AUS vs ENG: ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ!
ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ ಅವರು ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಾಬುಶೇನ್ ಆಡಿರಲಿಲ್ಲ. ಇದೀಗ ಮಹತ್ವದ ಟೆಸ್ಟ್ ಸರಣಿಗೆ ತಂಡಕ್ಕೆ ಬಂದಿದ್ದಾರೆ.
ಆಷಸ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ. -
ನವದೆಹಲಿ: ಇಂಗ್ಲೆಂಡ್ ವಿರುದ್ದದ ಆಷಸ್ (Ashes) ಟೆಸ್ಟ್ ಸರಣಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು (Australia) ಪ್ರಕಟಿಸಲಾಗಿದೆ. ಹಿರಿಯ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ (Marnus Labushagne) ಅವರು ದೀರ್ಘಾವಧಿ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾರ್ನಸ್ ಲಾಬುಶೇನ್ ಆಡಿರಲಿಲ್ಲ. ಇದೀಗ ಅವರು ಆಷಸ್‌ನಂತಹ ಮಹತ್ವದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಬಲ ಬಂದಂತಾಗಿದೆ. ಇತ್ತೀಚೆಗೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಕಲೆ ಹಾಕುವ ಮೂಲಕ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಓಪನಿಂಗ್ ಬ್ಯಾಟ್ಸ್‌ಮನ್ ಜೇಕ್ ವೆದರಾಲ್ಡ್ ಅವರು ನವೆಂಬರ್ 21 ರಿಂದ 25ರ ವರೆಗೆ ನಡೆಯುವ ಆರಂಭಿಕ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಮ್ಯಾಟ್ ರೆನ್ಷಾ ಹಾಗೂ ಸ್ಯಾಮ್ ಕೊನ್ಸ್ಟಸ್ ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಸ್ಮಾನ್ ಖವಾಜ ಅವರ ಜೊತೆ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.
21ರ ಪ್ರಾಯದ ಬ್ಯಾಟ್ಸ್‌ಮನ್ ವೆದರಾಲ್ಡ್ ಅವರು ಶೆಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಕಳೆದ ಬೇಸಿಗೆಯಲ್ಲಿ 50.33ರ ಸರಾಸರಿಯಲ್ಲಿ 906 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಈ ವರ್ಷದ ಮಧ್ಯೆದಲ್ಲಿ ಅವರು ಶ್ರೀಲಂಕಾ ಎ ವಿರುದ್ದ 906 ರನ್‌ಗಳನ್ನು ಕಲೆ ಹಾಕಿದ್ದರು. ಕೆಳ ಬೆನ್ನಿನ ಗಾಯದಿಂದ ಗುಣಮುಖರಾಗುತ್ತಿರುವ ಪ್ಯಾಟ್ ಕಮಿನ್ಸ್ ಅವರು ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗಾಗಿ ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ.
IND vs AUS: ಅರ್ಷದೀಪ್ ಸಿಂಗ್‌ಗೆ ನಿಯಮಿತವಾಗಿ ಚಾನ್ಸ್ ನೀಡದೆ ಇರಲು ಕಾರಣವೇನು?
ಆಸೀಸ್ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜಾಶ್ ಹೇಝಲ್‌ವುಡ್ ಅವರ ಗುಂಪಿಗೆ ಸ್ಕಾಟ್ ಬೋಲೆಂಡ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ಬ್ರೆಂಡನ್ ಡಾಗೆಟ್ ಹಾಗೂ ಶೇನ್ ಅಬಾಟ್ ಅವರು ಕೂಡ ಇದ್ದಾರೆ. ಆಲ್‌ರೌಂಡರ್ ಬೀ ವೆಬ್‌ಸ್ಟರ್ ಹಾಗೂ ಕ್ಯಾಮೆರಾನ್ ಗ್ರೀನ್ ಅವರು ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಸದ್ಯ ಆಸ್ಟ್ರೇಲಿಯಾ ತಂಡದ ಆಟಗಾರರಲ್ಲಿ ಕೆಲವರು ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಇನ್ನು ಕೆಲವರು ಭಾರತ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಆಡುತ್ತಿದ್ದಾರೆ. ಕ್ಯಾಮೆರಾನ್ ಗ್ರೀನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಷ್ಟರ ಮಟ್ಟಿಗೆ ಬೌಲ್ ಮಾಡುತ್ತಾರೆಂದು ಸೆಲೆಕ್ಟರ್‌ಗಳು ಮುಂದಿನ ವಾರ ವೀಕ್ಷಿಸಲಿದ್ದಾರೆ.
SQUAD: 15 of the very best vying for a spot in our first men's #Ashes XI.
— Cricket Australia (@CricketAus) November 5, 2025
Bring on November 21! pic.twitter.com/26WY0zmzKr
"ನಮ್ಮ 15 ಸದಸ್ಯರ ತಂಡದಲ್ಲಿ 14 ಮಂದಿ ಶೆಫೀಲ್ಡ್ ಶೀಲ್ಡ್‌ನ ಒಂದು ಸುತ್ತಿನ ಪಂದ್ಯವಾಡುತ್ತಿದ್ದಾರೆ, ಇನ್ನೂ ಕೆಲವು ಆಟಗಾರರ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಕ್ಯಾಮೆರಾನ್ ಗ್ರೀನ್ ಬೌಲಿಂಗ್ ಕ್ರೀಸ್‌ಗೆ ಮರಳುವುದು ಕೂಡ ಇದರಲ್ಲಿ ಒಂದು ಪ್ರಮುಖ ಅಂಶವಾಗಿದೆ," ಎಂದು ತಿಳಿಸಿದ ಆಯ್ಕೆದಾರ ಜಾರ್ಜ್ ಬೈಲಿ, "ನಾವು ಈ 14 ಆಟಗಾರರ ಪ್ರದರ್ಶನವನ್ನು ಪರಿಶೀಲಿಸುತ್ತೇವೆ, ಮಾಹಿತಿಯನ್ನು ಪಡೆಯುತ್ತೇವೆ ಮತ್ತು ನಂತರ ಪ್ಲೇಯಿಂಗ್ XI ಮೇಲೆ ಕೆಲಸ ಮಾಡುತ್ತೇವೆ," ಎಂದು ಅವರು ತಿಳಿಸಿದ್ದಾರೆ.
ಆಷಸ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್ (ನಾಯಕ), ಶೇನ್ ಅಬಾಟ್, ಸ್ಕಾಟ್ ಬೋಲೆಂಡ್, ಅಲೆಕ್ಟ್ ಕೇರಿ, ಬ್ರೆಂಡನ್ ಡಗೆಟ್, ಕ್ಯಾಮೆರಾನ್ ಗ್ರೀನ್, ಜಾಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ನೇಥನ್ ಲಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬೀ ವೆಬ್‌ಸ್ಟರ್