ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್‌ ಹೆಡ್‌ ಔಟ್‌!

ಭಾರತ ವಿರುದ್ಧದ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಆಸ್ಟ್ರೇಲಿಯಾ ಆರಂಭಿಕ ಟ್ರಾವಿಸ್‌ ಹೆಡ್‌ ಅವರು ಹೊರ ನಡೆದಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧದ ಆಷಸ್‌ ಟೆಸ್ಟ್‌ ಸರಣಿಗೆ ತಯಾರಿ ನಡೆಸುವ ಹಿನ್ನೆಲೆಯಲ್ಲಿ ಅವರು ಟಿ20 ತಂಡವನ್ನು ತೊರೆದಿದ್ದಾರೆ. ಮೂರು ಪಂದ್ಯಗಳ ಮುಕ್ತಾಯಕ್ಕೆ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ.

ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್‌ ಹೆಡ್‌ ಔಟ್‌!

ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಟ್ರಾವಿಸ್‌ ಹೆಡ್‌ ಔಟ್‌. -

Profile Ramesh Kote Nov 3, 2025 8:23 PM

ನವದೆಹಲಿ: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ (Travis Head) ಅವರು ಟಿ20ಐ ಸರಣಿಯ (IND vs AUS) ಇನ್ನುಳಿದ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಮುಂಬರುವ ಆಷಸ್‌ ಟ್ರೋಫಿ (Ashes) ಟೆಸ್ಟ್‌ ಸರಣಿಗೆ ತಯಾರಿ ನಡೆಸುವ ಸಲುವಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ಈ ನಿರ್ಧಾರವನ್ನು ತೆಗೆದುಕೊಂಡಿದೆ. 31ನೇ ವಯಸ್ಸಿನ ಬ್ಯಾಟ್ಸ್‌ಮನಬ್‌ ದಕ್ಷಿಣ ಆಸ್ಟ್ರೇಲಿಯಾ ತಂಡದ ಪರ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಆಡಲಿದ್ದಾರೆ. 10 ರಂದು ತಮ್ಮ ಸಹ ಆಟಗಾರ ಅಲೆಕ್ಸ್‌ ಕೇರಿ ಅವರ ಜೊತೆ ತಸ್ಮೇಲಿಯಾ ವಿರುದ್ದ ಕಾದಾಟ ನಡೆಸಲಿದ್ದಾರೆ. ಪರ್ತ್‌ನಲ್ಲಿ ನವೆಂಬರ್‌ 21 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಆಸ್ಟ್ರೇಲಿಯಾ ಎದುರಿಸಲಿದೆ.

ಕಳೆದ ಜುಲೈನಲ್ಲಿ ವೆಸ್ಟ್‌ ಇಂಡೀಸ್‌ ಪ್ರವಾಸದ ಬಳಿಕ ಟ್ರಾವಿಸ್‌ ಹೆಡ್‌ ಅವರಿಗೆ ಮೊದಲ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವಾಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ರನ್‌ ಗಳಿಸುವಲ್ಲಿ ವಿಫಲರಾಗುತ್ತಿರುವ ಹೆಡ್‌, ಕಳೆದ ಎಂಟು ಇನಿಂಗ್ಸ್‌ಗಳಿಂದ 31 ರನ್‌ ಇವರ ವೈಯಕ್ತಿಕ ಮೊತ್ತವಾಗಿದೆ. ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 142 ರನ್‌ಗಳನ್ನು ಕಲೆ ಹಾಕಿದ್ದರು.

