IND vs ENG: ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಂಪೈರಿಂಗ್ ಬಗ್ಗೆ ಕ್ರಿಸ್ ವೋಕ್ಸ್ ಅಸಮಾಧಾನ!
ಭಾರತ ತಂಡದ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್‌ನ ಕೆಲ ತೀರ್ಮಾನದ ಬಗ್ಗೆ ಇಂಗ್ಲೆಂಡ್ ಹಿರಿಯ ವೇಗಿ ಕ್ರಿಸ್ ವೋಕ್ಸ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಎಲ್‌ಬಿಡಬ್ಲ್ಯು ನೀಡದ ಬಗ್ಗೆ ಮೊದಲನೇ ದಿನದಾಟದ ಬಳಿಕ ಕ್ರಿಸ್ ವೋಕ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಪೈರ್‌ಗಳ ವಿರುದ್ಧ ಕ್ರಿಸ್ ವೋಕ್ಸ್ ಬೇಸರ.

ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೊದಲನೇ ದಿನ ಅಂಪೈರ್‌ನ ಕೆಲವು ನಿರ್ಧಾರಗಳ ಬಗ್ಗೆ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಕ್ರಿಸ್ ವೋಕ್ಸ್ (Chris Woaks) ಬೇಸರ ವ್ಯಕ್ತಪಡಿಸಿದ್ದಾರೆ. ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದ ಕ್ರಿಸ್ ವೋಕ್ಸ್ ಅವರು, ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಎಲ್‌ಬಿಡಬ್ಲ್ಯು ಬಗ್ಗೆ ಅಂಪೈರ್ ಔಟ್ ನೀಡದ ಬಗ್ಗೆ ವೋಕ್ಸ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೊದಲನೇ ದಿನದಾಟದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಬುಧವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡಕ್ಕೆ ಕ್ರಿಸ್ ವೋಕ್ಸ್ ಆರಂಭದಲ್ಲಿ ಕಾಡಿದ್ದರು. ಅವರು ಇನ್‌ಫಾರ್ಮ್ ಬ್ಯಾಟರ್ ಕೆಎಲ್ ರಾಹುಲ್ ಹಾಗೂ 31 ರನ್ ಗಳಿಸಿ ಕ್ರಿಸ್‌ನಲ್ಲಿ ನೆಲೆಯೂರಿದ್ದ ಕರುಣ್ ನಾಯರ್ ಅವರನ್ನು ಬೇಗ ಔಟ್ ಮಾಡಿದ್ದರು. ನಂತತ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಕೂಡ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ್ದರು. ಆದರೆ, ಅಂಪೈರ್ ನಾಟ್‌ಔಟ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ಔಟ್‌ನಿಂದ ಬಚಾವ್ ಆಗಿದ್ದರು.
IND vs ENG: ಕುಲ್ದೀಪ್ ಯಾದವ್‌ರನ್ನು ಆಯ್ಕೆ ಮಾಡದ ಬಗ್ಗೆ ಸುನೀಲ್ ಗವಾಸ್ಕರ್ ಅಸಮಾಧಾನ!
ಈ ವೇಳೆ ಕ್ರಿಸ್ ವೋಕ್ಸ್ ಡಿಆರ್‌ಎಸ್ ಮೊರೆ ಹೋಗಿದ್ದರು. ವಿಡಿಯೊ ರೀಪ್ಲೆನಲ್ಲಿ ಚೆಂಡು ಆಫ್‌ಸ್ಟಂಪ್ ಮೇಲೆ ತಗುಲಿತ್ತು. ಆದರೆ, ಅಂಪೈರ್ ಕರೆಯಾಗಿದ್ದರಿಂದ ಯಶಸ್ವಿ ಜೈಸ್ವಾಲ್ ಬಚಾವ್ ಆಗಿದ್ದರು. ಇದಾದ ಬಳಿಕ ಕನ್ನಡಿಗ ಕರುಣ್ ನಾಯರ್ ಕೂಡ ಒಮ್ಮೆ ಎಲ್‌ಬಿಡಬ್ಲ್ಯುನಿಂದ ಬಚಾವ್ ಆಗಿದ್ದರು. ಜೈಸ್ವಾಲ್ ನಂತರ 87 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಕರುಣ್ ನಾಯರ್ 50 ಎಸೆತಗಳಲ್ಲಿ 31 ರನ್ ಗಳಿಸಿದ್ದರು.
