ಭಾರತದ ವಿರುದ್ದ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕಿಸ್ತಾನ ಮಾಜಿ ವೇಗಿ!
ಇಂಗ್ಲೆಂಡ್ ವಿರದ್ಧ ಟೆಸ್ಟ್ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಚೆಂಡನ್ನು ವಿರೂಪಗೊಳಿಸಿದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶಬ್ಬಿರ್ ಗಂಭೀರ ಆರೋಪ ಮಾಡಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 6 ರನ್ ರೋಚಕ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು.

ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್ ಮಾಜಿ ವೇಗಿ.

ನವದೆಹಲಿ: ಭಾರತ ತಂಡದ ವಿರುದ್ಧ ಪಾಕಿಸ್ತಾನ ಮಾಜಿ ವೇಗಿ ಶಬ್ಬಿರ್ ಅಹ್ಮದ್ ಖಾನ್ (Shabbir Ahmed Khan) ಅವರು ಬಾಲ್ ಟ್ಯಾಂಪರಿಂಗ್ (Ball tampering) ಆರೋಪವನ್ನು ಮಾಡಿದ್ದಾರೆ. ಲಂಡನ್‌ನ ಕೆನಿಂಗ್ಟನ್ ಓವಲ್ ಟೆಸ್ಟ್ ಪಂದ್ಯದಲ್ಲಿ (IND vs ENG) ಭಾರತ ತಂಡ ಚೆಂಡು ವಿರೂಪಗೊಳಿಸಿದೆ ಎಂದು ಅವರು ದೂರಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಭಾರತ ತಂಡ 6 ರನ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಆಂಡರ್ಸನ್-ತೆಂಡೂಲ್ಕರ್ ಟ್ರೋಪಿ ಟೆಸ್ಟ್ ಸರಣಿಯಲ್ಲಿ 2-2 ಅಂತರದಲ್ಲಿ ಡ್ರಾ ಸಾಧಿಸಿತ್ತು.
ತಮ್ಮ ಸೋಶಿಯಲ್ ಮೀಡಿಯಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ ಶಬ್ಬಿರ್ ಖಾನ್ ಅಹ್ಮದ್, ಭಾರತ ತಂಡದ ಆಟಗಾರರು ಚೆಂಡಿಗೆ ವ್ಯಾಸಲೀನ್ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ಏಕೆಂದರೆ ಚೆಂಡನ್ನು 80 ಓವರ್‌ಗಳವರೆಗೂ ಬಳಸಿದ ಬಳಿಕವೂ ಅದು ಹೊಳೆಯುತ್ತಿತ್ತು. ಪಂದ್ಯದ ಅಧಿಕಾರಿಗಳು ಚೆಂಡನ್ನು ಲ್ಯಾಬ್‌ಗೆ ಟೆಸ್ಟ್ ಮಾಡಿಸಲು ಕಳುಹಿಸಬೇಕಾಗಿತ್ತು ಎಂದು ಹೇಳಿದ್ದಾರೆ.
"ಭಾರತ ತಂಡ ವ್ಯಾಸಲೀನ್ ಅನ್ನು ಬಳಸಿದೆ ಎಂದು ಭಾವಿಸುತ್ತೇನೆ. 80 ಓವರ್‌ಗಳು ಮುಗಿದ ಬಳಿಕವೂ ಚೆಂಡು ಹೊಳೆಯುತ್ತಿತ್ತು. ಅಂಪೈರ್‌ಗಳು ಚೆಂಡನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಟೆಸ್ಟ್ ಮಾಡಿಸಬೇಕು," ಎಂದು ಶಬ್ಬಿರ್ ಖಾನ್ ಅಹ್ಮದ್ ಎಕ್ಸ್ ಗಂಭೀರ ಆರೋಪ ಮಾಡಿದ್ದಾರೆ.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಓವಲ್ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತ ತಂಡ ಎರಡನೇ ಚೆಂಡನ್ನು ಪಡೆಯಲು ಇನ್ನು ಕೇವಲ 4 ಓವರ್‌ಗಳು ಬಾಕಿ ಇದ್ದವು. ನಾಲ್ಕು ಓವರ್‌ಗಳ ನಂತರ ಭಾರತ ತಂಡಕ್ಕೆ ಹೊಸ ಚೆಂಡನ್ನು ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಭಾರತ ತಂಡ ಹಳೆಯ ಚೆಂಡಿನಲ್ಲಿಯೇ ಮುಂದುವರಿಯಿತು. ಏಕೆಂದರೆ ಚೆಂಡು ಪರಿಣಾಮಕಾರಿಯಾಗಿ ಸ್ವಿಂಗ್ ಆಗುತ್ತಿತ್ತು. ಇದರ ಫಲವಾಗಿ ಮೊಹಮ್ಮದ್ ಸಿರಾಜ್, ಜೇಮಿ ಸ್ಮಿತ್ ಅವರನ್ನು ಔಟ್ ಮಾಡಿದ್ದರು. ನಂತರ ಜೇಮಿ ಓವರ್ಟನ್ ಅವರನ್ನು ಔಟ್ ಮಾಡಿದ್ದರು.
I think
— Shabbir Ahmed Khan (@ShabbirTestCric) August 4, 2025
India used Vaseline
After 80 + over
Ball still shine like new
Umpire should send this ball to lab for examine
ಕೊನೆಯ ದಿನ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 35 ರನ್ ಅಗತ್ಯವಿತ್ತು ಹಾಗೂ ಭಾರತ ತಂಡಕ್ಕೆ ಗೆಲ್ಲಲು ನಾಲ್ಕು ವಿಕೆಟ್ ಅಗತ್ಯವಿತ್ತು. ಈ ವೇಳೆ ಇಂಗ್ಲೆಂಡ್ ತಂಡ ಸುಲಭವಾಗಿ ಚೇಸ್ ಮಾಡಬಹುದೆಂದು ಭಾವಿಸಲಾಗಿತ್ತು. ಆದರೆ, ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸಿ ಭಾರತ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಒಟ್ಟು ದ್ವಿತೀಯ ಇನಿಂಗ್ಸ್‌ನಲ್ಲಿ ಸಿರಾಜ್ 5 ವಿಕೆಟ್ ಸಾಧನೆ ಮಾಡಿದರು ಹಾಗೂ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಿತ್ತಿದ್ದರು. ಪ್ರಸಿಧ್ ಕೃಷ್ಣ ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು.
ಶುಭಮನ್ ಗಿಲ್ ಔಟ್! IND vs ENG ಸಂಯೋಜನೆಯ ಪ್ಲೇಯಿಂಗ್ XI ಆರಿಸಿದ ಸ್ಟುವರ್ಟ್ ಬ್ರಾಡ್
ಭಾರತ ತಂಡ ಐದನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ಅಂತರದಲ್ಲಿ ಡ್ರಾ ಸಾಧಿಸಿತು. ಈ ಪಂದ್ಯದಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶುಭಮನ್ ಗಿಲ್ ಹಾಗೂ ಹ್ಯಾರಿ ಬ್ರೂಕ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.