ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಎಎಸ್‌ ಧೋನಿ ಅನುಪಸ್ಥಿತಿಯಲ್ಲಿ ಸಿಎಸ್‌ಕೆಗೆ ಆಘಾತ, ರಾಜಸ್ಥಾನ್‌ ರಾಯಲ್ಸ್‌ ಶುಭಾರಂಭ!

CSK vs RR Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ರಾಜಸ್ಥಾನ್‌ ರಾಯಲ್ಸ್‌ ತಂಡ, ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಿಯಾನ್‌ ಪರಾಗ್‌ ನಾಯಕತ್ವದ ಆರ್‌ಆರ್‌ ಶುಭಾರಂಭ ಕಂಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌!

ಸಿಎಸ್‌ಕೆಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌. -

Profile
Ramesh Kote Mar 30, 2026 11:03 PM

ಗುವಾಹಟಿ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗದಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಆರಂಭಿಕ ಪಂದ್ಯದಲ್ಲಿ (RCB vs RR) ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇನ್ನು ಎಂಎಸ್‌ ಧೋನಿಯ (MS Dhoni) ಅನುಪಸ್ಥಿತಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಸಿಎಸ್‌ಕೆ, ತನ್ನ ಆರಂಭಿಕ ಪಂದ್ಯದಲ್ಲಿಯೇ ಸೋತು ನಿರಾಶೆ ಅನುಭವಿಸಿದೆ.

ಸೋಮವಾರ ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆದಿದ್ದ19ನೇ ಆವೃತ್ತಿಯ ಐಪಿಎಲ್‌ ಅತ್ಯಂತ ನೀರಸವಾಗಿತ್ತು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು ಹಾಗೂ 19.4 ಓವರ್‌ಗಳಿಗೆ 127 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌, ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಕೇವಲ 12.1 ಓವರ್‌ಗಳಿಗೆ 128 ರನ್‌ಗಳನ್ನು ಗಳಿಸಿ ಭರ್ಜರಿಯಾಗಿ ಗೆದ್ದು ಬೀಗಿತು. ಎರಡು ವಿಕೆಟ್‌ ಕಿತ್ತ ನಂಡ್ರೆ ಬರ್ಗರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2026: ಐಪಿಎಲ್‌ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್‌ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!

ಸಿಎಸ್‌ಕೆ ಬ್ಯಾಟಿಂಗ್‌ ವೈಫಲ್ಯ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಹೊಸ ಚೆಂಡಿನಲ್ಲಿ ಜೋಫ್ರಾ ಆರ್ಚರ್‌ ಹಾಗೂ ನಂಡ್ರೆ ಬರ್ಗರ್‌ ಪರಿಣಾಮಕಾರಿ ಬೌಲ್‌ ಮಾಡಿದ್ದರು. ಸಂಜು ಸ್ಯಾಮ್ಸನ್‌, ಋತುರಾಜ್‌ ಗಾಯಕ್ವಾಡ್‌ ಹಾಗೂ ಆಯುಷ್‌ ಮ್ಹಾತ್ರೆ ಅವರನ್ನು ಔಟ್‌ ಮಾಡಿದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವಿಭಾಗಕ್ಕೆ ಸಂದೀಪ್‌ ಶರ್ಮಾ, ರವೀಂದ್ರ ಜಡೇಜಾ ಹಾಗೂ ಬ್ರಿಜೇಶ ಶರ್ಮಾ ಶಾಕ್‌ ನೀಡಿದರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಪ್ರತಿರೋಧ ತೋರಿದ ಜೇಮಿ ಓವರ್ಟನ್‌ 36 ಎಸೆತಗಳಲ್ಲಿ 43 ರನ್‌ ಸಿಡಿಸಿದರು. ಇವರು ಸಿಎಸ್‌ಕೆ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆದರು. ಸರ್ಫರಾಝ್‌ ಖಾನ್‌ ಹಾಗೂ ಕಾರ್ತಿಕ್‌ ಶರ್ಮಾ ಕ್ರಮವಾಗಿ 17 ಮತ್ತು18 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.



ಆರ್‌ಆರ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ನಡ್ರೆ ಬರ್ಗರ್‌, ಜೋಫ್ರಾ ಆರ್ಚರ್‌ ಹಾಗೂ ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.

ವೈಭವ್‌ ಸೂರ್ಯವಂಶಿ ಸ್ಪೋಟಕ ಅರ್ಧಶತಕ

ಸುಲಭ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಅವರು ಮೊದಲನೇ ವಿಕೆಟ್‌ಗೆ 75 ರನ್‌ಗಳನ್ನು ಕಲೆ ಹಾಕಿದರು. ಸ್ಪೋಟಕ ಬ್ಯಾಟ್‌ ಮಾಡಿದ ವೈಭವ್‌, ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು ಹಾಗೂ ಅಂತಿಮವಾಗಿ 52 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್‌ 36 ಎಸೆತಗಳಲ್ಲಿ ಅಜೇಯ 38 ರನ್‌ ಗಳಿಸಿದರು. ಧ್ರುವ್‌ ಜುರೆಲ್‌ 18 ರನ್‌ ಹಾಗೂ ನಾಯಕ ರಿಯಾನ್‌ ಪರಾಗ್‌ ಅಜೇಯ 14 ರನ್‌ ಗಳಿಸಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅನ್ಷುಲ್‌ ಕಅಂಬೋಜ್‌ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಕಡಿಮೆ ಗುರಿಯನ್ನು ನೀಡಿದ್ದರ ಪರಿಣಾಮವಾಗಿ ಸಿಎಸ್‌ಕೆ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್‌ ಮಾಡಲು ಸಾಧ್ಯವಾಗಲಿಲ್ಲ.



ಸ್ಕೋರ್‌ ವಿವರ

ಚೆನ್ನೈ ಸೂಪರ್‌ ಕಿಂಗ್ಸ್‌: 19.4 ಓವರ್‌ಗಳಿಗೆ 127-10 (ಜೇಮಿ ಓವರ್ಟನ್‌ 43 ರನ್‌, ಕಾರ್ತಿಕ್‌ ಶರ್ಮಾ 18, ಸರ್ಫರಾಝ್‌ ಖಾನ್‌ 17; ನಂಡ್ರೆ ಬರ್ಗರ್‌ 26 ಕ್ಕೆ 2, ಜೋಫ್ರಾ ಆರ್ಚರ್‌ 19 ಕ್ಕೆ 2, ರವೀಂದ್ರ ಜಡೇಜಾ 18 ಕ್ಕೆ 2)

ರಾಜಸ್ಥಾನ್‌ ರಾಯಲ್ಸ್‌: 12.1 ಓವರ್‌ಗಳಿಗೆ 128-2 (ವೈಭವ್‌ ಸೂರ್ಯವಂಶಿ 52, ಯಶಸ್ವಿ ಜೈಸ್ವಾಲ್‌ 38*; ಅನ್ಷುಲ್‌ ಕಾಂಬೋಜ್‌ 27ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ನಂಡ್ರೆ ಬರ್ಗರ್‌