ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ತ್ರಿಶತಕ ತಪ್ಪಿದ್ದಕ್ಕೆ ತಂದೆಯ ಪ್ರತಿಕ್ರಿಯೆ ಹೇಗಿತ್ತೆಂದು ತಿಳಿಸಿದ ಶುಭಮನ್ ಗಿಲ್!

Shubman Gill revealed his father’s hilarious reaction: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ 269 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ತಮ್ಮ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಚೊಚ್ಚಲ ತ್ರಿಶತಕದಿಂದ ವಂಚಿತರಾದ ನಂತರ ತಮ್ಮ ತಂದೆಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಗಿಲ್ ಬಹಿರಂಗಪಡಿಸಿದ್ದಾರೆ.

ತ್ರಿಶತಕ ತಪ್ಪಿದ್ದಕ್ಕೆ ತಂದೆಯ ಪ್ರತಿಕ್ರಿಯೆ ಹೇಗಿತ್ತೆಂದು ತಿಳಿಸಿದ ಗಿಲ್‌!

ತಮ್ಮ ತಂದೆಯ ಸಂದೇಶವನ್ನುರಿವೀಲ್‌ ಮಾಡಿದ ಶುಭಮನ್‌ ಗಿಲ್.

Profile Ramesh Kote Jul 4, 2025 6:33 PM

ಬರ್ಮಿಂಗ್‌ಹ್ಯಾಮ್ : ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ (IND vs ENG) ಪಂದ್ಯದಲ್ಲಿ ಶುಭಮನ್ ಗಿಲ್ (Shubman Gill) 269 ರನ್ ಗಳಿಸಿ ಜಾಶ್‌ ಟಾಂಗ್‌ಗೆ (Josh Tongue) ವಿಕೆಟ್ ಒಪ್ಪಿಸಿದರು. ಆ ಮೂಲಕ ತಮ್ಮ ಚೊಚ್ಚಲ ತ್ರಿಶತಕ ವಂಚಿತರಾಗಿದ್ದರು. ತಮ್ಮ ಪ್ರದರ್ಶನದ ಬಗ್ಗೆ ತಂದೆ ಲಕ್ವಿಂದರ್ ಸಿಂಗ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಟೀಮ್ ಇಂಡಿಯಾದ ನಾಯಕ ಬಹಿರಂಗಪಡಿಸಿದ್ದಾರೆ. ಭಾರತ ತಂಡ 211 ರನ್ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಸುದೀರ್ಘ ಕಾಲದವರೆಗೆ ಕ್ರೀಸ್‌ನಲ್ಲಿದ್ದ ಶುಭಮನ್ ಗಿಲ್ 387 ಎಸೆತಗಳನ್ನು ಎದುರಿಸಿ 269 ರನ್ ಗಳಿಸುವ ಮೂಲಕ ತಂಡ, ಪ್ರಥಮ ಇನಿಂಗ್ಸ್ 587 ರನ್ ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಎರಡನೇ ದಿನದಾಟದ ನಂತರ ಬಿಸಿಸಿಐ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ಶುಭಮನ್ ಗಿಲ್ ಅವರ ಪೋಷಕರು ಕಳುಹಿಸಿದ್ದ ಸಂದೇಶವನ್ನು ಭಾರತ ತಂಡದ ನಾಯಕನಿಗೆ ಕೇಳಿಸಲಾಗಿತ್ತು.

"ನಿಜಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದೀರಿ, ನಿನ್ನ (ಶುಭಮನ್) ಆಟದಿಂದ ನಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸಿದೆ. ನೀನು ಅಂಡರ್ -16 ಹಾಗೂ ಅಂಡರ್-19 ರಲ್ಲಿ ತೋರುತ್ತಿದ್ದ ಬ್ಯಾಟಿಂಗ್ ಪ್ರದರ್ಶನವನ್ನು ಮರುಕಳುಹಿಸಿದ್ದೀಯಾ, ನನ್ನಲ್ಲಿ ನಿಜಕ್ಕೂ ಹೆಮ್ಮೆಯ ಭಾವನೆ ಮೂಡಿದೆ," ಎಂದು ಗಿಲ್ ತಂದೆ ಲಿಕ್ವಿಂದರ್ ಸಿಂಗ್ ವಿಡಿಯೋದಲ್ಲಿ ಸಂದೇಶ ಕಳುಹಿಸಿದ್ದಾರೆ.

