ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಸಿಸಿ ಏಕದಿನ ಶ್ರೇಯಾಂಕ: ಕೊಹ್ಲಿ ಸನಿಹ ರೋಹಿತ್ ಶರ್ಮಾ

ICC ODI rankings: ಬೌಲಿಂಗ್ ವಿಭಾಗದಲ್ಲಿ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತ ವಿರುದ್ಧದ ಮೂರು ಪಂದ್ಯಗಳಲ್ಲಿ ನಿರ್ಣಾಯಕ ಐದು ವಿಕೆಟ್ ಗೊಂಚಲು ಪಡೆದ ನಂತರ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕ: ಕೊಹ್ಲಿ ಸನಿಹ ರೋಹಿತ್ ಶರ್ಮಾ

Rohit Sharma -

Abhilash BC
Abhilash BC Jul 22, 2026 4:06 PM

ದುಬೈ, ಜು.22: ಕ್ರಿಕೆಟ್‌ನ ತವರು ಲಾರ್ಡ್ಸ್‌ ನೆಲದಲ್ಲಿ ದಾಖಲೆಯ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ನೂತನ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 758 ರೇಟಿಂಗ್‌ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್(802) ಅಗ್ರಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್(801) ಮತ್ತು ವಿರಾಟ್ ಕೊಹ್ಲಿ(767) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಗಿಲ್‌ 188 ರನ್‌ಗಳ ಸಾಧನೆ ಮಾಡಿದ್ದರು. ಸದ್ಯ ಎರಡನೇ ಸ್ಥಾನದಲ್ಲಿರುವ ಗಿಲ್ ‌ಅವರು ಅಗ್ರಸ್ಥಾನಿ ಡ್ಯಾರಿಲ್ ಮಿಚೆಲ್‌ಗಿಂತ ಕೇವಲ ಒಂದು ಪಾಯಿಂಟ್ ಹಿಂದಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಮಾಸ್ಟರ್‌ಕ್ಲಾಸ್‌ನ ನಂತರ ರೋಹಿತ್ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಅಲ್ಲಿ ಅವರು 110 ಎಸೆತಗಳಲ್ಲಿ 138 ರನ್ ಗಳಿಸಿ, ಲಂಡನ್‌ನ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಏಕದಿನ ಶತಕ ದಾಖಲಿಸಿದ ಇತಿಹಾಸದಲ್ಲಿ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ನಾಳೆಯಿಂದ ಕಾಮನ್‌ವೆಲ್ತ್ ಗೇಮ್ಸ್‌; ಪದಕ ಬೇಟೆಯಾಡಲಿ ಭಾರತ

ಇಂಗ್ಲೆಂಡ್‌ನ ಜೋ ರೂಟ್ ನಾಲ್ಕು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ತಂಡದ ಸಹ ಆಟಗಾರರಾದ ಬೆನ್ ಡಕೆಟ್ (11 ಸ್ಥಾನ ಏರಿಕೆಯಾಗಿ 19ನೇ ಸ್ಥಾನಕ್ಕೆ ಸಮ) ಮತ್ತು ಜಾಕೋಬ್ ಬೆಥೆಲ್ (ಐದು ಸ್ಥಾನ ಏರಿಕೆಯಾಗಿ 64ನೇ ಸ್ಥಾನಕ್ಕೆ) ಕೂಡ ಗಮನಾರ್ಹ ಏರಿಕೆ ಕಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತ ವಿರುದ್ಧದ ಮೂರು ಪಂದ್ಯಗಳಲ್ಲಿ ನಿರ್ಣಾಯಕ ಐದು ವಿಕೆಟ್ ಗೊಂಚಲು ಪಡೆದ ನಂತರ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಟಾಪ್‌-10 ಬ್ಯಾಟರ್‌ಗಳು

ಡ್ಯಾರಿಲ್ ಮಿಚೆಲ್- 802 ಅಂಕಗಳು

ಶುಭ್‌ಮನ್ ಗಿಲ್ - 801 ಅಂಕಗಳು

ವಿರಾಟ್ ಕೊಹ್ಲಿ - 767 ಅಂಕಗಳು

ರೋಹಿತ್ ಶರ್ಮಾ - 758 ಅಂಕಗಳು

ಇಬ್ರಾಹಿಂ ಜದ್ರಾನ್ - 712 ಅಂಕಗಳು

ಬಾಬರ್ ಅಜಮ್ - 689 ಅಂಕಗಳು

ಹ್ಯಾರಿ ಟೆಕ್ಟರ್ - 679 ಅಂಕಗಳು

ಜೋ ರೂಟ್ - 674 ಅಂಕಗಳು

ಶೈ ಹೋಪ್ - 672 ಅಂಕಗಳು

ಚರಿತ ಅಸಲಂಕಾ - 659 ಅಂಕಗಳು