Viral Video: ರಸ್ತೆಯಲ್ಲೇ ಮಹಿಳೆಯ ದುಪಟ್ಟಾ ಎಳೆದು ಕಿಡಿಗೇಡಿಯ ಅಟ್ಟಹಾಸ- ವಿಡಿಯೊ ವೈರಲ್
Physical Abuse: ಮಹಿಳೆಯೊಬ್ಬರ ಮೇಲೆ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಗೋಮತಿನಗರದಲ್ಲಿ ನಡೆದಿದೆ. ಮಹಿಳೆಯ ಮೇಲೆ ಕೆಲವು ಪುರುಷರು ಹಲ್ಲೆ ನಡೆ ಸುತ್ತಿದ್ದು ಅದರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ಪುರುಷರು ಮಹಿಳೆಯ ದುಪಟ್ಟಾವನ್ನು ಎಳೆಯುತ್ತಿರುವ ದೃಶ್ಯವು ಕಂಡು ಬಂದಿದ್ದು ಮಹಿಳೆಯನ್ನು ಅಮಾನುಷ್ಯ ವಾಗಿ ನಡೆಸಿಕೊಂಡ ರೀತಿಗೆ ನೆಟ್ಟಿಗರು ಈ ವಿಡಿಯೋ ಬಗ್ಗೆ ಕಿಡಿಕಾರಿದ್ದಾರೆ.
ರಸ್ತೆಯಲ್ಲೇ ಮಹಿಳೆಯ ದುಪ್ಪಟ್ಟ ಎಳೆದು ಹಲ್ಲೆ -
ಲಖನೌ ಇತ್ತೀಚಿನ ದಿನದಲ್ಲಿ ಮಹಿಳೆಯ ಪರವಾಗಿ , ಆಕೆಯ ರಕ್ಷಣೆಗಾಗಿ ಕಾನೂನು ನಿಯಮಗಳು ಕಠಿಣವಾಗಿ ಜಾರಿಯಾಗುತ್ತಿದೆ. ಹಾಗಿದ್ದರೂ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆ, ಹಲ್ಲೆ ಮಾಡುವ ಪ್ರಮಾಣ ಹೆಚ್ಚುತ್ತಿರುವುದು ಆಘಾತಕಾರಿ ಅಂಶವಾಗಿದೆ. ಅಂತೆಯೇ ಮಹಿಳೆಯೊಬ್ಬರ ಮೇಲೆ ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಗೋಮತಿನಗರದಲ್ಲಿ (Uttar Pradesh's Gomtinagar) ನಡೆದಿದೆ. ಮಹಿಳೆಯ ಮೇಲೆ ಕೆಲವು ಪುರುಷರು ಹಲ್ಲೆ ನಡೆಸುತ್ತಿದ್ದು ಅದರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ (Viral Video). ಇಬ್ಬರು ಪುರುಷರು ಮಹಿಳೆಯ ದುಪಟ್ಟಾವನ್ನು ಎಳೆಯುತ್ತಿರುವ ದೃಶ್ಯವು ಕಂಡು ಬಂದಿದ್ದು ಮಹಿಳೆಯನ್ನು ಅಮಾನುಷವಾಗಿ ನಡೆಸಿಕೊಂಡ ರೀತಿಗೆ ನೆಟ್ಟಿಗರು ಈ ವಿಡಿಯೋ ಬಗ್ಗೆ ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ರಸ್ತೆಯ ಮಧ್ಯದಲ್ಲಿ ಮಹಿಳೆಯ ಮೇಲೆ ಸಾರ್ವಜನಿಕ ಹಲ್ಲೆ ನಡೆಸಿದ್ದ ದೃಶ್ಯಗಳನ್ನು ಕಾಣಬಹುದು. ಆ ವೇಳೆ ಅಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿದ್ದು ಅದೇ ಸಂದರ್ಭ ದಲ್ಲಿ ಉಳಿದ ಸಹ ಪ್ರಯಾಣಿಕರು ಮತ್ತು ಅಪರಿಚಿತರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಮಹಿಳೆಯನ್ನು ಬಲವಂತವಾಗಿ ಎಳೆದಾಡುತ್ತಿರುವ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ಪುರುಷರು ಮಹಿಳೆಯ ದುಪಟ್ಟಾವನ್ನು ಎಳೆ ಯುತ್ತಿದ್ದು ಮಹಿಳೆಯು ಕೂಡ ಕೂಗಾಡಿದ್ದಾಳೆ. ಬಳಿಕ ಒಬ್ಬಾತನು ಆಕೆಯ ಕೈ ಹಿಡಿದು ಎಳೆ ದಾಡಿದ್ದಾನೆ. ಅದೇ ವೇಳೆಗೆ ಕೆಲವೊಂದಿಷ್ಟು ಜನ ವಿಡಿಯೋ ಮಾಡುತ್ತಿದ್ದರೆ ಇನ್ನು ಕೆಲವೊಬ್ಬರು ಮಹಿಳೆ ಪರ ಮಾತನಾಡಿ ಪುರುಷರಿಗೆ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ:
