ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs NZ: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸನತ್‌ ಜಯಸೂರ್ಯ!

15ರ ವಯಸ್ಸಿನ ವೈಭವ್ ಸೂರ್ಯವಂಶಿಗೆ ಸ್ವಾಭಾವಿಕ ಆಟವಾಡಲು ಭಾರತ ತಂಡ ಸ್ವಾತಂತ್ರ್ಯ ನೀಡಬೇಕು ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಸಲಹೆ ನೀಡಿದ್ದಾರೆ. ಈ ಯುವ ಆಟಗಾರ ಭವಿಷ್ಯದ ದೃಷ್ಟಿಯಿಂದ ಉತ್ತಮ ಹೂಡಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಸನತ್‌ ಜಯಸೂರ್ಯ ದೊಡ್ಡ ಭವಿಷ್ಯ!

ವೈಭವ್‌ ಸೂರ್ಯವಂಶಿ ಬಗ್ಗೆ ಸನತ್‌ ಜಯಸೂರ್ಯ ದೊಡ್ಡ ಹೇಳಿಕೆ. -

Profile
Ramesh Kote Oct 31, 2026 12:55 PM

ನವದೆಹಲಿ: ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi) ಅವರಿಗೆ ಯಾವುದೇ ಒತ್ತಡ ಹೇರದೆ ಸ್ವಾಭಾವಿಕ ಆಟವಾಡಲು ಅವಕಾಶ ನೀಡಬೇಕು ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ (Sanath Jaysuriya) ಸಲಹೆ ನೀಡಿದ್ದಾರೆ. 15ರ ವಯಸ್ಸಿನ ಈ ಪ್ರತಿಭಾವಂತ ಆಟಗಾರ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಉತ್ತಮ ಹೂಡಿಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಈ ಯುವ ಆಟಗಾರನ ಪ್ರತಿಭೆಯನ್ನು ಸರಿಯಾಗಿ ಬೆಳೆಸುವುದು ಮತ್ತು ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಮುಕ್ತವಾಗಿ ಪ್ರದರ್ಶಿಸಲು ಅವಕಾಶ ನೀಡುವುದು ಅತ್ಯಂತ ಮುಖ್ಯ ಎಂದು ಜಯಸೂರ್ಯ ಹೇಳಿದ್ದಾರೆ.

ಭಾರತೀಯ ಸಾಫ್ಟ್‌ಬಾಲ್ ಕ್ರಿಕೆಟ್ ಲೀಗ್‌ನ ಮುಂಬೈ ರಾಯಲ್ಸ್ ಮತ್ತು ಮಹಾರಾಷ್ಟ್ರ ಸೂಪರ್ ಸ್ಟ್ರೈಕರ್ಸ್ ತಂಡಗಳ ಜೆರ್ಸಿ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಭವ್ ಸೂರ್ಯವಂಶಿ ಇನ್ನೂ ಬಹಳ ದೂರ ಸಾಗಬೇಕಿದೆ. ಆದರೆ ಅವರಲ್ಲಿ ಸಾಕಷ್ಟು ಪ್ರತಿಭೆ ಮತ್ತು ಭರವಸೆ ಇದೆ ಎಂದು ತಿಳಿಸಿದ್ದಾರೆ.

IND vs NZ: ನಾಲ್ಕನೇ ಟಿ20ಐ ಪಂದ್ಯದ ಸೋಲಿಗೆ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ತಿಳಿಸಿದ ಶ್ರೇಯಸ್‌ ಅಯ್ಯರ್‌!

"ವೈಭವ್ ಇನ್ನೂ ಬಹಳ ದೂರ ಸಾಗಬೇಕಿದೆ. ಆದರೆ ಅವರು ಭಾರತದ ಭವಿಷ್ಯದ ಉತ್ತಮ ಆಟಗಾರ. ಅವರಿಗೆ ಸ್ವಾಭಾವಿಕ ಆಟವಾಡಲು ಅವಕಾಶ ನೀಡಿ. ತಮ್ಮ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಬಿಡಿ. ಇದು ಭಾರತೀಯ ಕ್ರಿಕೆಟ್‌ಗೆ ಉತ್ತಮ ಹೂಡಿಕೆಯಾಗಲಿದೆ," ಎಂದು ಸನತ್ ಜಯಸೂರ್ಯ ಹೇಳಿದ್ದಾರೆ.

ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಅವರ ಸ್ವಾಭಾವಿಕ ಆಟದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡದೆ, ಪ್ರತಿಭೆಯನ್ನು ಮತ್ತಷ್ಟು ಬೆಳೆಸುವತ್ತ ಗಮನಹರಿಸಬೇಕು ಎಂಬುದು ಜಯಸೂರ್ಯ ಅವರ ಅಭಿಪ್ರಾಯವಾಗಿದೆ.

IND vs NZ 4th T20I: ಭಾರತಕ್ಕೆ ನಿರಾಶೆ, ಗ್ಲೆನ್‌ ಫಿಲಿಪ್ಸ್‌ ಶತಕದ ಅಬ್ಬರದಿಂದ ನ್ಯೂಜಿಲೆಂಡ್‌ಗೆ ಭರ್ಜರಿ ಜಯ!

ಅಭಿಷೇಕ್ ಶರ್ಮಾ ಆಟಕ್ಕೆ ಜಯಸೂರ್ಯ ಮೆಚ್ಚುಗೆ

ಇದೇ ಸಂದರ್ಭದಲ್ಲಿ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಪ್ರದರ್ಶನದ ಬಗ್ಗೆಯೂ ಸನತ್ ಜಯಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿರುವ ಅವರು, ಮೈದಾನದ ಎಲ್ಲಾ ದಿಕ್ಕುಗಳಲ್ಲೂ ರನ್ ಗಳಿಸುವ ಸಾಮರ್ಥ್ಯ ಅವರ ಪ್ರಮುಖ ಶಕ್ತಿ ಎಂದು ಹೇಳಿದ್ದಾರೆ.

"ಭಾರತದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ. ಅವರೆಲ್ಲರೂ ಉತ್ತಮವಾಗಿ ಆಡುತ್ತಿದ್ದಾರೆ. ಭಾರತದಲ್ಲಿ ಉತ್ತಮ ಪ್ರತಿಭೆಗಳಿದ್ದು, ಸದ್ಯ ಅಭಿಷೇಕ್ ಕೂಡ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

IND vs NZ: ನಾಲ್ಕನೇ ಟಿ20ಐ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಏಕೆ ಆಡುತ್ತಿಲ್ಲ?

"ಭಾರತದ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ನೋಡುವುದು ಸಂತೋಷದ ಸಂಗತಿ. ಅವರೆಲ್ಲರೂ ಪ್ರತಿಭಾವಂತರು, ಕಠಿಣ ಪರಿಶ್ರಮ ಪಡುತ್ತಿದ್ದಾರೆ ಮತ್ತು ಉತ್ತಮವಾಗಿ ಆಡುತ್ತಿದ್ದಾರೆ. ಅಭಿಷೇಕ್ ಒಬ್ಬ ಆಲ್‌ರೌಂಡರ್ ಆಟಗಾರ. ಅವರ ಆಟದಲ್ಲಿ ನಿರ್ದಿಷ್ಟವಾಗಿ ಒಂದೇ ಒಂದು ಬಲಿಷ್ಠ ಅಂಶವನ್ನು ಗುರುತಿಸಲು ಸಾಧ್ಯವಿಲ್ಲ. ಅವರು ಮೈದಾನದ ಯಾವುದೇ ಭಾಗದಲ್ಲೂ ಚೆಂಡನ್ನು ಹೊಡೆದು ರನ್ ಗಳಿಸಬಲ್ಲರು. ಇದೇ ಅವರ ವಿಶೇಷತೆ," ಎಂದು ಜಯಸೂರ್ಯ ಅಭಿಪ್ರಾಯಪಟ್ಟಿದ್ದಾರೆ.