ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ICC Men's T20 World Cup 2026: ಬೆಸ್ಟ್‌ ಪ್ಲೇಯಿಂಗ್ XI ಪ್ರಕಟಿಸಿದ ಹರ್ಷ ಭೋಗ್ಲೆ!

ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆದ 2026ರ ಸಾಲಿನ ICC Men's T20 World Cup 2026 ಟೂರ್ನಿಯಲ್ಲಿ ಆಡಿದ ಅತ್ಯುತ್ತಮ ಆಟಗಾರರನ್ನು ಒಳಗೊಂಡ ಬೆಸ್ಟ್ XI ತಂಡವನ್ನು ಜನಪ್ರಿಯ ಕ್ರಿಕೆಟ್‌ ವಿಶ್ಲೇಷಕ ಹರ್ಷ ಭೋಗ್ಲೆ ಪ್ರಕಟಿಸಿದ್ದು, ವಿವಿಧ ದೇಶಗಳ ಸ್ಟಾರ್ ಆಟಗಾರರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

T20 World Cupನ ಬೆಸ್ಟ್‌ ಪ್ಲೇಯಿಂಗ್ XI ಪ್ರಕಟಿಸಿದ ಹರ್ಷ ಭೋಗ್ಲೆ!

ತಮ್ಮ ನೆಚ್ಚಿನ ಟಿ20 ವಿಶ್ವಕಪ್‌ ತಂಡವನ್ನು ಕಟ್ಟಿದ ಹರ್ಷ್‌ ಬೋಗ್ಲೆ. -

Profile
Ramesh Kote Mar 12, 2026 5:28 PM

ಬೆಂಗಳೂರು: ಕ್ರಿಕೆಟ್ ಜಗತ್ತಿನ ಪ್ರಸಿದ್ಧ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಇತ್ತೀಚೆಗೆ ಅಂತ್ಯಗೊಂಡ ICC Men's T20 World Cup 2026 ಟೂರ್ನಿಯ ಅತ್ಯುತ್ತಮ ಆಟಗಾರರನ್ನು ಒಳಗೊಂಡ ತಮ್ಮ ಆಯ್ಕೆಯ 'ಬೆಸ್ಟ್ ಪ್ಲೇಯಿಂಗ್ XI' ಪ್ರಕಟಿಸಿದ್ದಾರೆ. ಈ ತಂಡದಲ್ಲಿ ವಿವಿಧ ದೇಶಗಳ ಸ್ಟಾರ್‌ ಆಟಗಾರರು ಸ್ಥಾನ ಪಡೆದಿದ್ದು, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಭೋಗ್ಲೆ ಮಣೆ ಹಾಕಿದ್ದಾರೆ.

ರೋಚಕವಾಗಿ ಮೂಡಿಬಂದ 2026ರ ಸಾಲಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ತಂಡಗಳು ಗಮನಾರ್ಹ ಪ್ರದರ್ಶನ ನೀಡಿದ್ದವು. ಆಟಗಾರರ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್‌ರೌಂಡ್ ಪರಾಕ್ರಮಗಳ ಆಧಾರದ ಮೇಲೆ ಭೋಗ್ಲೆ ತಮ್ಮ ತಂಡವನ್ನು ಆಯ್ಕೆ ಮಾಡಿದ್ದಾರೆ. ವಿಶೇಷವಾಗಿ ಟೂರ್ನಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರರಿಗೆ ಆದ್ಯತೆ ನೀಡಿದ್ದಾರೆ.

ʻನನ್ನ ಅಪ್ಪ ನಿಜವಾದ ಹೀರೋʼ-T20 World Cup ಪದಕವನ್ನು ತಮ್ಮ ತಂದೆಗೆ ಸಮರ್ಪಿಸಿದ ಶಿವಂ ದುಬೇ!

ಭೋಗ್ಲೆ ಆಯ್ಕೆ ಮಾಡಿದ ತಂಡದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ಭಾರತ ತಂಡದ ದಾಖಲೆಯ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರರ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಗಳ ಆಧಾರದ ಮೇಲೆ ಈ ಆಯ್ಕೆಯನ್ನು ಮಾಡಲಾಗಿದೆ. ಆದರೆ, ಟ್ರೋಫಿ ಗೆದ್ದುಕೊಟ್ಟ ನಾಯಕ ಕ್ಯಾಪ್ಟನ್‌ ಸೂರ್ಯಕುಮಾರ್ ಯಾದವ್‌, ಟೂರ್ನಿಯಲ್ಲಿ ಒಂದು ಅರ್ಧಶತಕ ಬಿಟ್ಟರೆ ಬ್ಯಾಟಿಂಗ್‌ನಲ್ಲಿ ಹೆಚ್ಚು ಕೊಡುಗೆ ನೀಡಲು ವಿಫಲರಾದರು. ಫೈನಲ್‌ನಲ್ಲೂ ಅವರು ಗೋಲ್ಡನ್‌ ಡಕ್‌ ಆಗಿದ್ದರು. ಹೀಗಾಗಿ ಹರ್ಷ ಭೋಗ್ಲೆ ಆಯ್ಕೆಯ ತಂಡದಲ್ಲಿ ಸೂರ್ಯಗೆ ಸ್ಥಾನ ಸಿಕ್ಕಿಲ್ಲ. ಆದರೆ, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಇಶಾನ್‌ ಕಿಶನ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಭರ್ಜರಿ ಆಟದ ಮೂಲಕ ಬೆಸ್ಟ್‌ 11 ಪಟ್ಟಿಯಲ್ಲಿ ತಮ್ಮ ಸ್ಥಾನ ಕಿತ್ತುಕೊಂಡಿದ್ದಾರೆ.

