ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಶುಭಮನ್‌ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್ ವಾನ್!

ಇಂಗ್ಲೆಂಡ್ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ದ್ವಿಶತಕ (269 ರನ್ ) ಗಳಿಸಿದರು. ಗಿಲ್ ಆಟವನ್ನು ಶ್ಲಾಘಿಸಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸರಣಿ ಅಂತ್ಯಕ್ಕೆ 45ರ ಸರಾಸರಿಯನ್ನು ಹೊಂದಿರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಶುಭಮನ್‌ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್ ವಾನ್!

ಶುಭಮನ್‌ ಗಿಲ್‌ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್‌ ವಾನ್‌.

Profile Ramesh Kote Jul 4, 2025 2:44 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) 387 ಎಸೆತಗಳಲ್ಲಿ 30 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 269 ರನ್ ಗಳಿಸಿದರು. ಆ ಮೂಲಕ ಭಾರತದ ಪರ ಏಕೈಕ ಪಂದ್ಯದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ. ಗಿಲ್ ಅವರ ಈ ಆಟಕ್ಕೆ ಮನಸೋತ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ (Michael Vaughan),ಸರಣಿಯ ಅಂತ್ಯಕ್ಕೆ ಗಿಲ್ 45ರ ಸರಾಸರಿ ಹೊಂದಿರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ (89 ರನ್) ಹಾಗೂ ವಾಷಿಂಗ್ಟನ್ ಸುಂದರ್ (42 ರನ್) ಜೊತೆಗೆ ಕ್ರಮವಾಗಿ 214 ಹಾಗೂ 134 ರನ್‌ಗಳ ಜೊತೆಯಾಟ ನೀಡಿದ ಗಿಲ್, ಭಾರತ ತಂಡ 587 ರನ್‌ಗಳ ಬೃಹತ್ ಮೊತ್ತ ಗಳಿಸಲು ನೆರವಾದರು. ಅಲ್ಲದೆ, ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಕ್ರಿಕೆಟ್ ದಿಗ್ಗಜರ ದಾಖಲೆಯನ್ನು ಮುರಿದಿದ್ದರು, ಗಿಲ್ ಅವರ ಈ ಬ್ಯಾಟಿಂಗ್‌ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಫಿದಾ ಆಗಿದ್ದಾರೆ.

IND vs ENG 2nd Test: ಗಿಲ್‌ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌

ಗಿಲ್ 45ರ ಸರಾಸರಿಯಲ್ಲಿ ರನ್‌ ಗಳಿಸಲಿದ್ದಾರೆ: ಮೈಕಲ್ ವಾನ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 35ಕ್ಕಿಂತ ಹೆಚ್ಚು ಸರಾಸರಿ ಹೊಂದಿಲ್ಲ ಎಂದು ಟೀಕಿಸಿದ್ದರು. ಆದರೆ ಈ ತಮ್ಮ ಹೇಳಿಕೆಯನ್ನು ಹಿಂಪಡೆದಿರುವ ವಾನ್, ಟೀಮ್ ಇಂಡಿಯಾದ ನಾಯಕನಿಗೆ ಉತ್ತಮ ಆರಂಭ ದೊರೆತಿದ್ದು, ಸರಣಿಯ ಅಂತ್ಯಕ್ಕೆ ಅವರು 45ರ ಸರಾಸರಿಯಲ್ಲಿ ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

"ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಶುಭಮನ್ ಗಿಲ್ ಅವರ ಟೆಸ್ಟ್ ಸರಾಸರಿ 35 ಇದ್ದು, ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದೆ. ಆದರೆ ಈಗ ಅವರ ಟೆಸ್ಟ್ ಜೀವನದ ಅಂತ್ಯಕ್ಕೆ ಅವರು 45ರ ಸರಾಸರಿಯಲ್ಲಿ ರನ್ ಗಳಿಸುತ್ತಾರೆ, ಅಲ್ಲದೆ ಈ ಸರಣಿಯ ಅಂತ್ಯಕ್ಕೆ ಅವರ ಸರಾಸರಿ 45ಕ್ಕಿಂತ ಹೆಚ್ಚಾಗಿರುತ್ತದೆ. ಭಾರತ ತಂಡದ ನಾಯಕನಿಗೆ ಉತ್ತಮ ಆರಂಭ ದೊರಕಿದ್ದು, ಎರಡು ದೊಡ್ಡ ಮೊತ್ತ ಗಳಿಸಿರುವ ಅವರ ಪ್ರದರ್ಶನ ನಿಜಕ್ಕೂ ಅದ್ಭುತವಾಗಿದೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.