IND vs ENG: ಏಕೈಕ ಓವರ್‌ಗೆ 23 ರನ್‌ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಪ್ರಸಿಧ್‌ ಕೃಷ್ಣ!

ತಾಯಿಯ ಆರ್ಶೀವಾದ ಪಡೆದ ಗಿಲ್

"ನಿನ್ನ ಬ್ಯಾಟಿಂಗ್ ಪ್ರದರ್ಶನ ನೋಡಲು ನಿಜಕ್ಕೂ ಅದ್ಭುತವೆನಿಸಿತು. ಮುಂದೆಯೂ ಇದೇ ರೀತಿಯ ಪ್ರದರ್ಶನ ತೋರಲು ದೇವರು ಆರ್ಶೀವಾದ ಕರುಣಿಸಲಿ," ಎಂದು ಶುಭಮನ್ ಗಿಲ್ ತಾಯಿ ಶುಭ ಹಾರೈಸಿದ್ದಾರೆ.



ತ್ರಿಶತಕ ತಪ್ಪಿಸಿಕೊಂಡೆ: ಶುಭಮನ್ ಗಿಲ್

ಪೋಷಕರು ಕಳುಹಿಸಿದ್ದ ವಿಡಿಯೋವನ್ನು ವೀಕ್ಷಿಸಿದ ನಂತರ ನನ್ನಿಂದ ಅವರು ಇನ್ನೂ ಸಾಕಷ್ಟು ನಿರೀಕ್ಷಿಸುತ್ತಿದ್ದಾರೆ ಎಂದು ಶುಭಮನ್ ಗಿಲ್ ಹೇಳಿದ್ದಾರೆ. "ಇದರರ್ಥ ನನ್ನಿಂದ ಸಾಕಷ್ಟನ್ನು ಅವರು ನಿರೀಕ್ಷೆ ಮಾಡುತ್ತಿದ್ದಾರೆ. ನಾನು ತ್ರಿಶತಕ ಗಳಿಸದೆ ಇದ್ದುದ್ದರ ಕುರಿತು ಅವರು ಚರ್ಚಿಸುತ್ತಿದ್ದಾರೆ. ಈ ಪಂದ್ಯವನ್ನು ಉತ್ತಮ ರೀತಿಯಲ್ಲಿ ಮುಗಿಸುವ ಭರವಸೆ ನನಗಿದೆ," ಎಂದು ಗಿಲ್ ಹೇಳಿದ್ದಾರೆ.

IND vs ENG: ಶುಭಮನ್‌ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್ ವಾನ್!

ತಂದೆಗಾಗಿಯೇ ಕ್ರಿಕೆಟ್ ಆಡುತ್ತಿದ್ದೇನೆ: ಶುಭಮನ್ ಗಿಲ್

" ಈ ಸಂದೇಶವು ನನಗೆ ಸಾಕಷ್ಟು ನೀಡಿದೆ. ನಾನು ಬಹುತೇಕ ನನ್ನ ತಂದೆಗಾಗಿಯೇ ಕ್ರಿಕೆಟ್ ಆಡುತ್ತಿದ್ದೇನೆ. ಅವರ ಆಸೆ ಈಡೇರಿಸಲೆಂದೇ ನಾನು ಕ್ರಿಕೆಟ್ ವೃತ್ತಿ ಜೀವನಕ್ಕೆ ಬಂದಿದ್ದೇನೆ ಮತ್ತು ನನ್ನ ಕ್ರಿಕೆಟ್‌ನ ಏಳಿಗೆಗೆ ನನ್ನ ಆಪ್ತ ಸ್ನೇಹಿತನ ಪಾತ್ರವೂ ಅಪಾರವಾಗಿದೆ. ಅವರೊಂದಿಗೆ ನಾನು ಹೆಚ್ಚಾಗಿ ಅಭ್ಯಾಸ ಮಾಡಿದ್ದೇನೆ. ನನ್ನ ಕ್ರಿಕೆಟ್ ಜೀವನದ ವಿಷಯಕ್ಕೆ ಬಂದರೆ ಈ ಇಬ್ಬರು ನನ್ನನ್ನು ಸಾಕಷ್ಟು ಬೆಂಬಲಿಸಿದ್ದಾರೆ, ಆದ್ದರಿಂದ ಅವರ ಮಾತನ್ನು ಆಲಿಸುತ್ತೇನೆ," ಎಂದು ಶುಭಮನ್ ಗಿಲ್ ತಿಳಿಸಿದ್ದಾರೆ.