IND vs ENG: ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಟೀಮ್ ಇಂಡಿಯಾ!
IND vs ENG 2nd T20I Highlights: ಜೇಕಬ್ ಬೆಥೆಲ್ ಅವರ ಸ್ಟೋಟಕ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ಭಾರತದ ಎದುರು 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟಿ20ಐ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಎದುರು ಭಾರತ ತಂಡಕ್ಕೆ 4 ವಿಕೆಟ್ ಸೋಲು. -
ಮ್ಯಾಂಚೆಸ್ಟರ್: ಅರ್ಷದೀಪ್ ಸಿಂಗ್ ಪರಿಣಾಮಕಾರಿ ಬೌಲಿಂಗ್ ಹೊರತಾಗಿಯೂ ಇಂಗ್ಲೆಂಡ್ ತಂಡ, ಜೇಕಬ್ ಬೆಥೆಲ್ (Jacob Bethel) ಅವರ ಅಬ್ಬರದ ಅರ್ಧಶತಕದ ಬಲದಿಂದ ಭಾರತದ ಎದುರು ಎರಡನೇ ಟಿ20ಐ ಪಂದ್ಯದಲ್ಲಿ (IND vs ENG) 4 ವಿಕೆಟ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಆಂಗ್ಲರು 1-0 ಮುನ್ನಡೆಯನ್ನು ಪಡೆದಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡ ಇದೀಗ ಮೂರನೇ ಸೋಲು ಅನುಭವಿಸಿದಂತಾಯಿತು. ಇಂಗ್ಲೆಂಡ್ ಚೇಸಿಂಗ್‌ನಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ಬೆಥೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶನಿವಾರ ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ಭಾರತ ನೀಡಿದ್ದ 191 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ಗೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಅರ್ಷದೀಪ್ ಸಿಂಗ್ ಮೊದಲನೇ ಓವರ್‌ನಲ್ಲಿಯೇ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಅವರನ್ನು ಡಕ್‌ಔಟ್ ಮಾಡಿದ್ದರು. ಆ ಮೂಲಕ ಆಂಗ್ಲರ ಕೇವಲ ಒಂದು ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದರು.
IND vs ENG: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸಚಿನ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿದ ಜೇಕಬ್ ಬೆಥೆಲ್
ಮೂರನೇ ವಿಕೆಟ್‌ಗೆ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆಥೆಲ್ 50 ರನ್‌ಗಳ ಜೊತೆಯಾಟವನ್ನು ಆಡಿದರು. ಬ್ರೂಕ್ ( 39 ರನ್, 15 ಎಸೆತಗಳು) ಅಬ್ಬರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದಿದ್ದ ಟಾಮ್ ಬ್ಯಾಂಟನ್ 39 ರನ್ ಗಳಿಸಿದ ಬಳಿಕ ವಿಕೆಟ್ ಕೈ ಚೆಲ್ಲಿದರು. ವಿಲ್ ಜ್ಯಾಕ್ಸ್ ಹಾಗೂ ಸ್ಯಾಮ್ ಕರನ್ ನಿಲ್ಲಲಿಲ್ಲ. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್ ಮಾಡಿದ ಜೇಕಬ್ ಬೆಥೆಲ್, ಕೇವಲ 46 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲ್ಲಿಸಿದರು. ಇಂಗ್ಲೆಂಡ್ 19 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಗೆದ್ದು ಬೀಗಿತು.
England win by 4 wickets in Manchester#TeamIndia will look to turn things around in the 3rd T20I in Trent Bridge
— BCCI (@BCCI) July 4, 2026
Scorecard ▶️ https://t.co/WYfL8tAm58 #ENGvIND pic.twitter.com/2KZN6H39DR
ಪಂದ್ಯದ ಗತಿ ಬದಲಿಸಿದ ರವಿ ಬಿಷ್ಣೋಯ್ ದುಬಾರಿ ಓವರ್
ಒಂದು ಹಂತದಲ್ಲಿ ಭಾರತ ತಂಡ 133 ರನ್ ಗಳಿಸಿ 5 ವಿಕೆಟ್ ಕಬಳಿಸಿ ಗೆಲುವಿನ ಹಾದಿಯಲ್ಲಿತ್ತು. ಕೊನೆಯ 24 ಎಸೆತಗಳಲ್ಲಿ ಇಂಗ್ಲೆಂಡ್‌ಗೆ 49 ರನ್ ಅಗತ್ಯವಿತ್ತು. ಆದರೆ, 17ನೇ ಓವರ್‌ನಲ್ಲಿ ರವಿ ಬಿಷ್ಣೋಯ್ 29 ರನ್ ನೀಡಿದರು. ಇಲ್ಲಿ ಪಂದ್ಯ ಇಂಗ್ಲೆಂಡ್ ಪರ ತಿರುಗಿತು. ಬಿಷ್ಣೋಯ್ 4 ಓವರ್‌ಗಳಿಗೆ 60 ರನ್ ನೀಡಿ ದುಬಾರಿಯಾದರು. ಅರ್ಷದೀಪ್ ಸಿಂಗ್ 3 ವಿಕೆಟ್ ಕಿತ್ತರು.
