ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಜಸ್‌ಪ್ರೀತ್‌ ಬುಮ್ರಾ ತಂಡದಲ್ಲಿರುವುದು ಭಾರತದ ಅದೃಷ್ಟ ಎಂದ ಫಾಫ್‌ ಡು ಪ್ಲೆಸಿಸ್‌!

ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದಾಗಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್‌ ಮಾತನಾಡಿ, ಜಸ್‌ಪ್ರೀತ್ ಬುಮ್ರಾ ತಂಡದಲ್ಲಿರುವುದೇ ಟೀಮ್ ಇಂಡಿಯಾದ ಅದೃಷ್ಟ ಎಂದು ಹಾಡಿ ಹೊಗಳಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಇರುವುದು ಭಾರತ ತಂಡಕ್ಕೆ ಅದೃಷ್ಟ: ಡುಪ್ಲೆಸಿಸ್‌!

ಜಸ್‌ಪ್ರೀತ್‌ ಬುಮ್ರಾಗೆ ಫಾಫ್‌ ಡು ಪ್ಲೆಸಿಸ್‌ ಶ್ಲಾಘನೆ. -

Profile
Ramesh Kote Mar 6, 2026 8:25 PM

ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್​ನ (T20- World Cup 2026) ಸೆಮಿಫೈನಲ್​ ಪಂದ್ಯದಲ್ಲಿ (IND vs ENG) ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಳು ರನ್ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡಕ್ಕೆ 253 ರನ್ ಗಳ ಟಾರ್ಗೆಟ್ ನೀಡಿತು. ಬಳಿಕ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಜಾಕೋಬ್‌ ಬೆಥೆಲ್‌ ಶತಕದ ಹೊರತಾಗಿಯೂ ಡೆತ್‌ ಓವರ್‌ಗಳಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿಗೆ ನಲುಗಿತು. ಪರಿಣಾಮವಾಗಿ 246 ರನ್​ ಕಲೆಹಾಕಿ 7 ರನ್​ ಅಂತರದಲ್ಲಿ ಸೋಲು ಕಂಡಿತು.

ಇದರ ನಡುವೆ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟರ್ ಫಾಫ್‌ ಡು ಪ್ಲೆಸಿಸ್‌ ಮಾತನಾಡಿ, ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಅವರಂತಹ ಆಟಗಾರ ತಂಡದಲ್ಲಿರುವುದು ಭಾರತದ ಅದೃಷ್ಟ. ತಂಡ ಸಂಕಷ್ಟಕ್ಕೆ ಸಿಲುಕಿದಾಗ ಅವರು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ.

"ಅವರನ್ನು (ಜಸ್‌ಪ್ರೀತ್ ಬುಮ್ರಾ) ಹೊಂದಿರುವ ಟೀಮ್ ಇಂಡಿಯಾ ಎಷ್ಟು ಅದೃಷ್ಟಶಾಲಿ ಎಂದು ಅವರಿಗೇ ಅರ್ಥವಾಗುತ್ತಿಲ್ಲ. ಇದು ಪದೇ-ಪದೆ ಸಾಬೀತಾಗಿದೆ, ಯಾವುದೇ ಸ್ವರೂಪವನ್ನು ಲೆಕ್ಕಿಸದೆ, ನೀವು ಅವರಿಗೆ ಚೆಂಡನ್ನು ನೀಡಿದರೆ ಅವರು ನಿಮ್ಮ ಪರ ಪಂದ್ಯಗಳನ್ನು ಗೆಲ್ಲಿಸುತ್ತಾರೆ. ಬುಮ್ರಾ ಅವರು ತಂಡದಲ್ಲಿರುವುದು ಸೂಪರ್ ಪವರ್ ಇದ್ದಂತೆ. ಅವರು ಭಾರತ ತಂಡಕ್ಕೆ ಒಂದು ರೀತಿ ಜೀನಿ ಇದ್ದಂತೆ," ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

T20 World Cup: ಬೌಲಿಂಗ್‌ ವೈಫಲ್ಯ ಅನುಭವಿಸುತ್ತಿರುವ ವರುಣ್‌ ಚಕ್ರವರ್ತಿ ಬಗ್ಗೆ ವೀರೇಂದ್ರ ಸೆಹ್ವಾಗ್‌ ದೊಡ್ಡ ಹೇಳಿಕೆ!

ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಬುಮ್ರಾ

ಭಾರತ ತಂಡ ನೀಡಿದ್ದ 254 ರನ್‌ಗಳ ಬೃಹತ್ ಮೊತ್ತ ಹಿಂಬಾಲಿಸಿದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಅವರು ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು. ಬಳಿಕ 11ನೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ಮತ್ತು ಜಾಕೋಬ್ ಬೆಥೆಲ್ ಅವರು ಬುಮ್ರಾ ಅವರ ಬೌಲಿಂಗ್‌ನಲ್ಲಿ ಒಂದೆರಡು ಬೌಂಡರಿ ಬಾರಿಸಿದ ಹೊರತಾಗಿಯೂ, ಡೆತ್ ಓವರ್ ನಲ್ಲಿ ಬುಮ್ರಾ ನಿಯಂತ್ರಣ ಸಾಧಿಸಿದರು.

ಕಡೆಯ 5 ಓವರ್‌ಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 69 ರನ್ ಅಗತ್ಯವಿದ್ದಾಗ ಬುಮ್ರಾ 16ನೇ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಅದರಲ್ಲಿ ಕೇವಲ ಎಂಟು ರನ್‌ಗಳು ಮಾತ್ರ ಬಿಟ್ಟುಕೊಟ್ಟು ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಒತ್ತಡ ಹೆಚ್ಚಿಸಿದರು. ಮತ್ತೆ 18ನೇ ಓವರ್‌ನಲ್ಲಿ ಅವರು ಕೇವಲ ಆರು ರನ್‌ಗಳನ್ನು ಬಿಟ್ಟು ಕೊಟ್ಟರು. ಕೊನೆಯ ಓವರ್‌ನಲ್ಲಿ ಶಿವಂ ದುಬೆ 22 ರನ್‌ಗಳನ್ನು ಕೊಟ್ಟು ದುಬಾರಿಯಾದರೂ, ಅವರ ಸ್ಪೆಲ್ ಭಾರತದ ಏಳು ರನ್ ಗೆಲುವು ಸಾಧಿಸಿತು.

T20 World Cup: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!

ಇನ್ನು ಬುಮ್ರಾ ಟೂರ್ನಿಯಲ್ಲಿ ಏಳು ಪಂದ್ಯಗಳನ್ನಾಡಿದ್ದು, 6.62ರ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಮಾರ್ಚ್ 8 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.