2026ರ ಟಿ20 ವಿಶ್ವಕಪ್ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆರಿಸಿದ ಆಕಾಶ್ ಚೋಪ್ರಾ!
ಮುಂದಿನ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಅವರಿಗೆ ಅವಕಾಶ ನೀಡಬೇಕೆಂದು ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಆಗ್ರಹಿಸಿದ್ದಾರೆ. ಸಕ್ರಿಯ ವಿಕೆಟ್ ಕೀಪರ್‌ಗಳ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ದಾಖಲೆಯನ್ನು ಜಿತೇಶ್ ಶರ್ಮಾ ಹೊಂದಿದ್ದಾರೆ.

ಜಿತೇಶ್ ಶರ್ಮಾಗೆ ಆಕಾಶ್ ಚೋಪ್ರಾ ಬೆಂಬಲ. -

ನವದೆಹಲಿ: ಮುಂದಿನ ವರ್ಷ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸ್ಥಾನಕ್ಕೆ ಜಿತೇಶ್ ಶರ್ಮಾ (Jitesh Sharma) ಅವರಿಗೆ ಸ್ಥಾನ ನೀಡಬೇಕೆಂದು ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ (Aakash Chopra) ಆಗ್ರಹಿಸಿದ್ದಾರೆ. ಪ್ರಸ್ತುತ ಭಾರತದ ಸಕ್ರಿಯ ವಿಕೆಟ್ ಕೀಪರ್‌ಗಳ ಪೈಕಿ ಮಧ್ಯಮ ಕ್ರಮಾಂಕದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಿತೇಶ್ ಶರ್ಮಾ ಅವರು ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಜಿತೇಶ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಸೆಪ್ಟಂಬರ್ 9 ರಂದು ಆರಂಭವಾಗುವ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಕೀಪರ್‌ಗಳಾಗಿ ಆಯ್ಕೆಯಾಗಿದ್ದಾರೆ. ಉಪನಾಯಕನಾಗಿ ಶುಭಮನ್ ಗಿಲ್ ಅವರು ಭಾರತ ಟಿ20 ತಂಡಕ್ಕೆ ಮರಳಿದ್ದಾರೆ ಹಾಗೂ ಅಭಿಷೇಕ್ ಶರ್ಮಾ ಜತೆ ಅವರು ಇನಿಂಗ್ಸ್ ಆರಂಭಿಸಬಹುದು. ಈ ಕಾರಣದಿಂದ ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ತಂಡದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯಬಹುದು. ಆರ್‌ಸಿಬಿ ಪರ ಜಿತೇಶ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು.
Hockey Asia Cup 2025: ಜಪಾನ್ ವಿರುದ್ದ ಗೆದ್ದು ಸೂಪರ್ ಫೋರ್‌ಗೆ ಅರ್ಹತೆ ಪಡೆದ ಭಾರತ!
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರ ಬದಲು ಜಿತೇಶ್ ಶರ್ಮಾಗೆ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
"ಏಷ್ಯಾ ಕಪ್ ಭಾರತ ತಂಡದಲ್ಲಿ ಜಿತೇಶ ಶರ್ಮಾ ಇದ್ದಾರೆ. ಅವರು ಬಹುಶಃ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆಡಬಹುದು. ಜಿತೇಶ್ ಶರ್ಮಾ ಒಂದರಿಂದ ಮೂರನೇ ಕ್ರಮಾಂಕದವರೆಗೂ ಆಡಬೇಕೆಂದರೆ ಅವರು ಸ್ಟ್ರೈಕ್ 135 ಹಾಗೂ 25ರ ಸರಾಸರಿಯನ್ನು ಹೊಂದಿದ್ದಾರೆ. ಹಾಗಾಗಿ ಅವರು ಅಗ್ರ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಯೋಚಿಸಬಾರದು, ಏಕೆಂದರೆ ಮೇಲಿನ ಕ್ರಮಾಂಕಗಳಲ್ಲಿ ಆಡಲು ಅವಕಾಶ ಕೂಡ ಇಲ್ಲ. ಆದ್ದರಿಂದ ಅವರು 4 ರಿಂದ 7ನೇ ಕ್ರಮಾಂಕದವರೆಗೂ ಆಡುವುದು ಸೂಕ್ತ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು
"ಅವರು ಸ್ಟ್ರೈಕ್ ರೇಟ್ 166 ಹಾಗೂ 28ರ ಸರಾಸರಿಯಲ್ಲಿ ರನ್ ಗಳಿಸುತ್ತಾರೆ. 150ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಬಲ್ಲರು. ಪಂದ್ಯದ ಬ್ಯಾಟಿಂಗ್ ವೇಳೆ ಸನ್ನಿವೇಶಕ್ಕೆ ತಕ್ಕಂತೆ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಮಧ್ಯಮ ಕ್ರಮಾಂಕದಲ್ಲಿ ನಿರ್ಧರಿಸಬಹುದು. ವಿಕೆಟ್ ಕೀಪರ್‌ಗಳ ಪೈಕಿ ಜಿತೇಶ್ ಶರ್ಮಾ ಅವರ ಸರಾಸರಿ ಚೆನ್ನಾಗಿದೆ. ಅಲ್ಲದೆ ಉದಯೋನ್ಮುಖ ಆಟಗಾರನಾಗಿದ್ದು, ಅವರು ನಂ.1 ಆಟಗಾರರಾಗಲಿದ್ದಾರೆ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.