190 ರನ್ ಕಲೆ ಹಾಕಿದ ಭಾರತ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ, ಸ್ಯಾಮ್ ಕರನ್ ಅವರ ಪರಿಣಾಮಕಾರಿ ಬೌಲಿಂಗ್ ಹೊರತಾಗಿಯೂ ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರು ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 191 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.
Innings Break!
— BCCI (@BCCI) July 4, 2026
Crucial contributions from the batters propel #TeamIndia to 1⃣9⃣0⃣ 🎯
Over to the bowlers 🙌
Scorecard ▶️ https://t.co/WYfL8tAm58 #ENGvIND pic.twitter.com/lW36pZnDVR
ಚೊಚ್ಚಲ ಪಂದ್ಯದಲ್ಲಿ ವೈಭವ್ ವಿಫಲ
ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಚೊಚ್ಚಲ ಅವಕಾಶ ಪಡೆದ ವೈಭವ್ ಸೂರ್ಯವಂಶಿ, ಎರಡು ಸಿಕ್ಸರ್ ಬಾರಿಸಿದರೂ 14 ರನ್‌ಗಳ ಬಳಿಕ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಅವರು ಕೇವಲ 24 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 43 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರು.
ಅಯ್ಯರ್-ಕಿಶನ್ ಅರ್ಧಶತಕದ ಜೊತೆಯಾಟ
ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಕೆಲ ಕಾಲ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಅವರು 42 ಎಸೆತಗಳಲ್ಲಿ 65 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 130 ರನ್ ಗಡಿಸಿದರು. ಒಂದು ಹಂತದಲ್ಲಿ ಕೇವಲ 22 ಎಸೆತಗಳಲ್ಲಿ 37 ರನ್ ಗಳಿಸಿ ಭರ್ಜರಿ ಆರಂಭ ಪಡೆದಿದ್ದ ಶ್ರೇಯಸ್, ಅದೇ ವೇಗದಲ್ಲಿ ಆಡಲು ಹೋಗಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
💯 up for #TeamIndia
— BCCI (@BCCI) July 4, 2026
Captain Shreyas Iyer and Ishan Kishan keeping the scoreboard ticking 📈
Updates ▶️ https://t.co/WYfL8tAm58 #ENGvIND pic.twitter.com/WAtgYnFaFk
ಶಿವಂ ದುಬೇ ನಿರಾಶೆ ಮೂಡಿಸಿದರು. ಆದರೆ, ಇಶಾನ್ ಕಿಶನ್ ಒಂದು ತುದಿಯಲ್ಲಿ ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 40 ಎಸೆತಗಳಲ್ಲಿ 49 ರನ್ ಗಳಿಸಿ ಔಟ್ ಆದರು. ಆದರೆ, ಕೊನೆಯಲ್ಲಿ ತಿಲಕ್ ವರ್ಮಾ 218.18ರ ಸ್ಟ್ರೈಕ್ ರೇಟ್‌ನಲ್ಲಿ 11 ಎಸೆತಗಳಲ್ಲಿ ಅಜೇಯ 24 ರನ್ ಚಚ್ಚಿದರು. ಆ ಮೂಲಕ ತಂಡದ ಮೊತ್ತವನ್ನು 190ಕ್ಕೆ ಏರಿಸಿದರು. ಇಂಗ್ಲೆಂಡ್ ತಂಡದ ಪರ ಸ್ಯಾಮ್ ಕರನ್ 3 ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 190-7 (ಅಭಿಷೇಕ್ ಶರ್ಮಾ 43 ರನ್, ಇಶಾನ್ ಕಿಶನ್ 49, ಶ್ರೇಯಸ್ ಅಯ್ಯರ್ 37; ಸ್ಯಾಮ್ ಕರನ್ 33 ಕ್ಕೆ 3, ವಿಲ್ ಜ್ಯಾಕ್ಸ್ 22 ಕ್ಕೆ 1)
ಇಂಗ್ಲೆಂಡ್: 19 ಓವರ್‌ಗಳಿಗೆ 191-6 (ಜೇಕಬ್ ಬೆಥೆಲ್ 76*, ಹ್ಯಾರಿ ಬ್ರೂಕ್ 39, ಟಾಮ್ ಬ್ಯಾಂಟನ್ 39; ಅರ್ಷದೀಪ್ ಸಿಂಗ್ 40ಕ್ಕೆ 3, ಅಕ್ಷರ್ ಪಟೇಲ್ 20ಕ್ಕೆ 1)