ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊದಲನೇ ಎಸೆತದಿಂದಲೂ ಹೊಡೆಯುವ ತಾಕತ್ತು ನನಗೂ ಇದೆ: ಯುಕೆ ವೈಫಲ್ಯದ ಬಗ್ಗೆ ತಿಲಕ್‌ ವರ್ಮಾ ಪ್ರತಿಕ್ರಿಯೆ!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳಲ್ಲಿ ತಮ್ಮ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಗ್ಗೆ ಭಾರತ ಟಿ20 ತಂಡದ ಉಪ ನಾಯಕ ತಿಲಕ್‌ ವರ್ಮಾ ಪ್ರತಿಕ್ರಿಯಿಸಿದ್ದಾರೆ. ಅಲ್ಲಿನ ಕಂಡೀಷನ್ಸ್‌ನಲ್ಲಿ ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡುವುದು ಹೇಳಿದಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.

ಮೊದಲನೇ ಎಸೆತದಿಂದ ಹೊಡೆಯುವ ತಾಕತ್ತು ನನಗೂ ಇದೆ: ತಿಲಕ್‌ ವರ್ಮಾ!

ಐರ್ಲೆಂಡ್‌, ಇಂಗ್ಲೆಂಡ್‌ ಟಿ20ಐ ಸರಣಿಗಳಲ್ಲಿನ ತಮ್ಮ ವೈಫಲ್ಯಕ್ಕೆ ಕಾರಣ ತಿಳಿಸಿದ ತಿಲಕ್‌ ವರ್ಮಾ. -

Profile
Ramesh Kote Jul 22, 2026 7:05 PM

ನವದೆಹಲಿ: ಪಂದ್ಯದ ಮೊದಲನೇ ಎಸೆತದಿಂದಲೇ ಸಿಕ್ಸರ್‌, ಬೌಂಡರಿ ಹೊಡೆಯುವ ತಾಕತ್ತು ನನಗೂ ಇದೆ. ಆದರೆ ಸನ್ನಿವೇಶಕ್ಕೆ ತಕ್ಕಂತೆ ಆಡಲು ಬಯಸುತ್ತೇನೆ ಎಂದು ಭಾರತ ಟಿ20ಐ (India) ತಂಡದ ಉಪ ನಾಯಕ ತಿಲಕ್‌ ವರ್ಮಾ (Tilak Verma) ತಿಳಿಸಿದ್ದಾರೆ. ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಕಳೆದ ಟಿ20ಐ ಸರಣಿಗಳಲ್ಲಿ ತಿಲಕ್‌ ವರ್ಮಾ ಅವರ ಬ್ಯಾಟಿಂಗ್‌ ಕ್ರಮಾಂಕದ ಅದಲು ಬಸಲಾಗುತ್ತಿತ್ತು ಹಾಗೂ ಅವರು ಯುಕೆ ಪ್ರವಾಸದಲ್ಲಿ ಬ್ಯಾಟಿಂಗ್‌ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆಯೂ ಹೈದರಾಬಾದ್‌ ಮೂಲದ ಬ್ಯಾಟ್ಸ್‌ಮನ್‌ ಮಾತನಾಡಿದ್ದಾರೆ.

ಇತ್ತೀಚಿನ ಪ್ರವಾಸಗಳು ಟಿ20 ಕ್ರಿಕೆಟ್‌ನ ಪವರ್‌ಪ್ಲೇ ಹಂತದಲ್ಲಿ ಭಾರತ ತಂಡ ಎದುರಿಸುತ್ತಿರುವ ಸವಾಲುಗಳನ್ನು ಬಹಿರಂಗಪಡಿಸಿವೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟಿ20ಐ ಸರಣಿಗಳ ಸೋಲಿನಿಂದ ಪಡೆದ ಪಾಠಗಳನ್ನು ಗಮನದಲ್ಲಿಟ್ಟುಕೊಂಡು, ತಂಡ ತನ್ನ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವತ್ತ ಹಾಗೂ ಮತ್ತೆ ಗೆಲುವಿನ ಲಯಕ್ಕೆ ಮರಳುವತ್ತ ಸಂಪೂರ್ಣ ಗಮನ ಹರಿಸಿದೆ ಎಂದು ತಿಲಕ್ ವರ್ಮಾ ಹೇಳಿದ್ದಾರೆ.

ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್‌ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ನಮ್ಮ ತಂಡ ಗೆಲುವಿನ ಲಯಕ್ಕೆ ಮರಳಲಿದೆ: ತಿಲಕ್‌ ವರ್ಮಾ

ಆರಂಭಿಕ ಬ್ಯಾಟರ್‌ಗಳು ಬೇಗನೆ ವಿಕೆಟ್ ಕಳೆದುಕೊಂಡ ಸಂದರ್ಭಗಳಲ್ಲಿ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಆಕ್ರಮಣಕಾರಿ ಆಟವಾಡುವುದಕ್ಕಿಂತ ಹೆಚ್ಚಾಗಿ ಇನಿಂಗ್ಸ್‌ನ್ನು ಸ್ಥಿರಗೊಳಿಸುವ ಜವಾಬ್ದಾರಿ ಹೊರುವಂತಾಗಿತ್ತು. ಇದರಿಂದ ತಿಲಕ್ ವರ್ಮಾ ಅವರಿಗೆ ಆಕ್ರಮಣ ಮತ್ತು ಜವಾಬ್ದಾರಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಸವಾಲು ಎದುರಾಗಿತ್ತು. ತಂಡದ ಯೋಜನೆಗಳ ಮೇಲೆ ನಂಬಿಕೆ ಇಟ್ಟು, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಭಾರತ ಮತ್ತೆ ಗೆಲುವಿನ ಹಾದಿಗೆ ಮರಳಲಿದೆ ಎಂಬ ವಿಶ್ವಾಸವನ್ನು ತಿಲಕ್ ವ್ಯಕ್ತಪಡಿಸಿದ್ದಾರೆ.

