ಪ್ಲೇನಲ್ಲಿಯೇ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 28 ಎಸೆತಗಳಲ್ಲಿ 74 ರನ್‌ ಚಚ್ಚಿದರು. ಆ ಮೂಲಕ ಸನ್‌ರೈಸರ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತು ಹಾಗೂ ಪಂಜಾಬ್‌ಗೆ 220 ರನ್‌ಗಳ ಗುರಿಯನ್ನು ನೀಡಿತು.

ಶನಿವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಎಸ್‌ಆರ್‌ಎಚ್‌ ಪರ, ಲೋಕಲ್‌ ಬಾಯ್‌ ಅಭಿಷೇಕ್‌ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಎಸ್‌ಆರ್‌ಎಚ್‌ ತಂಡ ಪವರ್‌ಪ್ಲೇನಲ್ಲಿ 105 ರನ್‌ಗಳನ್ನು ಕಲೆ ಹಾಕಿತ್ತು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿಯೇ ಪವರ್‌ಪ್ಲೇನಲ್ಲಿ ದಾಖಲಾದ ಜಂಟಿ ಮೂರನೇ ಗರಿಷ್ಠ ಮೊತ್ತವಾಗಿದೆ.

IPL 2026: ರಾಜಸ್ಥಾನ್‌ ವಿರುದ್ಧ ಸೋತರೂ ಚೆನ್ನೈ ಸೂಪರ್‌ ಕಿಂಗ್ಸ್‌ ದಾಖಲೆ ಸರಿಗಟ್ಟಿದ ಆರ್‌ಸಿಬಿ

ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಅವರ ಉದ್ದೇಶ ಸ್ಪಷ್ಟವಾಗಿತ್ತು. ಅವರು ಅರ್ಷದೀಪ್‌ ಸಿಂಗ್‌ ಅವರ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಖಾತೆಯನ್ನು ತೆರೆದಿದ್ದರು. ಇದಾದ ಬಳಿಕ ಕ್ಸಿವಿಯರ್‌ ಬಾರ್ಲೆಟ್‌ ಅವರನ್ನು ಕೂಡ ಅಭಿಷೇಕ್‌ ದಂಡಿಸಿದರು. ಇದರ ಪರಿಣಾಮವಾಗಿ ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳು ಪವರ್‌ಪ್ಲೇನಲ್ಲಿ ಒತ್ತಡಕ್ಕೆ ಒಳಗಾದರು. ತನ್ನ ಎರಡನೇ ಓವರ್‌ನಲ್ಲಿ ಅರ್ಷದೀಪ್‌ ಸಿಂಗ್‌ ಬರೋಬ್ಬರಿ 20 ರನ್‌ ನೀಡಿದ್ದರು. ಒಂದು ಕಡೆ ಅಭಿಷೇಕ್‌ ಶರ್ಮಾ ಮಿಂಚಿನ ಆಟವನ್ನು ಪ್ರದರ್ಶಿಸುತ್ತಿದ್ದರೆ. ಮತ್ತೊಂದು ತುದಿಯಲ್ಲಿ ಟ್ರಾವಿಸ್‌ ಹೆಡ್‌ ಸಾಥ್‌ ನೀಡುತ್ತಿದ್ದರು.



ಪಂಜಾಬ್‌ ಕಿಂಗ್ಸ್‌ ತಂಡ ಮಾರ್ಕೊ ಯೆನ್ಸನ್‌ಗೆ ಬೌಲಿಂಗ್‌ ನೀಡುವ ಮೂಲಕ ಹೈದರಾಬಾದ್‌ ತಂಡದ ರನ್‌ಗಳಿಗೆ ಕಡಿವಾಣ ಹಾಕಿತು. ಎತ್ತರದ ವೇಗಿಯನ್ನು ಸಮರ್ಥವಾಗಿ ಎದುರಿಸಿದ ಟ್ರಾವಿಸ್‌ ಹೆಡ್‌, ತಮ್ಮ ತಂಡಕ್ಕೆ ರನ್‌ ಗಳಿಕೆಯಲ್ಲಿ ಒತ್ತಡ ಉಂಟಾಗದಂತೆ ನೋಡಿಕೊಂಡರು. ನಂತರ ವೈಶಾಖ್‌ ವಿಜಯಕುಮಾರ್‌ ಅವರ ಎದುರು ಅಭಿಷೇಕ್‌ ಶರ್ಮಾ ಅಬ್ಬರಿಸಿದರು. ಅವರು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಕೇವಲ 18 ಎಸೆತಗಳಲ್ಲಿ ಅರ್ದಶತಕವನ್ನು ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ಸಿಕ್ಸರ್‌ ಭಾರಿಸಿ 50 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 20ಕ್ಕೂ ಕಡಿಮೆ ಎಸೆತಗಳಲ್ಲಿ ಐದು ಐಪಿಎಲ್‌ ಅರ್ಧಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಅಭಿಷೇಕ್‌ ಶರ್ಮಾ ಬರೆದಿದ್ದಾರೆ.

219 ರನ್‌ಗಳನ್ನು ಕಲೆ ಹಾಕಿದ ಎಸ್‌ಆರ್‌ಎಚ್‌

ಅಂದ ಹಾಗೆ ಅಭಿಷೇಕ್‌ ಶರ್ಮಾ ಅರ್ಧಶತಕದ ಬಲದಿಂದ ಸನ್‌ರೈಸರ್ಸ್‌ ಹೈದರಬಾದ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ಗೆ 220 ರನ್‌ಗಳ ಗುರಿಯನ್ನು ನೀಡಿತ್ತು.