Women's T20 World Cup: 200ನೇ ಟಿ20ಐ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್!
ದಕ್ಷಿಣ ಆಫ್ರಿಕಾ ವಿರುದ್ಧದ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಈ ಸಾಧನೆಗೆ ಭಾಜನರಾದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.
200 ಟಿ20ಐ ಪಂದ್ಯಗಳನ್ನು ಆಡಿದ ಹರ್ಮನ್‌ಪ್ರೀತ್ ಕೌರ್. -
ಮ್ಯಾಂಚೆಸ್ಟರ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ವಿಶ್ವ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಇದುವರೆಗಿನ ಪುರುಷ ಅಥವಾ ಮಹಿಳಾ ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯನ್ನು ಬರೆದಿದ್ದಾರೆ. ಜೂನ್ 21 ರಂದು ಭಾನುವಾರ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ (ICC Women's T20 World Cup) ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಹರ್ಮನ್‌ಪ್ರೀತ್ 200 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡರು.
2009ರಲ್ಲಿ ಟಿ20ಐ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಹರ್ಮನ್‌ಪ್ರೀತ್ ಕೌರ್ ದೀರ್ಘಕಾಲದಿಂದ ಭಾರತ ಮಹಿಳಾ ತಂಡಕ್ಕೆ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ. ಅವರು ಟೀಮ್ ಇಂಡಿಯಾವನ್ನು ಹಲವಾರು ಸ್ಮರಣೀಯ ವಿಜಯಗಳಿಗೆ ಮುನ್ನಡೆಸಿದ್ದಾರೆ ಮಾತ್ರವಲ್ಲದೆ, ತಮ್ಮ ಆಕ್ರಮಣಕಾರಿ ಮತ್ತು ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ವಿಶ್ವಾದ್ಯಂತ ಬೌಲರ್‌ಗಳಿಗೆ ನಡುಕು ಉಂಟು ಮಾಡಿದ್ದಾರೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಅನ್ನು ಅಗ್ರ ಸ್ಥಾನಕ್ಕೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ವೈಭವ್ ಅಬ್ಬರದ ಬ್ಯಾಟಿಂಗ್, ಶ್ರೀಲಂಕಾವನ್ನು ಮಣಿಸಿದ ಭಾರತ ಎ ತಂಡಕ್ಕೆ ತ್ರಿಕೋನ ಸರಣಿ!
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಈಗ ಪುರುಷ ಮತ್ತು ಮಹಿಳಾ ಇಬ್ಬರೂ ಸೇರಿದಂತೆ ವಿಶ್ವದಾದ್ಯಂತದ ಎಲ್ಲಾ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ನ್ಯೂಜಿಲೆಂಡ್‌ನ ದಂತಕಥೆ ಸುಜೀ ಬೇಟ್ಸ್‌ರನ್ನು ಹಿಂದಿಕ್ಕಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿಯರು
ಹರ್ಮನ್‌ಪ್ರೀತ್ ಕೌರ್ (ಭಾರತ): 200 ಪಂದ್ಯಗಳು
ಸುಜೀ ಬೇಟ್ಸ್ (ನ್ಯೂಜಿಲೆಂಡ್): 184 ಪಂದ್ಯಗಳು
ಡ್ಡೇನಿಯಲ್ ವ್ಯಾಟ್-ಹಾಡ್ಜ್ (ಇಂಗ್ಲೆಂಡ್): 183 ಪಂದ್ಯಗಳು
ಎಲಿಸ್ ಪೆರ್ರಿ (ಆಸ್ಟ್ರೇಲಿಯಾ): 177 ಪಂದ್ಯಗಳು
ಸ್ಮೃತಿ ಮಂಧಾನಾ (ಭಾರತ): 168 ಪಂದ್ಯಗಳು
First player EVER - men or women - to play 2️⃣0️⃣0️⃣ T20Is 🫡
— BCCI Women (@BCCIWomen) June 21, 2026
Harmanpreet Kaur stands alone at the top of the mountain ⛰️#TeamIndia | #T20WorldCup | #WomenInBlue | #SAvIND | @ImHarmanpreet pic.twitter.com/GoKwfVMrS8
ಹರ್ಮನ್‌ಪ್ರೀತ್ ಕೌರ್ ಅವರ 200ನೇ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಸುಮಾರು 17 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದರೂ, ಅವರು ಯಾವಾಗಲೂ ದೇಶಕ್ಕಾಗಿ ತಮ್ಮ ಅತ್ಯುತ್ತಮ ಸೇವೆಯನ್ನು ನೀಡಿದ್ದಾರೆ. ಈ ಸ್ಮರಣೀಯ ಮೈಲುಗಲ್ಲು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಯುವತಿಯರು ಸ್ಫೂರ್ತಿ ನೀಡುತ್ತದೆ.
Respect. Love. And a whole lot of memories 💙
— BCCI Women (@BCCIWomen) June 21, 2026
📸 Vice-captain Smriti Mandhana and Head Coach Amol Muzumdar present Harmanpreet Kaur with a special '200' jersey & cap signed by the entire squad ✨#TeamIndia | #T20WorldCup | #WomenInBlue | #SAvIND | @ImHarmanpreet |… pic.twitter.com/FMJUsAVnhz
158 ರನ್ ಕಲೆ ಹಾಕಿದ ಭಾರತ ತಂಡ
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ಮಹಿಳಾ ತಂಡ, ಕಠಿಣ ಹೋರಾಟ ನಡೆಸಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 158 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 159 ರನ್‌ಗಳ ಸ್ಪರ್ಧಾತ್ಮ ಗುರಿಯನ್ನು ನೀಡಿತು. ಭಾರತದ ಪರ 15 ಎಸೆತಗಳಲ್ಲಿ 31 ರನ್ ಗಳಿಸಿದ ಶಫಾಲಿ ವರ್ಮಾ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.