ರಿಷಭ್ ಪಂತ್ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್ ಚೋಪ್ರಾ!
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ರಿಷಭ್ ಪಂತ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಆದರೆ ಇದೇ ವೇಳೆ, ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕನಾಗಿ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಂತ್ ಅವರಿಗೆ ನೀಡಲಾಗಿದೆ.
ರಿಷಭ್ ಪಂತ್ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಆಕಾಶ್ ಚೋಪ್ರಾ ಹೇಳಿಕೆ. -
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ರಿಷಭ್ ಪಂತ್ (Rishabh Pant) ಅವರ ವೈಟ್-ಬಾಲ್ ಕ್ರಿಕೆಟ್‌ನ ತಕ್ಷಣದ ಭವಿಷ್ಯದ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಪಂತ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವವನ್ನು ಅವರಿಗೆ ವಹಿಸಲಾಗಿದೆ.
ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಮಾತನಾಡಿದ ಆಕಾಶ್ ಚೋಪ್ರಾ, ವಿವಿಧ ಮಾದರಿಗಳಲ್ಲಿ ಪಂತ್ ಅವರಿಗೆ ನೀಡಲಾಗುತ್ತಿರುವ ವಿಭಿನ್ನ ಜವಾಬ್ದಾರಿಗಳನ್ನು ಉಲ್ಲೇಖಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಇನ್ನೂ ಪ್ರಮುಖ ಆಟಗಾರರಾಗಿದ್ದಾರೆ ಎಂಬುದು ಸ್ಪಷ್ಟವಾಗಿದ್ದರೂ, ಏಕದಿನ ತಂಡದಲ್ಲಿ ಅವರ ಸ್ಥಾನಮಾನ ಬದಲಾಗಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದರು.
“ರಿಷಭ್ ಪಂತ್ ಅವರ ಪ್ರಕರಣ ತುಂಬಾ ವಿಚಿತ್ರ ಹಾಗೂ ವಿಶಿಷ್ಟವಾಗಿದೆ. ಅವರು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ರೆಡ್-ಬಾಲ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಆದರೆ ಅಲ್ಲಿ ಅವರ ಉಪನಾಯಕನ ಜವಾಬ್ದಾರಿಯನ್ನೂ ತೆಗೆದುಹಾಕಲಾಗಿದೆ. ಮತ್ತೊಂದೆಡೆ, ಏಕದಿನ ಕ್ರಿಕೆಟ್‌ನಲ್ಲಿ ಯಾವುದೇ ಪಂದ್ಯ ಆಡದೇ ಇದ್ದರೂ ಅವರನ್ನು ತಂಡದಿಂದ ಕೈಬಿಡಲಾಗಿದೆ,” ಎಂದು ಆಕಾಶ್ ಚೋಪ್ರಾ ಜಿಯೊ ಸ್ಟಾರ್‌ಗೆ ತಿಳಿಸಿದ್ದಾರೆ.
200 ಒಡಿಐ ವಿಕೆಟ್ ಕಿತ್ತು ಶೇನ್ ವಾರ್ನ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಆಡಮ್ ಝಾಂಪ!
“ಅದೇ ಸಮಯದಲ್ಲಿ ಅವರನ್ನು ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕನನ್ನಾಗಿ ಮಾಡಲಾಗಿದೆ. ಇದರಿಂದ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಪಂತ್ ದೊಡ್ಡ ಪಾತ್ರ ವಹಿಸಬೇಕು ಎಂಬುದರ ಬಗ್ಗೆ ತಂಡದ ಆಡಳಿತ ಗಂಭೀರವಾಗಿದೆ ಎಂಬುದು ತಿಳಿಯುತ್ತದೆ. ಆದರೆ ವೈಟ್-ಬಾಲ್ ಕ್ರಿಕೆಟ್ ವಿಚಾರದಲ್ಲಿ ಸದ್ಯಕ್ಕೆ ಈ ಆಯ್ಕೆ ಸಮಿತಿ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ನನಗೆ ಅನಿಸುತ್ತದೆ,” ಎಂದು ಅವರು ಹೇಳಿದ್ದಾರೆ.