ये यूपी का नया “रामराज” मॉडल है
— Pushpendra Saroj (@Pushpendra_MP_) November 5, 2025
जहाँ सड़क बीचो-बीच लड़की की इज्जत और सुरक्षा का live तमाशा होता है
और मुख्यमंत्री साहब का सिस्टम बस data व graph tweets में busy होता है।
लखनऊ के दिल गोमतीनगर में अगर लड़की की सुरक्षा ऐसे खुलेआम कुचली जा रही है…
तो गाँव देहात में क्या हाल हो रहा… pic.twitter.com/pFQrIX6apU
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೆ ಯುಪಿ ಪೊಲೀಸರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಘಟನೆಯೂ ಮೇಲ್ನೊಟ್ಟಕ್ಕೆ ಹಲ್ಲೆ ಎಂದು ಅನಿಸುತ್ತಿದ್ದರೂ ಅದು ಕೌಟುಂಬಿಕ ವಿಷಯದಿಂದ ಏರ್ಪಟ್ಟ ಜಗಳವಾಗಿದೆ' ಎಂದು ತಿಳಿಸಿದ್ದಾರೆ. ಹಾಗಿದ್ದರೂ ಘಟನೆಗೆ ನಿಖರ ಕಾರಣವನ್ನು ಪೊಲೀಸರು ತಿಳಿಸಲಿಲ್ಲ.
ಇದನ್ನೂ ಓದಿ: Viral Video: "ನೀವು ಶ್ರೇಷ್ಠರಂತೆ ನಟಿಸುವುದು ಬೇಡ"; ಭಾರತೀಯ ವ್ಯಕ್ತಿ ಮೇಲೆ ಜನಾಂಗೀಯ ದಾಳಿ, ವಿಡಿಯೋ ವೈರಲ್
ವರದಿಯೊಂದರ ಪ್ರಕಾರ, ಸಂಬಂಧ ಪಟ್ಟ ಮಹಿಳೆಯು ಕೌಟುಂಬಿಕ ಕಲಹದಿಂದಾಗಿ ಕೋಪ ಗೊಂಡು ಮನೆ ಬಿಟ್ಟು ಹೊರಟು ಹೋಗಿದ್ದರು. ಹೀಗಾಗಿ ಆಕೆಯನ್ನು ಮನೆಗೆ ವಾಪಾಸು ಬರುವಂತೆ ಕೋರಲಾಗಿದೆ. ವೀಡಿಯೊದಲ್ಲಿ ಮಹಿಳೆಯ ಸೋದರಳಿಯ ಅವಳನ್ನು ಮನೆಗೆ ಹೋಗುವಂತೆ ಬೇಡಿಕೊಳ್ಳುತ್ತಿದ್ದಾನೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ. ಆಕೆಯ ಸೋದರಳಿಯನ ಮನ ವೊಲಿಕೆಯ ನಂತರ ಆಕೆ ತನ್ನ ಕುಟುಂಬದೊಂದಿಗೆ ಮನೆಗೆ ಹೋದಳು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವೈರಲ್ ಆದ ವಿಡಿಯೋ ಬಗ್ಗೆ ನೆಟ್ಟಿಗರು ನಾನಾತರನಾಗಿ ಕಾಮೆಂಟ್ ಹಾಕಿದ್ದಾರೆ. ಪೊಲೀಸರು ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಪ್ರತಿಕ್ರಿಯೆ ನೀಡಿದ್ದು ಸತ್ಯಕ್ಕೆ ದೂರ ವಾದಂತಿದೆ. ಏನೆ ಆಗಿದ್ದರೂ ಅದನ್ನು ಪೊಲೀಸರು ಸೂಕ್ತ ತನಿಖೆ ಮಾಡಬೇಕಿತ್ತು, ಆ ಮಹಿಳೆಗೆ ನ್ಯಾಯ ಒದಗಿಸಬೇಕಿತ್ತು ಎಂದು ನೆಟ್ಟಿಗರೊಬ್ಬರು ವಿಡಿಯೋಗೆ ಕಾಮೆಂಟ್ ಹಾಕಿದ್ದಾರೆ.