ಅದೇ ರೀತಿ ಇತರ ದೇಶಗಳ ಆಟಗಾರರೂ ತಮ್ಮ ಅತ್ಯುತ್ತಮ ಆಟದ ಮೂಲಕ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವಾಗಿ ವೇಗದ ಬೌಲರ್‌ಗಳು ಮತ್ತು ಸ್ಪಿನ್ ಬೌಲರ್‌ಗಳು ಟೂರ್ನಿಯ ಹಲವು ಪಂದ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯ ಸಮಯದಲ್ಲಿ ಕೆಲ ಆಟಗಾರರು ಅತ್ಯಧಿಕ ರನ್‌ಗಳು ಮತ್ತು ವಿಕೆಟ್‌ಗಳನ್ನು ಪಡೆದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದರು.

ರಾಹುಲ್ ದ್ರಾವಿಡ್‌ಗೆ ಜೀವಮಾನ ಸಾಧನೆ, ಶುಭಮನ್ ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ

ಹರ್ಷ ಭೋಗ್ಲೆ ಅವರ ಈ ಆಯ್ಕೆ ಕ್ರಿಕೆಟ್ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ. ಕೆಲವು ಅಭಿಮಾನಿಗಳು ಈ ಆಯ್ಕೆಯನ್ನು ಮೆಚ್ಚಿಕೊಂಡರೆ, ಮತ್ತಷ್ಟು ಅಭಿಮಾನಿಗಳು ತಮ್ಮದೇ ಆದ ಬೆಸ್ಟ್ XI ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ, ಐಸಿಸಿ ಟಿ20 ವಿಶ್ವ ಕಪ್ 2026 ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿದ್ದು, ಹಲವು ಯುವ ಆಟಗಾರರು ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಹರ್ಷ ಭೋಗ್ಲೆ ಪ್ರಕಟಿಸಿದ ಬೆಸ್ಟ್ XI ತಂಡವು ಈ ಟೂರ್ನಿಯ ಪ್ರಮುಖ ಪ್ರದರ್ಶನಗಳ ಒಂದು ಸಂಕೇತವಾಗಿ ಪರಿಣಮಿಸಿದೆ.



ಹರ್ಷ ಭೋಗ್ಲೆ ಆಯ್ಕೆ ಬೆಸ್ಟ್‌ ಇಲೆವೆನ್‌ - ಐಸಿಸಿ ಟಿ20 ವಿಶ್ವಕಪ್‌ 2026

01.ಸಂಜು ಸ್ಯಾಮ್ಸನ್‌ (ವಿಕೆಟ್‌ಕೀಪರ್‌/ ಭಾರತ)

02.ಸಾಹಿಬ್ಝಾದ ಫರ್ಹಾನ್‌ (ಓಪನರ್‌/ ಪಾಕಿಸ್ತಾನ)

03.ಇಶಾನ್‌ ಕಿಶನ್‌ (ಬ್ಯಾಟರ್‌/ ಭಾರತ)

04.ಜೇಕಬ್‌ ಬೆಥೆಲ್ (ಇಂಗ್ಲೆಂಡ್‌/ ಬ್ಯಾಟರ್‌)

05.ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್‌/ ಭಾರತ)

06.ಜೇಸನ್‌ ಹೋಲ್ಡರ್‌ (ಆಲ್‌ರೌಂಡರ್‌/ ವೆಸ್ಟ್‌ ಇಂಡೀಸ್‌)

07.ವಿಲ್‌ ಜಾಕ್ಸ್‌ (ಆಲ್‌ರೌಂಡರ್‌/ ಇಂಗ್ಲೆಂಡ್‌)

08.ಶಿವಂ ದುಬೇ (ಆಲ್‌ರೌಂಡರ್‌ / ಭಾರತ)

09.ಆದಿಲ್‌ ರಶೀದ್‌ (ಲೆಗ್‌ ಸ್ಪಿನ್ನರ್‌/ ಇಂಗ್ಲೆಂಡ್‌)

10.ಲುಂಗಿ ಎನ್ಗಿಡಿ (ಪೇಸರ್‌ / ದಕ್ಷಿಣ ಆಫ್ರಿಕಾ)

11.ಜಸ್‌ಪ್ರೀತ್‌ ಬುಮ್ರಾ (ಪೇಸರ್‌ / ಭಾರತ)