"ಈ ಪಂದ್ಯಗಳಲ್ಲಿ ನೀವು ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದೀರಿ ಹಾಗೂ ಇಂಥಾ ಕಂಡೀಷನ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುವುದು ಅಷ್ಟೊಂದು ಸುಲಭವಲ್ಲ. ತಂಡಕ್ಕೆ ಅಗತ್ಯವಿರುವ ಸಂಗತಿಗಳನ್ನು ನಿರ್ವಹಿಸಲು ನಾನು ಸದಾ ಬದ್ದನಾಗಿರುತ್ತೇನೆಂದು ನಾನು ಸದಾ ಹೇಳುತ್ತೇನೆ. ಮೊದಲನೇ ಎಸೆತದಿಂದಲೇ ಹೊಡೆಯಬೇಕೆಂದು ಹೇಳಿದರೆ, ಅದಕ್ಕೂ ನಾನು ಸಿದ್ದ," ಎಂದು ತಿಲಕ್‌ ವರ್ಮಾ ಹೇಳಿರುವುದನ್ನು ಐಸಿಸಿ ಪೋಸ್ಟ್‌ ಮಾಡಿದೆ.

ಐಸಿಸಿ ಏಕದಿನ ಶ್ರೇಯಾಂಕ: ಕೊಹ್ಲಿ ಸನಿಹ ರೋಹಿತ್ ಶರ್ಮಾ

ಯೋಜನೆಗಳನ್ನು ಕಾರ್ಯಗತಗೊಳಿಸುವುದು ನಮ್ಮ ಗುರಿ: ತಿಲಕ್‌

ಭಾರತದ ಟಿ20ಐ ತಂಡದ ಉಪನಾಯಕ ತಿಲಕ್ ವರ್ಮಾ, ತಂಡದ ಸಂಪೂರ್ಣ ಗಮನವು ತನ್ನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಮೇಲೆ ಹಾಗೂ ಮತ್ತೆ ಗೆಲುವಿನ ಲಯವನ್ನು ಮರಳಿ ಪಡೆಯುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟಿ20ಐ ಸರಣಿ ಸೋಲುಗಳಿಂದ ಹಲವು ಪಾಠಗಳನ್ನು ಕಲಿತಿದ್ದೇವೆ ಎಂದು ಹೇಳಿದ ತಿಲಕ್, ಮುಂದಿನ ಸರಣಿಯಲ್ಲಿ ಮೂಲಭೂತ ಅಂಶಗಳನ್ನು ಸರಿಯಾಗಿ ಪಾಲಿಸಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಮಾತನಾಡಿ, "ಕಳೆದ ಸರಣಿಯಿಂದ ನಮಗೆ ಸಾಕಷ್ಟು ಕಲಿಕೆಯಾಗಿದೆ. ಈಗ ನಾವು ಮುಂದೆ ನೋಡುವತ್ತ ಗಮನ ಹರಿಸಿದ್ದೇವೆ. ನಮ್ಮ ಮೂಲಭೂತ ಅಂಶಗಳನ್ನು ಅನುಸರಿಸಿ ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ಈ ಸರಣಿಯಲ್ಲಿ ನಮ್ಮ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಅತ್ಯುತ್ತಮ ಕ್ರಿಕೆಟ್ ಆಡುತ್ತೇವೆ. ಮತ್ತೆ ಗೆಲುವಿನ ಲಯವನ್ನು ಪಡೆಯುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದ್ದಾರೆ.

ವೈಭವ್‌ ಇನ್; ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ತಮ್ಮ ನಾಯಕತ್ವದಲ್ಲಿ ಮೊದಲನೇ ಗಲುವಿನ ನಿರೀಕ್ಷೆಯಲ್ಲಿ ಶ್ರೇಯಸ್‌

ಭಾರತ ಟಿ20 ತಂಡದ ನಾಯಕನಾಗಿ ಶ್ರೇಯಸ್‌ ಅಯ್ಯರ್‌ ಇಲ್ಲಿಯವರೆಗೂ ಆಡಿದ ಎರಡೂ ಸರಣಿಗಳಲ್ಲಿ ಸೋತಿದ್ದಾರೆ. ಇದರಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಸೋಲು ಹಾಗೂ ಒಂದು ಪಂದ್ಯ ಮಳೆಗೆ ರದ್ದಾಗಿದೆ. ಐರ್ಲೆಂಡ್‌ ಎದುರು 2-0 ಅಂತರದ ಕ್ಲೀನ್‌ ಸ್ವೀಪ್‌ ಆಘಾತ ಹಾಗೂ ಇಂಗ್ಲೆಂಡ್‌ ಎದುರು 4-0 ಅಂತರದಲ್ಲಿ ಟೀಮ್‌ ಇಂಡಿಯಾ ಸೋತಿತ್ತು. ಇದೀಗ ಜಿಂಬಾಬ್ವೆ ಎದುರು ಮೊದಲ ಟಿ20ಐ ಸರಣಿ ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.