ಭಾರತದ ವಿರುದ್ಧ ಲಾರ್ಡ್ಸ್ ಟೆಸ್ಟ್‌ಗೆ 15 ಸದಸ್ಯರ ಇಂಗ್ಲೆಂಡ್ ಮಹಿಳಾ ತಂಡ ಪ್ರಕಟ!
England Test Sqaud: ಜುಲೈ 10 ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ನಡಯುವ ಮಹಿಳಾ ಟೆಸ್ಟ್ ಪಂದ್ಯಕ್ಕೆ 15 ಸದಸ್ಯರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೀವಿಯರ್ ಬ್ರಂಟ್ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಸಂಪೂರ್ಣ ತಂಡವನ್ನು ಇಲ್ಲಿ ವಿವರಿಸಲಾಗಿದೆ.
ಭಾರತದ ವಿರುದ್ಧ ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ಮಹಿಳಾ ತಂಡ. -
ನವದೆಹಲಿ: ಭಾರತ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ (INDW vs ENGW) 15 ಸದಸ್ಯರ ಇಂಗ್ಲೆಂಡ್ ಮಹಿಳಾ ತಂಡವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಮಂಡಳಿಯು (ECB) ಪ್ರಕಟಿಸಿದೆ. ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 10 ರಂದು ಇದೇ ಮೊದಲ ಬಾರಿ ಮಹಿಳಾ ಟೆಸ್ಟ್ ಪಂದ್ಯವನ್ನು ನಡೆಸಲಾಗುತ್ತಿದೆ. ಈ ಪಂದ್ಯದಲ್ಲಿ ಹಲವು ಆಟಗಾರ್ತಿಯರು ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಇದು ನಾಲ್ಕು ದಿನಗಳ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ನ್ಯಾಟ್ ಸೀವಿಯರ್ ಬ್ರಂಟ್ ( Nat Sciver-Brunt) ಅವರು ಮುನ್ನಡೆಸಲಿದ್ದಾರೆ.
ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸ್ಪರ್ಧೆಯಲ್ಲಿರುವ ಆಟಗಾರ್ತಿಯರ ಪೈಕಿ ಅಲೈಸ್ ಕಾಪ್ಸಿ, ಟಿಲ್ಲಿ ಕಾರ್ಟಿನ್ ಕೊಲೆಮನ್ ಮತ್ತು ಮ್ಯಾಡಿ ವಿಲಿಯರ್ಸ್ ಪ್ರಮುಖರಾಗಿದ್ದಾರೆ. ಇವರು ಈಗಾಗಲೇ ಇಂಗ್ಲೆಂಡ್ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಗ್ರೇಸ್ ಪಾಟ್ಸ್ ಹಾಗೂ ಎಲ್ಲೀ ಥ್ರೆಲ್ಕೆಲ್ಡ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಆಯ್ಕೆಯಾದರೆ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಪಡೆಯಲಿದ್ದಾರೆ.
ಇದೇ ವೇಳೆ, ಈ ಘೋಷಣೆಯು ಈಗಾಗಲೇ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಪಂದ್ಯಕ್ಕೆ ಮತ್ತಷ್ಟು ಮಹತ್ವವನ್ನು ತಂದಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ಲೇರ್ ಕಾನರ್ ಈ ಸಂದರ್ಭವನ್ನು ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯ ಮತ್ತೊಂದು ಮಹತ್ವದ ಹೆಜ್ಜೆಯೆಂದು ಬಣ್ಣಿಸಿದ್ದಾರೆ.
ICC ODI World Cup 2026: ಪಂತ್-ಕಿಶನ್ ನಡುವೆ ಸೂಕ್ತ ವಿಕೆಟ್ ಕೀಪರ್ ಅನ್ನು ಆರಿಸಿದ ಆರ್ ಅಶ್ವಿನ್!
