ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಧರ್ಮಶಾಲಾದಲ್ಲಿ ಕಣಕ್ಕೆ ಇಳಿಯುವ ಮೂಲಕ ದೊಡ್ಡ ದಾಖಲೆ ಬರೆದ ರೋಹಿತ್‌ ಶರ್ಮಾ!

IND vs AFG, 1st ODI: ಭಾರತ ತಂಡದ ಪರ ಏಕದಿನ ಪಂದ್ಯವನ್ನು ಆಡಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ರೋಹಿತ್‌ ಶರ್ಮಾ ಬರೆದಿದ್ದಾರೆ. ಆ ಮೂಲಕ ಮಾಜಿ ಆಟಗಾರ ಮೊಹಿಂದರ್‌ ಅಮರನಾಥ್‌ ಅವರ 37 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಅವರು ಈ ಮೈಲುಗಲ್ಲು ತಲುಪಿದ್ದಾರೆ.

ಧರ್ಮಶಾಲಾದಲ್ಲಿ ಕಣಕ್ಕೆ ಇಳಿದು ದೊಡ್ಡ ದಾಖಲೆ ಬರೆದ ರೋಹಿತ್‌ ಶರ್ಮಾ!

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ದಾಖಲೆ. -

Profile
Ramesh Kote Jun 13, 2026 9:19 PM

ಧರ್ಮಶಾಲಾ: ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ(IND vs AFG) ಕಣಕ್ಕೆ ಇಳಿಯುವ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಭಾರತದ ಅತ್ಯಂತ ಹಿರಿಯ ಆಟಗಾರ ಎಂಬ ಸಾಧನೆಗೆ ಹಿಟ್‌ಮ್ಯಾನ್‌ ಭಾಜನರಾಗಿದ್ದಾರೆ. ಶನಿವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಒಡಿಐ ಪಂದ್ಯದ ಟಾಸ್‌ ನಡೆಯುತ್ತಿದ್ದಂತೆ ರೋಹಿತ್‌ ಶರ್ಮಾ ಈ ಮೈಲುಗಲ್ಲು ತಲುಪಿದರು.

ರೋಹಿತ್‌ ಶರ್ಮಾ 39 ವರ್ಷ, 75 ದಿನಗಳ ವಯಸ್ಸಿನಲ್ಲಿ ಏಕದಿನ ಪಂದ್ಯವನ್ನು ಆಡುವ ಮೂಲಕ 39 ವರ್ಷ, 36 ದಿನಗಳಲ್ಲಿ ಭಾರತದ ಪರ ಏಕದಿನ ಪಂದ್ಯವನ್ನು ಆಡಿದ್ದ ಮಾಜಿ ಆಲ್‌ರೌಂಡರ್‌ ಮೊಹಿಂದರ್‌ ಅಮರನಾಥ್‌ ಅವರ ದಾಖಲೆಯನ್ನು ಮುರಿದಿದ್ದಾರೆ. 1989ರಲ್ಲಿ ಮೊಹಿಂದರ್‌ ಅಮರನಾಥ್‌ ಅವರು ಭಾರತದ ಪರ ತಮ್ಮ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಈಗಾಗಲೇ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ನಾಯಕ ಹಾಗೂ ಬ್ಯಾಟರ್‌ ಎನಿಸಿಕೊಂಡಿರುವ ರೋಹಿತ್‌ ಶರ್ಮಾಗೆ ಇದೀಗ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.

IND vs AFG: 48 ಎಸೆತಗಳಲ್ಲಿ ಶತಕ ಸಿಡಿಸಿ ದೊಡ್ಡ ದಾಖಲೆ ಬರೆದ ರಹಮಾನ್‌ವುಲ್ಲಾ ಗುರ್ಬಾಝ್‌!

ಒಟ್ಟಾರೆ ಭಾರತೀಯ ಒಡಿಐ ಕ್ರಿಕೆಟ್‌ನಲ್ಲಿ ಪಂದ್ಯವನ್ನು ಆಡಿದ ಅತ್ಯಂತ ಕ್ರಿಕೆಟಗ ರೋಹಿತ್‌ ಶರ್ಮಾ ಅಲ್ಲ. ಭಾರತ ಮಹಿಳಾ ತಂಡದ ಮಾಜಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರು 39 ವರ್ಷ, 303 ದಿನಗಳ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2022ರಲ್ಲಿ ಅವರು ಲಂಡನ್‌ನ ಲಾರ್ಡ್ಸ್‌ ಅಂಗಣದಲ್ಲಿ ಇಂಗ್ಲೆಂಡ್‌ ಎದುರು ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 40 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಆಟಗಾರರು ಯಾರೂ ಇನ್ನು ಒಡಿಐ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿಲ್ಲ.



194 ರನ್‌ ಕಲೆ ಹಾಕಿದ್ದ ಅಫ್ಘಾನಿಸ್ತಾನ

ಅಂದ ಹಾಗೆ ಪಂದ್ಯವನ್ನು ಮಧ್ಯಾಹ್ನ 01:30 ಕ್ಕೆ ಆರಂಭಿಸಬೇಕಾಗಿತ್ತು, ಆದರೆ ಮಳೆ ಬೀಳುತ್ತಿದ್ದ ಕಾರಣ ಪಂದ್ಯವನ್ನು ಸಂಹೆ 05: 45 ಕ್ಕೆ ಆರಂಭಿಸಲಾಯಿತು. ಪಂದ್ಯ ತಡವಾಗಿದ್ದ ಆರಂಭವಾದ ಕಾರಣ 25 ಓವರ್‌ಗಳಿಗೆ ಇಳಿಸಲಾಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಆಫ್ಘನ್‌ ತಂಡ, ರಹಮಾನ್‌ವುಲ್ಲಾ ಗುರ್ಬಾಝ್‌ ಅವರ ಶತಕದ ಬಲದಿಂದ 24.5 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್‌ ಆಯಿತು. ರಹಮಾನ್‌ವುಲ್ಲಾ ಗುರ್ಬಾಝ್‌ ಅವರು 51 ಎಸೆತಗಳಲ್ಲಿ 102 ರನ್‌ಗಳನ್ನು ಗಳಿಸಿದರು.

16 ರನ್‌ಗೆ ರೋಹಿತ್‌ ಶರ್ಮಾ ಔಟ್‌

195 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಸ್ಪೋಟಕ ಆರಂಭವನ್ನು ಪಡೆದಿದ್ದರು. ಅವರು 15 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 16 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್‌ ಆಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರು ಅನಗತ್ಯವಾಗಿ ಸಿಂಗಲ್‌ ರನ್‌ ಪಡೆಯಲು ಹೋಗಿ ರನ್‌ಔಟ್‌ ಆದರು.