IPL 2026: 4000 ಐಪಿಎಲ್ ರನ್ ಗಳಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್!
Shubman Gill 4000 IPL Runs: ಲಖನೌ ಸೂಪರ್ ಜಯಂಟ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
4000 ಐಪಿಎಲ್ ರನ್ ಗಳಿಸಿದ ಶುಭಮನ್ ಗಿಲ್. -
ಲಖನೌ: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯದಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡದ ನಾಯಕ ಶುಭಮನ್ ಗಿಲ್ (Shubman Gill) ಸ್ಪೋಟಕ ಅರ್ಧಶತಕವನ್ನು ಬಾರಿಸಿದರು. ಈ ಅರ್ಧಶತಕದ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ವೇಗವಾಗಿ 4000 ರನ್‌ಗಳನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಅವರು ಇದೀಗ 26 ವರ್ಷ, 216 ದಿನಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಅಂದ ಹಾಗೆ ಗಿಲ್ ಅವರ ಅರ್ಧಶತಕದ ಬಲದಿಂದ ಲಖನೌ ಎದುರು ಗುಜರಾತ್ ಟೈಟನ್ಸ್ ತಂಡ 7 ವಿಕೆಟ್‌ಗಳ ಗೆಲುವು ಪಡೆದಿದೆ.
ಭಾನವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಎಲ್‌ಎಸ್‌ಜಿ ನೀಡಿದ್ದ 165 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್, ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 40 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ ಬಳಿಕ ಪ್ರಿನ್ಸ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಟೈಟನ್ಸ್ ಗೆಲುವಿಗೆ ನೆರವು ನೀಡಿದರು.
GT vs LSG: ಪ್ರಸಿಧ್ ಕೃಷ್ಣ ಮಾರಕ ದಾಳಿಗೆ ಎಲ್‌ಎಸ್‌ಜಿ ತತ್ತರ, ಗುಜರಾತ್ ಟೈಟನ್ಸ್‌ಗೆ ಎರಡನೇ ಜಯ!
ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್
26 ವರ್ಷ 216 ದಿನಗಳ ವಯಸ್ಸಿನಲ್ಲಿ ಗಿಲ್ 4000 ಐಪಿಎಲ್ ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ 27 ವರ್ಷ,195 ದಿನಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. 10 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಈ ಸಾಧನೆಗೆ ಭಾಜನರಾಗಿದ್ದರು.
MILESTONE 🔓
— IndianPremierLeague (@IPL) April 12, 2026
4k runs for the #GT skipper Shubman Gill in #TATAIPL 🌟
Updates ▶️ https://t.co/kIuuJYbiNx#KhelBindaas | #LSGvGT pic.twitter.com/ZJU2HCpr3Z
ಶುಭಮನ್ ಗಿಲ್ ಈ ಪಂದ್ಯದಲ್ಲಿ ಶಾಂತ ಹಾಗೂ ಪ್ರಭಾವಶೀಲ ಇನಿಂಗ್ಸ್ ಆಡಿ 40 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಹಿತ 56 ರನ್‌ಗಳನ್ನು ಗಳಿಸಿದರು. ಇದರ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ. ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿತು. ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಗಿಲ್, ನಂತರ ಮೊಹಮ್ಮದ್ ಶಮಿ ವಿರುದ್ಧದ ಒಂದು ಓವರ್‌ನಲ್ಲಿ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು.
LSG vs GT: ʻವೈಟ್‌ಬಾಲ್ ಕ್ರಿಕೆಟ್‌ನ ಕೆಟ್ಟ ಬ್ಯಾಟ್ಸ್‌ಮನ್ʼ-ರಿಷಭ್ ಪಂತ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಜೋಸ್ ಬಟ್ಲರ್-ಶುಭಮನ್ ಗಿಲ್ 84 ರನ್
ಗಿಲ್ ಅವರು ಜೋಸ್ ಬಟ್ಲರ್ ಅವರೊಂದಿಗೆ ಎರಡನೇ ವಿಕೆಟ್‌ಗೆ ಮಹತ್ವದ 84 ರನ್‌ಗಳ ಜೊತೆಯಾಟ ಕಟ್ಟಿದರು. ಬಟ್ಲರ್ 37 ಎಸೆತಗಳಲ್ಲಿ 60 ರನ್‌ಗಳನ್ನು ಗಳಿಸಿ ಇನಿಂಗ್ಸ್ ಅನ್ನು ಸ್ಥಿರಗೊಳಿಸುವ ಜೊತೆಗೆ ರನ್‌ಗಳ ವೇಗವನ್ನು ಮುಂದುವರಿಸಿದರು. ಈ ಇಬ್ಬರು ಸ್ಪೋಟಕ ಅರ್ಧಶತಕಗಳ ಬಲದಿಂದ ಜಿಟಿ ತಂಡ, ಬಹುಬೇಗ ಗುರಿಯನ್ನು ತಲುಪಿತು ಹಾಗೂ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.