ʻನಾನಾಗಿದ್ರೆ ಅವರ ಮುಖಕ್ಕೆ ಪಂಚ್ ಮಾಡುತ್ತಿದ್ದೆʼ-ಆಕಾಶ್ ದೀಪ್ ವಿರುದ್ಧ ರಿಕಿ ಪಾಂಟಿಂಗ್ ಕಿಡಿ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಬೆನ್ ಡಕೆಟ್ ಅವರ ಹೆಗಲ ಮೇಲೆ ಕೈ ಹಾಕಿದ ವೇಗಿ ಆಕಾಶ್ ದೀಪ್ ವಿರುದ್ದ ರಿಕಿ ಪಾಂಟಿಂಗ್ ಕಿಡಿ ಕಾರಿದ್ದಾರೆ. ನಾನು ಆ ಸ್ಥಳದಲ್ಲಿ ಇದ್ದಿದ್ದರೆ, ಆಕಾಶ್ ದೀಪ್ ಮುಖಕ್ಕೆ ಪಂಚ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಆಕಾಶ್ ದೀಪ್ ವಿರುದ್ದ ರಿಕಿ ಪಾಂಟಿಂಗ್ ಕಿಡಿ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯ ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿದೆ. ಪಂದ್ಯದ ಎರಡನೇ ದಿನ ಬೆನ್ ಡಕೆಟ್ (Ben Duckett) ಅವರ ಹೆಗಲ ಮೇಲೆ ಕೈ ಹಾಕಿದ ಭಾರತ ತಂಡದ ವೇಗಿ ಆಕಾಶ್ ದೀಪ್ (Akash Deep) ಅವರನ್ನು ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ (Ricky Ponting) ಟೀಕಿಸಿದ್ದಾರೆ. ಒಂದು ವೇಳೆ ಬೆನ್ ಡಕೆಟ್ ಅವರ ಜಾಗದಲ್ಲಿ ನಾನು ಇದ್ದಿದ್ದರೆ ಆಕಾಶ್ ದೀಪ್ ಮುಖಕ್ಕೆ ಪಂಚ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅಂದ ಹಾಗೆ ಆಕಾಶ್ ದೀಪ್ ಅವರ ಈ ವರ್ತನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಪಂದ್ಯದ ಎರಡನೇ ದಿನ ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಆಕಾಶ್ ದೀಪ್ ಅವರ ಎಸೆತದಲ್ಲಿ ಬೆನ್ ಡಕೆಟ್ ಔಟ್ ಮಾಡಿದ್ದರು. ಈ ವೇಳೆ ಮೌನವಾಗಿ ಪೆವಿಲಿಯನ್‌ಗೆ ತೆರಳುತ್ತಿದ್ದ ಬೆನ್ ಡಕೆಟ್ ಅವರನ್ನು ಆಕಾಶ ದೀಪ್ ಕಿಚಾಯಿಸಿದರು. ಅವರು ಬೆನ್ ಡಕೆಟ್ ಬಳಿ ತೆರಳಿ ನಗು ನಗುತ್ತಾ ಇಂಗ್ಲೆಂಡ್ ಆರಂಭಿಕನ ಭುಜದ ಮೇಲೆ ಕೈ ಹಾಕಿ ಏನೋ ