ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ಲಿಟನ್‌ ದಾಸ್‌!

ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಲಿಟನ್ ದಾಸ್ ದಕ್ಷಿಣ ಆಫ್ರಿಕಾ ವಿರುದ್ಧದ ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆಗೆ ಭಾಜನರಾಗಿದ್ದಾರೆ. ಏಕೈಕ ಟೆಸ್ಟ್ ಇನಿಂಗ್ಸ್‌ನಲ್ಲಿ ವಿಕೆಟ್ ಕೀಪರ್ ಆಗಿ 8 ಬ್ಯಾಟ್ಸ್‌ಮನ್‌ಗಳ ಪತನಕ್ಕೆ ಕಾರಣರಾದ ಮೊದಲ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಲಿಟನ್‌ ದಾಸ್‌!

ವಿಕೆಟ್‌ ಕೀಪರ್‌ ಆಗಿ ವಿಶ್ವ ದಾಖಲೆ ಬರೆದ ಲಿಟನ್‌ ದಾಸ್‌. -

Profile
Ramesh Kote Nov 18, 2026 10:23 PM

ಜೋಹಾನ್ಸ್‌ಬರ್ಗ್‌: ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಲಿಟನ್ ದಾಸ್ (Litton Das) ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ(BAN vs SA) ಒಂದೇ ಇನಿಂಗ್ಸ್‌ನಲ್ಲಿ ಸ್ಟಂಪ್ಸ್‌ ಹಿಂದೆ 8 ಬ್ಯಾಟರ್‌ಗಳನ್ನು ಬಲಿ ಪಡೆದ ವಿಶ್ವದ ಮೊದಲ ವಿಕೆಟ್‌ ಕೀಪರ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಆ ಮೂಲಕ ಈ ಹಿಂದೆ ಐವರು ವಿಕೆಟ್ ಕೀಪರ್‌ಗಳು ಜಂಟಿಯಾಗಿ ಹೊಂದಿದ್ದ ದಾಖಲೆಯನ್ನು ಲಿಟನ್ ದಾಸ್ ಮುರಿದಿದ್ದಾರೆ. ವಸೀಂ ಬರಿ, ಬಾಬ್ ಟೇಲರ್, ಇಯಾನ್ ಸ್ಮಿತ್, ರಿಡ್ಲಿ ಜೇಕಬ್ಸ್ ಹಾಗೂ ಜೋಶುವಾ ಡಾ ಸಿಲ್ವಾ ತಲಾ 7 ಔಟ್‌ಗಳ ದಾಖಲೆಯನ್ನು ಹೊಂದಿದ್ದರು. 2023ರಲ್ಲಿ ಜೋಶುವಾ ಡಾ ಸಿಲ್ವಾ ಈ ಸಾಧನೆ ಮಾಡಿದ್ದರು.

ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಲಿಟನ್ ತಮ್ಮ ಎಂಟನೇ ಬ್ಯಾಟರ್‌ ಅನ್ನು ಔಟ್‌ ಮಾಡಿ ವಿಶ್ವ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಅವರು ಆರು ಕ್ಯಾಚ್‌ಗಳನ್ನು ಪಡೆದಿದ್ದರು ಹಾಗೂ ಮತ್ತೊಂದು ಸ್ಟಂಪ್‌ ಔಟ್‌ ಮಾಡಿದ್ದರು.

IND vs NZ: ಜಸ್‌ಪ್ರೀತ್‌ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್‌ ಲೇಥಮ್‌!

ಬ್ಯಾಟಿಂಗ್‌ನಲ್ಲೂ ಶತಕ ಸಿಡಿಸಿದ ಲಿಟನ್ ದಾಸ್

ಲಿಟನ್ ದಾಸ್ ಅವರ ಈ ಸಾಧನೆ ಮತ್ತಷ್ಟು ವಿಶೇಷವಾಗಿರುವುದಕ್ಕೆ ಕಾರಣ ಅವರ ಬ್ಯಾಟಿಂಗ್ ಪ್ರದರ್ಶನ. ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನಲ್ಲಿ ಅವರು 120 ರನ್‌ಗಳ ಅಮೋಘ ಶತಕ ಸಿಡಿಸಿದ್ದರು. ಆ ಮೂಲಕ ಒಂದೇ ಟೆಸ್ಟ್ ಇನಿಂಗ್ಸ್‌ನಲ್ಲಿ ಶತಕ ಬಾರಿಸುವುದರ ಜೊತೆಗೆ ವಿಕೆಟ್ ಕೀಪರ್ ಆಗಿ ಎಂಟು ಔಟ್‌ಗಳಲ್ಲಿ ಭಾಗಿಯಾದ ವಿಶ್ವದ ಮೊದಲ ಆಟಗಾರ ಎಂಬ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಲಿಟನ್ ಅವರ ಶತಕದ ನೆರವಿನಿಂದ ಬಾಂಗ್ಲಾದೇಶ 400 ರನ್‌ಗಳನ್ನು ಗಳಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ದಾಖಲಿಸಿದ ಅತ್ಯಧಿಕ ಮೊತ್ತವಾಗಿದೆ. 179 ಎಸೆತಗಳನ್ನು ಎದುರಿಸಿದ ಲಿಟನ್ 14 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 120 ರನ್ ಗಳಿಸಿದರು. ಆರನೇ ವಿಕೆಟ್‌ಗೆ ತೌಹಿದ್ ಹೃದಯ್ ಅವರೊಂದಿಗೆ 206 ರನ್‌ಗಳ ಮಹತ್ವದ ಜೊತೆಯಾಟವನ್ನೂ ಆಡಿದರು.

SMAT 2026: ಮನ್ವಂತ್‌ ಕುಮಾರ್‌ ದಾಳಿಗೆ ಮಿಜೋರಾಂ ತತ್ತರ, ಕರ್ನಾಟಕಕ್ಕೆ ಎರಡನೇ ಜಯ!

ಆರು ಕ್ಯಾಚ್, ಎರಡು ಸ್ಟಂಪಿಂಗ್!

ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಲಿಟನ್ ದಾಸ್ ಆರು ಕ್ಯಾಚ್‌ಗಳನ್ನು ಪಡೆದಿದ್ದರು. ಏಡೆನ್ ಮಾರ್ಕ್ರಾಮ್, ಜುಬೈರ್ ಹಮ್ಜಾ, ಮೈಕಲ್ ಬ್ರೆಟ್ಜ್ಕೆ, ವಿಯಾನ್ ಮಲ್ಡರ್, ಮಾರ್ಕೊ ಯೆನ್ಸನ್ ಹಾಗೂ ಸೈಮನ್ ಹಾರ್ಮರ್ ಅವರ ವಿಕೆಟ್‌ಗಳನ್ನು ಕ್ಯಾಚ್ ಮೂಲಕ ಪಡೆದಿದ್ದರು.

ನಾಲ್ಕನೇ ದಿನದ ಬೆಳಗ್ಗೆ ರಿಯಾನ್ ರಿಕೆಲ್ಟನ್ ಹಾಗೂ ಕಗಿಸೊ ರಬಾಡ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ತಮ್ಮ ಔಟ್‌ಗಳ ಸಂಖ್ಯೆಯನ್ನು ಎಂಟಕ್ಕೆ ಹೆಚ್ಚಿಸಿಕೊಂಡರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದರು.

IND vs NZ: ಜಸ್‌ಪ್ರೀತ್‌ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್‌ ಲೇಥಮ್‌!

ಎಬಿ ಡಿವಿಲಿಯರ್ಸ್ ದಾಖಲೆಯನ್ನೂ ಮೀರಿಸಿದ ಸಾಧನೆ

ಜೊಹಾನ್ಸ್‌ಬರ್ಗ್ ಮೈದಾನದಲ್ಲಿ ಈ ಹಿಂದೆ ಡೆನಿಸ್ ಲಿಂಡ್ಸೆ (1966) ಹಾಗೂ ಎಬಿ ಡಿವಿಲಿಯರ್ಸ್ (2013) ಒಂದೇ ಇನ್ನಿಂಗ್ಸ್‌ನಲ್ಲಿ ಶತಕದ ಜೊತೆಗೆ ಆರು ಡಿಸ್ಮಿಸಲ್‌ಗಳಲ್ಲಿ ಭಾಗಿಯಾಗಿದ್ದರು. ಇದೀಗ ಎಂಟು ಡಿಸ್ಮಿಸಲ್ ಹಾಗೂ ಶತಕದ ಸಾಧನೆಯೊಂದಿಗೆ ಲಿಟನ್ ದಾಸ್ ಈ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.

ಇತ್ತೀಚಿನ ಪಂದ್ಯಗಳಲ್ಲೂ ಲಿಟನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸುವುದರ ಜೊತೆಗೆ ವಿಕೆಟ್ ಕೀಪರ್ ಆಗಿ 9 ಬ್ಯಾಟರ್‌ಗಳನ್ನು ಔಟ್‌ ಭಾಗಿಯಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.