AUS vs IND: ಟಿ20 ತಂಡದಿಂದ ಕುಲ್ದೀಪ್ ಯಾದವ್ ಬಿಡುಗಡೆ

ಆಷಸ್‌ ಟ್ರೋಫಿ ನಿಮಿತ್ತ ಭಾರತ ವಿರುದ್ದ ಟಿ20ಐ ಸರಣಿಯನ್ನು ತೊರೆಯುತ್ತಿರುವ ಮೂರನೇ ಆಸ್ಟ್ರೇಲಿಯನ್‌ ಆಟಗಾರ ಆಗಿದ್ದಾರೆ. ಇದಕ್ಕೂ ಮುನ್ನ ಜಾಶ್‌ ಹೇಝಲ್‌ವುಡ್‌ ಹಾಗೂ ಶಾನ್‌ ಎಬಾಟ್‌ ಅವರು ಕೂಡ ಹೊರ ನಡೆದಿದ್ದರು. ಆರಂಭಿಕ ಎರಡು ಪಂದ್ಯಗಳಲ್ಲಿ ಈ ವೇಗಿಗಳು ಆಡಿದ್ದರು. ನ್ಯೂ ಸೌಥ್‌ವೇಲ್ಸ್‌ ಪರ ಈ ಇಬ್ಬರೂ ವೇಗಿಗಳು ವಿಕ್ಟೋರಿಯಾ ವಿರುದ್ಧ ಆಡಲಿದ್ದಾರೆ. ನ್ಯೂ ಸೌಥ್‌ವೇಲ್ಸ್‌ ಪರ ಮಿಚೆಲ್‌ ಸ್ಟ್ಯಾರ್ಕ್‌ ಅವರು ಆಡಲಿದ್ದಾರೆ. ಇವರ ಜೊತೆಗೆ ನೇಥನ್‌ ಲಯಾನ್‌ ಕೂಡ ಆಡಲಿದ್ದಾರೆ.

ಆಯ್ಕೆದಾರರು ಟ್ರಾವಿಸ್‌ ಹೆಡ್‌ಗೆ ಟಿ20ಐ ತಂಡದಲ್ಲಿ ಉಳಿಯಬೇಕೆ ಅಥವಾ ದೇಶಿ ಕ್ರಿಕೆಟ್‌ಗೆ ಮರಳಬೇಕೆ ಎಂದು ನಿರ್ಧರಿಸಲು ಅವಕಾಶ ನೀಡಿದ್ದರು. ಅವರು ಶೆಫಿಲ್ಡ್‌ ಶೀಲ್ಡ್ ಪಂದ್ಯವನ್ನು ಆಡಲು ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾದ ಆಷಸ್ ತಂಡದ ಎಲ್ಲಾ ಸಂಭಾವ್ಯ ಸದಸ್ಯರು ಮುಂದಿನ ಶೀಲ್ಡ್ ಸುತ್ತಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಬೇಸಿಗೆಯ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುಂಚಿತವಾಗಿ ಹೆಡ್ ಆರಂಭಿಕ ಸುತ್ತಿನ ಶೀಲ್ಡ್ ಪಂದ್ಯವನ್ನು ಆಡಿದ್ದರು ಮತ್ತು ಸ್ಪರ್ಧೆಯ ಪ್ರಮುಖ ರನ್ ಸ್ಕೋರರ್ ಆಗಿ ಮುಗಿಸಿದರು.

Shafali verma: ಭಾರತದ ಎದುರು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸೋಲಿಗೆ ಈ ಆಟಗಾರ್ತಿ ಕಾರಣ ಎಂದ ಲಾರಾ ವಾಲ್ವಾರ್ಡ್ಟ್‌!

ಎಡಗೈ ವೇಗಿ ಬೆನ್‌ ದ್ವಾರ್ಶುಯಿಸ್ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದು, ಟಿ20ಐ ಸರಣಿಯ ಇನ್ನುಳಿದ ಭಾಗದಲ್ಲಿ ಆಡಲಿದ್ದಾರೆ. ಐದು ಪಂದ್ಯಗಳ ಟಿ20ಐ ಸರಣಿಯು ಮೂರು ಪಂದ್ಯಗಳ ಬಳಿಕ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ನ. 6 ರಂದು ಕರಾರ ಹಾಗೂ ನವೆಂಬರ್‌ 8 ರಂದು ಬ್ರಿಸ್ಬೆನ್‌ನಲ್ಲಿ ನಡೆಯಲಿವೆ.