ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಮೊಹಿಂದರ್‌ ಅಮರನಾಥ್‌ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್‌ ಶರ್ಮಾ!

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಆಡಿವ ಮೂಲಕ ಭಾರತದ ಮಾಜಿ ನಾಯಕ ರೋಹಿತ್‌ ಶರ್ಮಾ ಮಹತ್ವದ ದಾಖಲೆಯನ್ನು ಬರೆಯಲಿದ್ದಾರೆ.

IND vs AFG: ದೊಡ್ಡ ದಾಖಲೆಯ ಸನಿಹದಲ್ಲಿ ರೋಹಿತ್‌ ಶರ್ಮಾ!

ದೊಡ್ಡ ದಾಖಲೆಯ ಸನಿಹದಲ್ಲಿ ರೋಹಿತ್‌ ಶರ್ಮಾ. -

Profile
Ramesh Kote Jun 12, 2026 2:55 PM

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಜೂನ್‌ 13 ರಂದು ಶನಿವಾರ ನಡೆಯುವ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಗಾಯದಿಂದ ಗುಣಮುಖರಾದ ಬಳಿಕ ರೋಹಿತ್‌ ಶರ್ಮಾ ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ್ದು, ಆಫ್ಘನ್‌ ಏಕದಿನ ಸರಣಿಯನ್ನು ಆಡಲು ವೈದ್ಯಕೀಯ ತಂಡದಿಂದ ಗ್ರೀನ್‌ ಸಿಗ್ನಲ್‌ ಪಡೆದಿದ್ದಾರೆ. ಅಂದ ಹಾಗೆ ಈ ಪಂದ್ಯದ ಮೂಲಕ ರೋಹಿತ್‌ ಶರ್ಮಾ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ.

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವಾಗ ರೋಹಿತ್‌ ಶರ್ಮಾ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಕೆಲ ಪಂದ್ಯಗಳಿಗೆ ಗೈರಾಗಿದ್ದ ರೋಹಿತ್‌ ಶರ್ಮಾ, ಗುಣಮುಖರಾದ ಬಳಿಕ ಪ್ಲೇಯಿಂಗ್‌ XIಗೆ ಮರಳಿದರೂ ಅವರು ಇಂಪ್ಯಾಕ್ಸ್‌ ಪ್ಲೇಯರ್‌ ಆಗಿ ಬ್ಯಾಟಿಂಗ್‌ ನಡೆಸಿದ್ದರು. ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಮನ್‌ ಗಿಲ್‌ ಜೊತೆ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಇನಿಂಗ್ಸ್‌ ಆರಂಭಿಸಲಿದ್ದಾರೆ.

5 ತಿಂಗಳ ಬಳಿಕ ಏಕದಿನ ಆಡಲು ಸಜ್ಜಾದ ಭಾರತ; ನಾಳೆ ಆಫ್ಘಾನ್‌ ವಿರುದ್ಧ ಮೊದಲ ಪಂದ್ಯ

ಮೊದಲನೇ ಏಕದಿನ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿದ್ದಂತೆ ರೋಹಿತ್‌ ಶರ್ಮಾ ದೊಡ್ಡ ದಾಖಲೆಯೊಂದನ್ನು ಬರೆಯಲಿದ್ದಾರೆ. ರೋಹಿತ್‌ಗೆ ಈಗ ವಯಸ್ಸು 39 ವರ್ಷ 44 ದಿನಗಳು. ಇದೀಗ ಧರ್ಮಶಾಲಾದಲ್ಲಿ ಟಾಸ್‌ ಮುಗಿಯುತ್ತಿದ್ದಂತೆ ಅಂತಾರಾಷ್ಟೀಯ ಏಕದಿನ ಪಂದ್ಯವನ್ನು ಆಡಿದ ವಿಶ್ವದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ಮಾಜಿ ಆಟಗಾರ ಮೊಹಿಂದರ್‌ ಅಮರನಾಥ್‌ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಅಮರನಾಥ್‌ 39 ವರ್ಷ, 36 ದಿನಗಳ ವಯಸ್ಸಿನಲ್ಲಿ 1989ರ ಅಕ್ಟೋಬರ್‌ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 1983ರ ವಿಶ್ವಕಪ್‌ ಗೆದ್ದಿದ್ದ ಭಾರತ ತಂಡದಲ್ಲಿ ಅಮರನಾಥ್‌ ಉಪ ನಾಯಕರಾಗಿದ್ದರು.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು 38 ವರ್ಷ ವಯಸ್ಸಿದ್ದಾಗ ತಮ್ಮ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2012ರ ಮಾರ್ಚ್‌ ತಿಂಗಳಲ್ಲಿ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2013ರಲ್ಲಿ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದಾಗ ತೆಂಡೂಲ್ಕರ್‌ ಅವರ ವಯಸ್ಸು 40 ವರ್ಷವಾಗಿತ್ತು. 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಿದರೆ, 40ರ ವಯಸ್ಸಿನಲ್ಲಿ ಒಡಿಐ ಆಡಿದ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

IND vs AFG: ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಗಾಯಕ್ವಾಡ್‌ ಬದಲು ಜೈಸ್ವಾಲ್‌ಗೆ ಚಾನ್ಸ್‌ ನೀಡಲು ಕಾರಣ ತಿಳಿಸಿದ ಆಕಾಶ್‌ ಚೋಪ್ರಾ!

ರೋಹಿತ್‌ ಶರ್ಮಾರ ಒಡಿಐ ಅಂಕಿಅಂಶಗಳು

2007ರಲ್ಲಿ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2013ರ ವರೆಗೆ ಅವರು ಭಾರತ ತಂಡಕ್ಕೆ ಆಗಮಿಸುತ್ತಿದ್ದರು ಹಾಗೂ ನಿರ್ಗಮಿಸುತ್ತಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಳಿಕ ಅವರು ಎಂಎಸ್‌ ಧೋನಿ ನಾಯಕತ್ವದ ಅಡಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಅವಕಾಶವನ್ನು ನೀಡಲಾಗಿತ್ತು. 2013ರ ಜನವರಿ ತಿಂಗಳಲ್ಲಿ ಓಪನರ್‌ ಆದ ಬಳಿಕ ಅವರು ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.

ಶಿಖರ್‌ ಧವನ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸುವ ಅವಕಾಶವನ್ನು ರೋಹಿತ್‌ ಶರ್ಮಾ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದರು. 2022ರ ವರೆಗೂ ಧವನ್‌ ಮತ್ತು ರೋಹಿತ್‌ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಜೊತೆಯಲ್ಲಿ ಆಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ರೋಹಿತ್‌ ಶರ್ಮಾ, 282 ಪಂದ್ಯಗಳಲ್ಲಿ 11577 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 33 ಶತಕಗಳು ಹಾಗೂ ಮೂರು ದ್ವಿಶತಕಗಳನ್ನು ಕೂಡ ಬಾರಿಸಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದಿತ್ತು. ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿತ್ತು.