ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಓವಲ್‌ ಪಿಚ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಸುನೀಲ್‌ ಗವಾಸ್ಕರ್‌!

ಭಾರತ ಕ್ರಿಕೆಟ್ ತಂಡ ಲಂಡನ್‌ನ ಕೆನಿಂಗ್ಟನ್‌ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದ ಪಿಚ್ ಕುರಿತು ಬ್ಯಾಟಿಂಗ್‌ ದಿಗ್ಗಜ ಸುನಿಲ್ ಗವಾಸ್ಕರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

IND vs ENG: ಕೆನಿಂಗ್ಟನ್‌ ಓವಲ್‌ ಪಿಚ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ಕಿಡಿ!

ಓವಲ್‌ ಪಿಚ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Profile Ramesh Kote Aug 1, 2025 5:25 PM

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಲ್ಲಿನ ಕೆನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ (IND vs ENG) ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತ್ತು. ಹಾಗಾಗಿ ಪ್ರವಾಸಿ ಭಾರತ ತಂಡ (India) 64 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತ್ತು. ಮರುದಿನ, ಅಂದರೆ ಎರಡನೇ ದಿನ ಟೀಮ್ ಇಂಡಿಯಾ ಹೆಚ್ಚುವರಿ 20 ರನ್ ಸೇರಿಸಿ ಒಟ್ಟು 224 ರನ್‌ಗಳಿಗೆ ಆಲೌಟ್ ಆಯಿತು. ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಪಿಚ್ ಬಗ್ಗೆ ಇಂಗ್ಲೆಂಡ್‌ನ ಬೌಲಿಂಗ್ ದಾಳಿಯನ್ನು ಪ್ರಶ್ನಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಉತ್ತಮ ಬೌಲರ್‌ಗಳಿಲ್ಲ, ಆದ್ದರಿಂದ ಅವರು ಇಂಥಾ ಪಿಚ್ ಅನ್ನು ಸಿದ್ದಪಡಿಸಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆನಿಂಗ್ಸನ್‌ ಓವಲ್‌ ಪಿಚ್ ವೇಗದ ಬೌಲರ್‌ಗಳಿಗೆ ತುಂಬಾ ಸಹಾಯಕವಾಗಿದೆ ಎಂದು ಸಾಬೀತಾಗಿದೆ. ಸುನಿಲ್ ಗವಾಸ್ಕರ್ ಪಿಚ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಇಂಗ್ಲೆಂಡ್‌ನ ಬೌಲಿಂಗ್ ವಿಭಾಗವನ್ನು ಟೀಕಿಸಿದ್ದಾರೆ. ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್‌ನಂತಹ ಪ್ರಮುಖ ಬೌಲರ್‌ಗಳು ಇಂಗ್ಲೆಂಡ್ ತಂಡದಲ್ಲಿ ಆಡುತ್ತಿಲ್ಲ. ಸ್ಟೋಕ್ಸ್ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಆರ್ಚರ್ ಮತ್ತು ಕಾರ್ಸ್ ಕೂಡ ನಿಯಮಿತವಾಗಿ ವಿಕೆಟ್ ಪಡೆದಿದ್ದಾರೆ.

IND vs ENG: ʻಶುಭಮನ್‌ ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ʼ,-ಆಕಾಶ್‌ ಚೋಪ್ರಾ!

"ಇಂಗ್ಲೆಂಡ್‌ ತಂಡದ ಬಲಿಂಗ್ ಚೆನ್ನಾಗಿಲ್ಲ, ಹಾಗಾಗಿ ಅವರು ಅಂತಹ ಪಿಚ್ ಮಾಡಿದ್ದಾರೆ," ಎಂದು ಆರೋಪ ಮಾಡಿದ ಗವಾಸ್ಕರ್, "ಬೆನ್‌ ಸ್ಟೋಕ್ಸ್ ವಿಕೆಟ್ ಪಡೆದರು, ಆರ್ಚರ್ ವಿಕೆಟ್ ಪಡೆದರು, ಕಾರ್ಸ್ ವಿಕೆಟ್ ಪಡೆದರು. ಅವರು ಆಡದಿದ್ದರೆ, ಯಾರು ವಿಕೆಟ್ ತೆಗೆದುಕೊಳ್ಳುತ್ತಾರೆ? ಅದಕ್ಕಾಗಿಯೇ ಅವರು ಟಾಂಗ್ ಮತ್ತು ಇತರ ಬೌಲರ್‌ಗಳಿಗೆ ಸಹಾಯ ಸಿಗುವಂತೆ ಅಂತಹ ಪಿಚ್ ಮಾಡಿದ್ದಾರೆ‌," ಎಂದು ಅವರು ಹೇಳಿದ್ದಾರೆ.

