ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಭಿಷೇಕ್‌ ಶರ್ಮಾರನ್ನು ಕೂರಿಸಿ ವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿ ಎಂದ ಆಕಾಶ್‌ ಚೋಪ್ರಾ!

ಜಪಾನ್ ವಿರುದ್ಧದ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬದಲು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಹಾಗೂ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. ಸೆಪ್ಟಂಬರ್‌ 22 ರಂದು ಭಾರತ ಹಾಗೂ ಜಪಾನ್‌ ತಂಡಗಳು ಮೊದಲ ಬಾರಿ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ಜಪಾನ್‌ ಎದುರು ವೈಭವ್‌ಗೆ ಚಾನ್ಸ್‌ ನೀಡಿ ಎಂದ ಆಕಾಶ್‌ ಚೋಪ್ರಾ!

ವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿ ಎಂದ ಆಕಾಶ್‌ ಚೋಪ್ರಾ. -

Profile
Ramesh Kote Sep 21, 2026 5:10 PM

ನವದಹೆಲಿ: ಜಪಾನ್ ವಿರುದ್ಧದ ಐತಿಹಾಸಿಕ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವಂತೆ ಮಾಜಿ ಭಾರತ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಸಲಹೆ ನೀಡಿದ್ದಾರೆ. ಸೆಪ್ಟೆಂಬರ್ 22ರಂದು ಭಾರತ ಹಾಗೂ ಜಪಾನ್ (IND vs JAP) ನಡುವೆ ಏಕೈಕ ಟಿ20ಐ ಪಂದ್ಯ ನಡೆಯಲಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಪಂದ್ಯ ಆಯೋಜಿಸಲಾಗಿದೆ. ಮುಂಬರುವ ಏಷ್ಯನ್ ಗೇಮ್ಸ್‌ಗೂ ಈ ಪಂದ್ಯ ಸಿದ್ಧತೆಯ ಭಾಗವಾಗಲಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.

ಜಪಾನ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ವೈಭವ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಮತ್ತೊಂದೆಡೆ, ಅಂತಿಮ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಶತಕ ಸಿಡಿಸಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಸಂಜು ಸ್ಯಾಮ್ಸನ್ ಜೊತೆ ಅಭಿಷೇಕ್ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ವೈಭವ್‌ ಸೂರ್ಯವಂಶಿಗೆ ದೊಡ್ಡ ಭವಿಷ್ಯವಿದೆ, ಈಗಲೇ ಒತ್ತಡ ಹಾಕಬೇಡಿ ಎಂದ ಸನತ್‌ ಜಯಸೂರ್ಯ!

“ಮತ್ತೊಮ್ಮೆ ಹೇಳುವುದಾದರೆ, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡುವ ಬಗ್ಗೆ ಯೋಚಿಸಬಹುದು. ‘ಅಭಿಷೇಕ್ ಈ ಪಂದ್ಯವನ್ನು ಆಡದಿರಲಿ, ಪರವಾಗಿಲ್ಲ. ನೀವು ಏಷ್ಯನ್ ಗೇಮ್ಸ್‌ನಲ್ಲಿ ಆಡಲು ಸಿದ್ಧವಾಗಿ’ ಎಂದು ಹೇಳಬಹುದು. ಅವರ ಬದಲಿಗೆ ಸಂಜು ಸ್ಯಾಮ್ಸನ್ ಜೊತೆ ಆರಂಭಿಕರಾಗಿ ವೈಭವ್ ಅವರನ್ನು ಕಣಕ್ಕಿಳಿಸಬಹುದು. ಈ ಒಂದು ಬದಲಾವಣೆಯನ್ನು ಖಂಡಿತವಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ಆಖಾಶ್‌ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಿ: ಚೋಪ್ರಾ

ಇದರ ಜೊತೆಗೆ ಜಸ್‌ಪ್ರಿತ್ ಬುಮ್ರಾಗೂ ಜಪಾನ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಬೇಕು ಎಂದು ಚೋಪ್ರಾ ಸಲಹೆ ನೀಡಿದ್ದಾರೆ. ಏಷ್ಯನ್ ಗೇಮ್ಸ್‌ಗೆ ಬುಮ್ರಾ ತಂಡದ ಭಾಗವಾಗಿರುವುದರಿಂದ, ಆ ಟೂರ್ನಿಗೆ ಆದ್ಯತೆ ನೀಡಬೇಕು. ಜಪಾನ್ ವಿರುದ್ಧದ ಪಂದ್ಯದಲ್ಲಿ ಇತರ ಬೌಲರ್‌ಗಳು ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ರಿಷಭ್‌ ಪಂತ್‌ ಏಕದಿನ ಕ್ರಿಕೆಟ್‌ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ!

“ಜಸ್‌ಪ್ರಿತ್ ಬುಮ್ರಾ ಕೂಡ ಏಷ್ಯನ್ ಗೇಮ್ಸ್ ತಂಡದ ಭಾಗವಾಗಿದ್ದಾರೆ. ಈ ಪಂದ್ಯದಲ್ಲಿ ನಾನು ಬುಮ್ರಾಗೆ ಆಡಿಸುವುದಿಲ್ಲ. ‘ಇತರ ಬೌಲರ್‌ಗಳು ಆಡಲಿ’ ಎಂದು ನಾನು ಹೇಳುತ್ತೇನೆ,” ಎಂದು ಚೋಪ್ರಾ ತಿಳಿಸಿದ್ದಾರೆ.

ಜಪಾನ್ ವಿರುದ್ಧದ ಟಿ20 ಪಂದ್ಯಕ್ಕೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್ (ನಾಯಕ), ಶಿವಂ ದುಬೆ, ಇಶಾನ್ ಕಿಶನ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಯಶ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ವಿಪ್ರಜ್ ನಿಗಮ್, ವೈಭವ್ ಸೂರ್ಯವಂಶಿ