ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಪಂಜಾಬ್‌ ಕಿಂಗ್ಸ್‌ಗೆ ಹಾರ್ದಿಕ್‌ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಅರ್ಷದೀಪ್‌ ಸಿಂಗ್‌?

2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಮಹತ್ವದ ಆಟಗಾರರ ವರ್ಗಾವಣೆ ಒಪ್ಪಂದ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಹಾರ್ದಿಕ್ ಪಾಂಡ್ಯ ಪಂಜಾಬ್‌ಗೆ, ಅರ್ಷದೀಪ್ ಸಿಂಗ್ ಹಾಗೂ ವಿಷ್ಣು ವಿನೋದ್ ಮುಂಬೈಗೆ ಸೇರುವ ಸಾಧ್ಯತೆಯಿದೆ. ನವೆಂಬರ್ 17ರೊಳಗೆ ದಾಖಲೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

IPL 2026: ಪಂಜಾಬ್‌ ಕಿಂಗ್ಸ್‌ಗೆ ಹಾರ್ದಿಕ್‌, ಮುಂಬೈಗೆ ಅರ್ಷದೀಪ್‌?

ಮುಂಬೈ ಇಂಡಿಯನ್ಸ್‌-ಪಂಜಾಬ್‌ ಕಿಂಗ್ಸ್‌ ನಡುವೆ ಟ್ರೇಡ್‌ ಡೀಲ್‌? -

Profile
Ramesh Kote Nov 5, 2026 2:35 PM

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) 2027ರ ಟೂರ್ನಿಗೂ ಮುನ್ನ ಆಟಗಾರರ ಟ್ರೇಡ್‌ ಡೀಲ್‌ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಬ್ಲಾಕ್‌ಬಸ್ಟರ್ ಆಟಗಾರರ ವಿನಿಮಯ ಒಪ್ಪಂದ ಬಹುತೇಕ ಅಂತಿಮ ಹಂತ ತಲುಪಿದೆ ಎಂದು ವರದಿಯಾಗಿದೆ.

ಈ ಒಪ್ಪಂದದ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾಗೂ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ವರ್ಗಾವಣೆಯಾಗಲಿದ್ದಾರೆ. ಇದಕ್ಕೆ ಪ್ರತಿಯಾಗಿ ಪಂಜಾಬ್ ತಂಡದ ಪ್ರಮುಖ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh) ಮತ್ತು ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಎರಡೂ ಫ್ರಾಂಚೈಸಿಗಳ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ತಾತ್ವಿಕವಾಗಿ ಸಮ್ಮತಿ ಸೂಚಿಸಿದ್ದು, ಅಗತ್ಯ ದಾಖಲೆಗಳನ್ನು ನವೆಂಬರ್ 17ರ ಆಟಗಾರರ ರಿಟೆನ್ಷನ್ ಗಡುವಿನೊಳಗೆ ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸುವ ನಿರೀಕ್ಷೆಯಿದೆ. ಆದರೆ ಈವರೆಗೆ ಎರಡೂ ತಂಡಗಳು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

WPL 2027 schedule: ಮಹಿಳಾ ಪ್ರೀಮಿಯರ್‌ ಲೀಗ್‌ ಸಂಪೂರ್ಣ ವೇಳಾಪಟ್ಟಿ, ಜ 14 ರಂದು ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಮುಖಾಮುಖಿ!

ಹಾರ್ದಿಕ್ ಬದಲಿಗೆ ಅರ್ಷದೀಪ್, ವಿಷ್ಣು ವಿನೋದ್

ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ರಮುಖ ವೇಗದ ಬೌಲರ್ ಅಗತ್ಯವಿದೆ. ಅದರಲ್ಲೂ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡುವ ಎಡಗೈ ವೇಗದ ಬೌಲರ್‌ಗಾಗಿ ತಂಡ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಆಸಕ್ತಿ ತೋರಿಸಿದೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತಂಡಕ್ಕೆ ಅನುಭವಿ ಆಲ್‌ರೌಂಡರ್ ಅಗತ್ಯವಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಲ್ಲ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತರಲು ಮುಂದಾಗಿದೆ. ವಿಷ್ಣು ವಿನೋದ್ ಕೂಡ ಈ ಒಪ್ಪಂದದ ಭಾಗವಾಗುವ ಸಾಧ್ಯತೆಯಿದ್ದು, ಮುಂಬೈ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪಿಂಗ್ ಆಯ್ಕೆ ಸಿಗಲಿದೆ.

ಮುಂಬೈ ನಾಯಕತ್ವದಲ್ಲಿ ಹಾರ್ದಿಕ್‌ಗೆ ಹಿನ್ನಡೆ?

2024ರ ಐಪಿಎಲ್ ಆವೃತ್ತಿಗೂ ಮುನ್ನ ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತರಲಾಗಿತ್ತು. ಬಳಿಕ ರೋಹಿತ್ ಶರ್ಮಾ ಬದಲಿಗೆ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಆದರೆ ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ತಂಡ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗಿರಲಿಲ್ಲ. 2026ರ ಐಪಿಎಲ್‌ ಟೂರ್ನಿಯಲ್ಲಿ ತಂಡ, 14 ಪಂದ್ಯಗಳಿಂದ ಕೇವಲ ನಾಲ್ಕು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಉದ್ದೇಶದಿಂದ ಹಾರ್ದಿಕ್ ಅವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐವರು ಒಡಿಐ ಕ್ರಿಕೆಟಿಗರನ್ನು ಆರಿಸಿದ ಎಸ್‌ ಬದ್ರಿನಾಥ್‌!

ಅರ್ಷದೀಪ್ ಸಿಂಗ್‌ಗೆ ಹೊಸ ಸವಾಲು

ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅರ್ಷದೀಪ್ ಸಿಂಗ್, ಕಳೆದ ಕೆಲವು ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.‌ 2025ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿ ಅವರನ್ನು 18 ಕೋಟಿ ರು.ಗೆ ತಂಡದಲ್ಲಿ ಉಳಿಸಿಕೊಂಡಿತ್ತು. ಇದೀಗ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರುವ ಸಾಧ್ಯತೆ ಎದುರಾಗಿದೆ. ಅರ್ಷದೀಪ್ ಮತ್ತು ಜಸ್‌ಪ್ರೀತ್‌ ಬುಮ್ರಾ ಜೋಡಿ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂಬ ನಿರೀಕ್ಷೆಯಿದೆ.

ನವೆಂಬರ್ 17ರೊಳಗೆ ಅಂತಿಮ ನಿರ್ಧಾರ

2027ರ ಐಪಿಎಲ್ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಲು ನವೆಂಬರ್ 17 ಕೊನೆಯ ದಿನವಾಗಿದೆ. ಈ ಗಡುವಿನೊಳಗೆ ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಮತ್ತು ವಿಷ್ಣು ವಿನೋದ್ ಅವರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಈ ಒಪ್ಪಂದ ಅಧಿಕೃತಗೊಂಡರೆ, 2027ರ ಐಪಿಎಲ್ ಹರಾಜಿಗೂ ಮುನ್ನ ನಡೆಯುವ ಅತ್ಯಂತ ದೊಡ್ಡ ಆಟಗಾರರ ವರ್ಗಾವಣೆಗಳಲ್ಲಿ ಇದೂ ಒಂದಾಗಲಿದೆ.