ಈ ಅನುಭವವನ್ನು “ಅದ್ಭುತವಾದ ಸವಾಲಿನ ಅನುಭವ” ಎಂದು ವರ್ಣಿಸಿದ ಅವರು, ಮಹಿಳಾ ಕ್ರಿಕೆಟ್ ಕ್ರೀಡೆಯ ಅಭಿವೃದ್ಧಿ ಮತ್ತು ಜನಪ್ರಿಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಾವು ನ್ಯಾಟ್ ಸೀವರ್ ಬ್ರಂಟ್ ಅವರ ನಾಯಕತ್ವದಲ್ಲಿ ಬಲಿಷ್ಠ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದೇವೆ. ಮಹಿಳಾ ಕ್ರಿಕೆಟ್‌ಗೆ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಮತ್ತೊಮ್ಮೆ ಐತಿಹಾಸಿಕ ಕ್ಷಣಗಳು ಸಾಕ್ಷಿಯಾಗಲಿವೆ. ಮಹಿಳಾ ಕ್ರಿಕೆಟ್‌ನಲ್ಲಿ ಟೆಸ್ಟ್ ಪಂದ್ಯಗಳು ಅಪರೂಪದ ಹಾಗೂ ಅತ್ಯಂತ ಸವಾಲಿನ ಅನುಭವವಾಗಿದ್ದು, ಈ ಮಾದರಿಯಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸುವುದಕ್ಕೆ ನಮ್ಮ ಆಟಗಾರ್ತಿಯರು ಹೆಮ್ಮೆಪಡುತ್ತಾರೆ ಎಂಬುದು ನನಗೆ ತಿಳಿದಿದೆ. ಲಾರ್ಡ್ಸ್‌ನಲ್ಲಿ ಈ ಅನುಭವವನ್ನು ಮೊದಲ ಬಾರಿ ಸವಿಯುವ ಅವಕಾಶ ಪಡೆಯುವ 11 ಆಟಗಾರ್ತಿಯರಿಗೆ ಇದು ವೃತ್ತಿ ಜೀವನದ ಸ್ಮರಣೀಯ ಕ್ಷಣವಾಗಲಿದೆ,” ಎಂದು ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ಲೇರ್ ಕಾನರ್ ಹೇಳಿದ್ದಾರೆ.
ಏಕೈಕ ಭಾರತೀಯನಿಗೆ ಸ್ಥಾನ, ತಮ್ಮ ನಚ್ಚಿನ ಟೆಸ್ಟ್ ತಂಡದ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್!
ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ನ್ಯಾಟ್ ಸೀವರ್ ಬ್ರಂಟ್ ಅವರು ಈ ವಾರದ ಆರಂಭದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದರೂ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ತಂಡದ ಭಾಗವಾಗಿಯೇ ಮುಂದುವರಿದಿದ್ದು, ಆಯ್ಕೆಯಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 13ನೇ ಪಂದ್ಯವನ್ನು ಆಡುವ ಅವಕಾಶ ಪಡೆಯಲಿದ್ದಾರೆ.
Test Match squad just dropped 😍
— England Cricket (@englandcricket) June 18, 2026
A week in whites awaits on the 10th of July for the first ever Women's Test Match at Lord's!
ಇದೇ ವೇಳೆ ಅನುಭವದ ಆಧಾರದ ಮೇಲೆ ಮಾಜಿ ನಾಯಕಿ ಹೀದರ್ ನೈಟ್ ತಂಡಕ್ಕೆ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಪ್ರಸ್ತುತ ತಂಡದಲ್ಲಿರುವ ಆಟಗಾರ್ತಿಯರಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರ್ತಿಯಾಗಿರುವ ನೈಟ್, ಈ ಪಂದ್ಯದಲ್ಲಿ ಕಣಕ್ಕಿಳಿದರೆ ತಮ್ಮ 15ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ನ್ಯಾಟ್ ಸೀವರ್ ಬ್ರಂಟ್ (ನಾಯಕಿ), ಟಾಮಿ ಬಿಮೌಂಟ್, ಲಾರೆನ್ ಬೆಲ್, ಮಾಯಾ ಬೌಚಿಯರ್, ಅಲೈಸ್ ಕಾಪ್ಸಿ, ಟಿಲ್ಲಿ ಕಾರ್ಟಿನ್ ಕೊಲ್‌ಮನ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫಿಲರ್, ಎಮಿ ಜೋನ್ಸ್, ಹೀದರ್ ನೈಟ್, ಎಮ್ಮಾ ಲ್ಯಾಂಬ್, ಗ್ರೇಸ್ ಪಾಟ್ಸ್, ಎಲ್ಲೀ ಥ್ರೆಲ್ಕೆಲ್ಡ್, ಮ್ಯಾಡಿ ವಿಲಿಯರ್ಸ್, ಇಸ್ಸಿ ವಾಂಗ್