ಪಂತ್ ಅವರು 50 ಓವರ್‌ಗಳ ತಂಡದಲ್ಲಿ ಎಂದಿಗೂ ಖಾಯಂ ಸದಸ್ಯರಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಕೇವಲ ಒಂದು ಏಕದಿನ ಪಂದ್ಯವನ್ನಷ್ಟೇ ಆಡಿದ್ದಾರೆ. 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಅವರನ್ನು ಟಿ20 ತಂಡದಿಂದಲೂ ಹೊರಗಿಡಲಾಗಿತ್ತು.
2027ರ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತ ಸಿದ್ಧತೆ ಆರಂಭಿಸಿರುವ ಸಂದರ್ಭದಲ್ಲೇ ಪಂತ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಟೆಸ್ಟ್ ಪದಾರ್ಪಣೆಯ ರಾಹುಲ್ ದ್ರಾವಿಡ್ ಸಂದೇಶವನ್ನು ನಿರಾಕರಿಸಿದ್ದ ಆಕಾಶ್ ದೀಪ್!
ಏಕದಿನ ತಂಡದಲ್ಲಿ ಧ್ರುವ್ ಜುರೆಲ್ ವಿಕೆಟ್‌ಕೀಪಿಂಗ್ ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ. ಶ್ರೇಯಸ್ ಅಯ್ಯರ್ ಬದಲಿಗೆ ಕೆ.ಎಲ್. ರಾಹುಲ್ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ. ಶ್ರೇಯಸ್ ಅಯ್ಯರ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಭಿಯಾನದ ಭಾಗವಾಗಲಿದ್ದಾರೆ. ವಿಶ್ವಕಪ್‌ಗೂ ಮುನ್ನ ತಂಡದಲ್ಲಿ ಹೆಚ್ಚಿನ ಆಯ್ಕೆಗಳನ್ನು ಹೊಂದುವ ಉದ್ದೇಶದಿಂದ ನಡೆಯುತ್ತಿರುವ ಪೈಪೋಟಿಯ ಬಗ್ಗೆಯೂ ಚೋಪ್ರಾ ಗಮನ ಸೆಳೆದಿದ್ದಾರೆ.
“ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರರಾಗಿ ಯಾರನ್ನು ಕರೆದೊಯ್ಯಬಹುದು ಎಂಬುದನ್ನೂ ನೀವು ಯೋಚಿಸಬೇಕು. ಇಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ನಡುವೆ ಪೈಪೋಟಿ ಇರಲಿದೆ. ಇಬ್ಬರೂ ಈ ತಂಡದ ಭಾಗವಾಗಿದ್ದಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಸಾಕಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ನಾನು ನೋಡುತ್ತಿದ್ದೇನೆ,” ಎಂದು ಚೋಪ್ರಾ ಹೇಳಿದ್ದಾರೆ.
ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ; ತಾವು ಎದುರಿಸಿದ ಭಾರತದ ಅತ್ಯಂತ ಕಠಿಣ ಬ್ಯಾಟರ್ ಆರಿಸಿದ ಪ್ಯಾಟ್ ಕಮಿನ್ಸ್!
“ಆಕಿಬ್ ನಬಿ ಕೆಲ ಸಮಯದಿಂದ ತಂಡದೊಂದಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿಲ್ಲ. ಅವರಿಗೆ ಅವಕಾಶ ಸಿಕ್ಕರೆ, ಅವರ ಪ್ರದರ್ಶನವನ್ನು ನೋಡಲು ನಾನು ಸಾಕಷ್ಟು ಉತ್ಸುಕನಾಗಿರುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27ರಂದು ತಿರುವನಂತಪುರಂನಲ್ಲಿ ಆರಂಭವಾಗಲಿದೆ. ಬಳಿಕ ಸೆಪ್ಟೆಂಬರ್ 30ರಂದು ಗುವಾಹಟಿ ಮತ್ತು ಅಕ್ಟೋಬರ್ 3ರಂದು ನವ ಚಂಡೀಗಢದಲ್ಲಿ ಪಂದ್ಯಗಳು ನಡೆಯಲಿವೆ.