ವೈಭವ್ ಸೂರ್ಯವಂಶಿ ಆಯ್ಕೆಯ ಸಂಬಂಧ ಒಂದು ರಾತ್ರಿ ನಿದ್ರೆ ಮಾಡಿರಲಿಲ್ಲ: ಗೌತಮ್ ಗಂಭೀರ್
2024 ರಿಂದ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಅವರು ಹೆಡ್ ಕೋಚ್ ಆಗಿ ಇಲ್ಲಿಯವರೆಗೂ ಹಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ,ವೈಭವ್ ಸೂರ್ಯವಂಶಿ ಅವರ ಆಯ್ಕೆಯ ಸಂಬಂಧ ಅವರು ಒಂದು ರಾತ್ರಿಯೀಡಿ ನಿದ್ರೆ ಮಾಡಿರಲಿಲ್ಲ ಎಂವ ವಿಷಯವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.
ವೈಭವ್ ಸೂರ್ಯವಂಶಿಯಿಂದ ಒಂದು ರಾತ್ರಿ ನಿದ್ರೆ ಮಾಡಿರಲಿಲ್ಲ: ಗಂಭೀರ್ -
ನವದೆಹಲಿ: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ತಮ್ಮ ಕೋಚಿಂಗ್ ವೃತ್ತಿ ಜೀವನದಲ್ಲಿ ತೆಗೆದುಕೊಂಡಿದ್ದ ಕಠಿಣ ನಿರ್ಧಾರ ಯಾವುದೆಂದು ಬಹಿರಂಗಪಡಿಸಿದ್ದಾರೆ. ಒಬ್ಬೇ ಒಬ್ಬ ಆಟಗಾರನ ಆಯ್ಕೆಗೆ ಸಂಬಂಧಿಸಿದಂತೆ ತಲೆ ನೋವು ಉಂಟಾಗಿ ಒಂದು ರಾತ್ರಿ ನಿದ್ರೆಯೇ ಮಾಡಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆ ಆಟಗಾರ ಬೇರೆ ಯಾರೂ ಅಲ್ಲ, ಅವರೇ ವೈಭವ್ ಸೂರ್ಯವಂಶಿ (Vaibhav Sooryanshi). ಇಂಗ್ಲೆಂಡ್ ಪ್ರವಾಸದಲ್ಲಿ ಘಟನೆ ನಡೆದಿತ್ತು. ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ ಅವರ ನಡುವೆ ಪೈಪೋಟಿ ಉಂಟಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಯೋಚನೆಯಲ್ಲಿ ಒಂದು ರಾತ್ರಿ ನಿದ್ರೆಯೇ ಮಾಡಿರಲಿಲ್ಲ ಎಂಬುದನ್ನು ಗಂಭೀರ್ ರಿವೀಲ್ ಮಾಡಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಳಿಕ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಂಡಿತ್ತು. ಮೊದಲನೇ ಟಿ20ಐ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿತ್ತು. ಈ ವೇಳೆ ಮ್ಯಾಂಚೆಸ್ಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20ಐ ಗೆ ಪದಾರ್ಪಣೆ ಮಾಡಿದ್ದರು. ಸೂರ್ಯವಂಶಿಯ ವೈಫಲ್ಯದ ಬಳಿಕ ಸಂಜು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಮರಳಿದ್ದರು. ಈ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕಗಳನ್ನು ಬಾರಿಸಿದ್ದರು. ಈ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ವೈಭವ್ ಸೂರ್ಯವಂಶಿಯ ಸಿಕ್ಸ್ ಹೊಡೆಯುವ ಕೌಶಲ ನನಗೆ ತುಂಬಾ ಇಷ್ಟ: ಸೂರ್ಯಕುಮಾರ್ ಯಾದವ್!
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಟಿ20 ಮಾದರಿಯಲ್ಲಿ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟ ನಿರ್ಧಾರವು ತಮ್ಮ ಕೋಚಿಂಗ್ ಅವಧಿಯ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಉತ್ತಮ ಫಾರ್ಮ್‌ನಲ್ಲಿದ್ದ ಕಾರಣ ಹಾಗೂ ಸರಣಿಯನ್ನು ಗೆಲ್ಲಬೇಕಾದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸ್ಯಾಮ್ಸನ್‌ರನ್ನು ಕೈಬಿಡಬೇಕಾಯಿತು ಎಂದು ಗಂಭೀರ್ ವಿವರಿಸಿದ್ದಾರೆ.