ಮೊದಲನೇ ದಿನದಾಟದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಸ್ ವೋಕ್ಸ್, "ಹೌದು, ಇದರಿಂದ ತುಂಬಾ ನಿರಾಶದಾಯಕವಾಗಿದೆ. ಇಂಥಾ ನಿರ್ಧಾರಗಳು ನಿಮ್ಮ ಹಾದಿಯಲ್ಲಿ ಸಾಗಬೇಕಾಗುತ್ತದೆ ಆದರೆ, ಇದು ಪಂದ್ಯವಾಗಿದ್ದರಿಂದ ನಾವು ಪಂದ್ಯವನ್ನು ಆಡುವ ಮೂಲಕ ಮುಂದುವರಿಸಬೇಕಾಗಿದೆ," ಎಂದು ಹೇಳಿದ್ದಾರೆ.
ಐದು ವಿಕೆಟ್‌ಗಳನ್ನು ಕಳೆದುಕೊಂಡರೂ ಮೊದಲನೇ ದಿನ ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ನಾಯಕ ಶುಭಮನ್ ಗಿಲ್ ಭರ್ಜರಿ ಶತಕವನ್ನು ಸಿಡಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇವರ ಜೊತೆಗೆ 99 ರನ್‌ಗಳ ಜೊತೆಯಾಟವನ್ನು ಆಡಿದ ರವೀಂದ್ರ ಜಡೇಜಾ ಅಜೇಯ 41 ರನ್‌ಗಳನ್ನು ಗಳಿಸಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 85 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 310 ರನ್‌ಗಳನ್ನು ಕಲೆ ಹಾಕಿದೆ.
IND vs ENG: ಶತಕ ಸಿಡಿಸಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್!
ಗಿಲ್-ಜಡೇಜಾ ಜೊತೆಯಾಟವನ್ನು ಮುರಿಯುತ್ತೇವೆ: ಕ್ರಿಸ್ ವೋಕ್ಸ್
ಪಂದ್ಯದ ಎರಡನೇ ದಿನದಾಟದ ಆರಂಭದಲ್ಲಿ ಶುಭಮನ್ ಗಿಲ್ ಹಾಗೂ ರವೀಂದ್ರ ಜಡೇಜಾ ಅವರ ಜೊತೆಯಾಟವನ್ನು ಮುರಿಯುತ್ತೇವೆಂದು ಕ್ರಿಸ್ ವೋಕ್ಸ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
"ಪಿಚ್ ಇನ್ನೂ ಚೆನ್ನಾಗಿದೆ. ನೀವು ಸರಿಯಾದ ಜಾಗಗಳಲ್ಲಿ ಪಿಚ್ ಮಾಡಿದರೆ ಸಾಕು. ನಾವು ಇಲ್ಲಿ ನಿಯಮಿತವಾಗಿ ವಿಕೆಟ್‌ಗಳನ್ನು ಕಬಳಿಸಿದ್ದೇವೆ. ನಾವು ಎರಡನೇ ದಿನದಾಟದ ಆರಂಭದಲ್ಲಿ ನಾವು ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲಿದ್ದೇವೆ," ಎಂದು ಇಂಗ್ಲೆಂಡ್ ವೇಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಮೊದಲನೇ ದಿನ ಪರಿಣಾಮಕಾರಿಯಾಗಿ ಬೌಲ್ ಮಾಡಿದ ಕ್ರಿಸ್ ವೋಕ್ಸ್ ಅವರು 21 ಓವರ್‌ಗಳಿಗೆ 59 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬ್ರೈಡೆನ್ ಕಾರ್ಸ್, ಬೆನ್ ಸ್ಟೋಕ್ಸ್ ಹಾಗೂ ಶೋಯೆಬ್ ಬಷೀರ್ ತಲಾ ಒಂದೊಂದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.