ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್‌ಗೆ ಗೇಟ್ ಪಾಸ್ ಸಾಧ್ಯತೆ; ರೇಸ್‌ನಲ್ಲಿ ಕನ್ನಡಿಗ

ಅಕ್ಷರ್ ಪಟೇಲ್ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಳಿಕ ತಂಡದ ಹೊಸ ನಾಯಕ ಸ್ಥಾನಕ್ಕೆ ಕನ್ನಡಿಗ ಕೆಎಲ್ ರಾಹುಲ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್‌ ಹೆಸರು ಕೇಳಿ ಬಂದಿದೆ. ಆದರೆ ರಾಹುಲ್‌ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದು ಅನುಮಾನ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಅವರು ಸ್ವತಃ ನಾಯಕತ್ವದ ಆಫರ್‌ ತಿರಸ್ಕರಿಸಿದ್ದರು. ಸದ್ಯಕ್ಕೆ ನಾಯಕತ್ವದ ಬದಲಾವಣೆ ಕುರಿತು ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

IPL 2026: ಡೆಲ್ಲಿ ತಂಡದ ನಾಯಕತ್ವದಿಂದ ಅಕ್ಷರ್‌ಗೆ ಗೇಟ್ ಪಾಸ್ ?

-

Abhilash BC Abhilash BC Sep 1, 2025 5:05 PM

ನವದೆಹಲಿ: ಮುಂಬರುವ 2026ನೇ(IPL 2026) ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ ಕೆಲ ತಂಡಗಳಲ್ಲಿ ಮಹತ್ವದ ಬದಲಾವಣೆ ಸಂಭವಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಾಹುಲ್‌ ದ್ರಾವಿಡ್‌ ಅವರು ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ನೂತನ ನಾಯಕನ ನೇಮಕಕ್ಕೆ ಸಿದ್ಧತೆ ನಡೆಸಿದೆ ಎಂಬ ವರದಿ ಹೊರ ಬಿದ್ದಿದೆ.

ಕಳೆದ ಆವೃತ್ತಿಯಲ್ಲಿ ತಂಡದ ನಾಯಕನಾಗಿದ್ದ ಅಕ್ಷರ್‌ ಪಟೇಲ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ನೂತನ ನಾಯಕನ್ನು ನೇಮಕ ಮಾಡಲಿದೆ ಎನ್ನಲಾಗಿದೆ. ನಾಯಕತ್ವದಿಂದ ಕೆಳಗಿಳಿಸಿದರೂ ಅಕ್ಷರ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಮೆಗಾ-ಹರಾಜಿಗೆ ಮುಂಚಿತವಾಗಿ ತಂಡ ರಿಷಭ್ ಪಂತ್ ಅವರನ್ನು ಬಿಡುಗಡೆ ಮಾಡಿದ ನಂತರ ಆಲ್‌ರೌಂಡರ್ ಅಕ್ಷರ್‌ ಅವರನ್ನು ಐಪಿಎಲ್ 2025 ರಲ್ಲಿ ನಾಯಕನನ್ನಾಗಿ ನೇಮಿಸಲಾಗಿತ್ತು.

ಭಾರತ ಟಿ20 ತಂಡದ ಉಪನಾಯಕನಾಗಿದ್ದ ಅಕ್ಷರ್‌ ಸ್ಥಾನಕ್ಕೆ ಈಗ ಶುಭಮನ್‌ ಗಿಲ್‌ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಏಷ್ಯಾ ಕಪ್‌ನಲ್ಲಿ ಸೂರ್ಯಕುಮಾರ್‌ ನಾಯಕ ಮತ್ತು ಗಿಲ್‌ ಉಪನಾಯಕನಾಗಿದ್ದಾರೆ.

ಅಕ್ಷರ್ ಪಟೇಲ್ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬಳಿಕ ತಂಡದ ಹೊಸ ನಾಯಕ ಸ್ಥಾನಕ್ಕೆ ಕನ್ನಡಿಗ ಕೆಎಲ್ ರಾಹುಲ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್‌ ಹೆಸರು ಕೇಳಿ ಬಂದಿದೆ. ಆದರೆ ರಾಹುಲ್‌ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದು ಅನುಮಾನ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಅವರು ಸ್ವತಃ ನಾಯಕತ್ವದ ಆಫರ್‌ ತಿರಸ್ಕರಿಸಿದ್ದರು. ಸದ್ಯಕ್ಕೆ ನಾಯಕತ್ವದ ಬದಲಾವಣೆ ಕುರಿತು ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ಇದನ್ನೂ ಓದಿ IPL 2026: ಎಂಎಸ್‌ ಧೋನಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಕೆ ಶ್ರೀಕಾಂತ್‌!