ಓವಲ್ ಪಿಚ್ ತುಂಬಾ ವಿಶೇಷವಾಗಿತ್ತು

ಓವಲ್ ಪಿಚ್ ಮೇಲೆ ಹುಲ್ಲಿನದ್ದು, ಅದು ಬೌಲರ್‌ಗಳಿಗೆ ಬಹಳಷ್ಟು ಸಹಾಯ ಮಾಡುತ್ತಿತ್ತು. ವಿಶೇಷವಾಗಿ ಮೋಡ ಕವಿದ ವಾತಾವರಣದಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿತ್ತು. ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ತಮ್ಮ ಮೊದಲ ಪಂದ್ಯದಲ್ಲಿಯೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅವರು ಭಾರತದ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ. ಆದರೆ ಜಾಶ್ ಟಾಂಗ್ ಮತ್ತು ಜೇಮೀ ಓವರ್ಟನ್ ತಮ್ಮ ಲೈನ್ ಮತ್ತು ಲೆನ್ತ್‌ನಿಂದ ಹೊರಗೆ ಉಳಿಯುವಂತೆ ಕಾಣುತ್ತಿದ್ದರು. ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಕ್ರಿಸ್ ವೋಕ್ಸ್, ಫೀಲ್ಡಿಂಗ್ ಮಾಡುವಾಗ ಭುಜದ ಗಾಯದಿಂದಾಗಿ ಮೈದಾನವನ್ನು ತೊರೆದಿದ್ದಾರೆ. ಅವರು ಇದೀಗ ಐದನೇ ಟೆಸ್ಟ್‌ನಿಂದ ಹೊರ ನಡೆದಿದ್ದಾರೆ.

IND vs ENG 5th Test: ಪಂದ್ಯ ಆರಂಭಗೊಂಡ ಅರ್ಧ ಗಂಟೆಯಲ್ಲೇ ಭಾರತ ಆಲೌಟ್‌

ಇಂಗ್ಲೆಂಡ್ ದುರ್ಬಲ ಬೌಲಿಂಗ್ ದಾಳಿಯಿಂದಾಗಿ ಅಂತಹ ಪಿಚ್ ಮಾಡಿದೆ ಎಂದು ಗವಾಸ್ಕರ್ ನಂಬಿದ್ದಾರೆ. ಪಿಚ್‌ನಿಂದ ಸಹಾಯ ಪಡೆಯುವ ಮೂಲಕ ತಮ್ಮ ಬೌಲರ್‌ಗಳು ವಿಕೆಟ್ ಪಡೆಯಬೇಕೆಂದು ಅವರು ಬಯಸಿದ್ದರು. ಆದಾಗ್ಯೂ, ಭಾರತೀಯ ಬ್ಯಾಟ್ಸ್‌ಮನ್‌ಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಕರುಣ್ ನಾಯರ್ ಅವರ ಅರ್ಧಶತಕದ ಇನಿಂಗ್ಸ್‌ ತಂಡಕ್ಕೆ ಮುಖ್ಯವಾಗಿತ್ತು. ಮಳೆ ಪಂದ್ಯದ ಮೊದಲನೇ ದಿನ ಪದೇ ಪದೇ ಅಡ್ಡಿಯುಂಟಾಗುತ್ತಿದ್ದರಿಂದ ಬ್ಯಾಟ್ಸ್‌ಮನ್‌ಗಳು ಸಮಸ್ಯೆಗಳನ್ನು ಎದುರಿಸಿದರು. ಆದರೆ ಅವರು ತಾಳ್ಮೆಯಿಂದಿದ್ದರು ಮತ್ತು ರನ್ ಗಳಿಸುತ್ತಲೇ ಇದ್ದರು.