IND vs ENG: ಆಕರ್ಷಕ ಅರ್ಧಶತಕ ಸಿಡಿಸಿ ಎರಡು ದೊಡ್ಡ ದಾಖಲೆ ಬರೆದ ರವೀಂದ್ರ ಜಡೇಜಾ!

ಉತ್ತಮ ಆಟಗಾರರು ಪಿಚ್ ಸ್ವರೂಪವನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ

ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಎಜ್‌ಬಾಸ್ಟನ್ ಕ್ರೀಡಾಂಗಣದ ಪಿಚ್ ಗುಣವನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಅಲ್ಲದೆ ಉತ್ತಮ ಮನಸ್ಥಿತಿ ಹಾಗೂ ತಂತ್ರಗಾರಿಕೆಯಿಂದ ರನ್ ಗಳಿಸಿದ್ದಾರೆ ಎಂದು ಮೈಕಲ್ ವಾನ್ ಹೇಳಿದ್ದಾರೆ.

"ಪಂದ್ಯದಲ್ಲಿ ಟಾಸ್ ಸೋತಿದ್ದು ಶುಭಮನ್ ಗಿಲ್‌ಗೆ ಒಳ್ಳೆಯ ಸಂಗತಿಯಾಗಿದೆ. ಪಂದ್ಯದ ವೀಕ್ಷಣೆ ವಿವರಣೆ ವೇಳೆ ಸುನೀಲ್ ಗವಾಸ್ಕರ್ ಅವರು ನನಗೆ ಒಂದು ಮಾತು ಹೇಳಿದ್ದರು. ಯಾವಾಗ ನಿಮ್ಮ ತಂಡದಲ್ಲಿ ಉತ್ತಮ ಆಟಗಾರರು ಇರುತ್ತಾರೋ, ಉತ್ತಮ ವಾತಾವರಣವಿರುತ್ತದೋ, ಆಗ ವೇಗ ಹಾಗೂ ಸ್ಪಿನ್ ಬೌಲರ್‌ಗಳ ವಿಚಾರವೇ ಬರುವುದಿಲ್ಲ. ಹಳೆಯ ಚೆಂಡು ಪಿಚ್‌ನಲ್ಲಿ ಹೆಚ್ಚಾಗಿ ಬೌನ್ಸ್ ಪಡೆಯುತ್ತದೆ ಅಥವಾ ಸ್ಪಿನ್ ಬೌಲಿಂಗ್ ನಲ್ಲಿ ಹೆಚ್ಚು ವ್ಯವಹರಿಸಬೇಕಾಗುತ್ತದೆ ಎಂಬುದು ದೊಡ್ಡ ಸಂಗತಿಯಾಗುವುದಿಲ್ಲ, ಉತ್ತಮ ಆಟಗಾರರು ತಮ್ಮ ನೈಜ ಪ್ರದರ್ಶನ ತೋರಿಸುತ್ತಾರೆ ಎಂಬುದು ನನ್ನ ಅನಿಸಿಕೆ. ಅಲ್ಲದೆ ಅವರ ಫುಟ್‌ವರ್ಕ್‌ ಚಲನೆಯೂ ತುಂಬಾ ಉತ್ತಮವಾಗಿರುತ್ತದೆ, ಅವರ ಮನಸ್ಥಿತಿ ಕೂಡ ಉತ್ತಮ ಸ್ಥಿತಿಯಲ್ಲಿದ್ದು, ಬಲಿಷ್ಠ ತಂತ್ರಗಾರಿಕೆ ಹೊಂದಿರುತ್ತಾರೆ," ಎಂದು ಮೈಕಲ್ ವಾನ್ ತಿಳಿಸಿದ್ದಾರೆ.



ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಮೂರು ಇನಿಂಗ್ಸ್‌ಗಳ ಅಂತ್ಯಕ್ಕೆ 424 ರನ್ ಗಳಿಸಿರುವ ಶುಭಮನ್ ಗಿಲ್, ಲೀಡಿಂಗ್ ಸ್ಕೋರರ್ ಆಗಿದ್ದಾರೆ.