“ನನ್ನ ಎರಡು ವರ್ಷಗಳ ಪಯಣದಲ್ಲಿ ಆ ರಾತ್ರಿ ಮಾತ್ರ ನನಗೆ ನಿದ್ದೆ ಬರಲಿಲ್ಲ. ಈ ವಿಚಾರವನ್ನು ನಾನು ಸಂಜುಗೆ ಹೇಳಿದ್ದೆ. ಟಿ20 ಮಾದರಿಯಲ್ಲಿ ನನ್ನ ಕೋಚಿಂಗ್ ಅವಧಿಯ ಅತ್ಯಂತ ಕಠಿಣ ನಿರ್ಧಾರ ಬಹುಶಃ ಅದಾಗಿತ್ತು. ಟಿ20 ವಿಶ್ವಕಪ್ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಿದ್ದ ಒಬ್ಬ ಆಟಗಾರನನ್ನು ಮೂರು ಅಥವಾ ನಾಲ್ಕು ಪಂದ್ಯಗಳ ಬಳಿಕ ತಂಡದಿಂದ ಹೊರಗಿಡಬೇಕಾಯಿತು” ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
“ವೈಭವ್ ಕೂಡ ಅದೇ ರೀತಿಯ ಫಾರ್ಮ್‌ನಲ್ಲಿದ್ದರು. ನಮಗೆ ಸರಣಿಯನ್ನು ಗೆಲ್ಲಬೇಕಿತ್ತು. ಭಾರತ ಪರ ಆಡುತ್ತಿರುವಾಗ ಅಥವಾ ಭಾರತ ತಂಡಕ್ಕೆ ಕೋಚ್ ಆಗಿರುವಾಗ ಸಾಧ್ಯವಾದಷ್ಟು ಪ್ರತಿಯೊಂದು ಸರಣಿಯನ್ನೂ ಗೆಲ್ಲಬೇಕೆಂಬುದು ನಮ್ಮ ಉದ್ದೇಶ. ಆದ್ದರಿಂದ ನಾನು ಅವರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ಮಾತನಾಡಿ, ವೈಭವ್ ಉತ್ತಮ ಫಾರ್ಮ್‌ನಲ್ಲಿದ್ದ ಕಾರಣ ಹಾಗೂ ಆರಂಭಿಕ ಕ್ರಮಾಂಕದಲ್ಲಿ ರನ್ ಗಳಿಸುವ ಆಟಗಾರನ ಅಗತ್ಯವಿದ್ದ ಕಾರಣ ಅವರನ್ನು ಹೊರಗಿಡಬೇಕಾಯಿತು ಎಂದು ತಿಳಿಸಿದೆ,” ಎಂದು ಅವರು ತಿಳಿಸಿದ್ದಾರೆ.
ಅಭಿಷೇಕ್ ಶರ್ಮಾರನ್ನು ಕೂರಿಸಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಿ ಎಂದ ಆಕಾಶ್ ಚೋಪ್ರಾ!
ತಮ್ಮ ನಿರ್ಧಾರವನ್ನು ಸ್ಯಾಮ್ಸನ್ ಸಕಾರಾತ್ಮಕವಾಗಿ ಸ್ವೀಕರಿಸಿದ್ದರು ಎಂದೂ ಗಂಭೀರ್ ಒಪ್ಪಿಕೊಂಡಿದ್ದಾರೆ. “ಅವರು ಅದನ್ನು ಅರ್ಥಮಾಡಿಕೊಂಡು ಉತ್ತಮ ಮನೋಭಾವದಿಂದ ಸ್ವೀಕರಿಸಿದರು. ಇದು ಸಂಜು ಮತ್ತು ನನ್ನ ನಡುವೆ ನಡೆದ ಮಾತುಕತೆ,” ಎಂದು ಗೌತಮ್ ಗಂಭೀರ್ ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ತವರಿನ ಸರಣಿ ಆರಂಭಕ್ಕೂ ಮುನ್ನ ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.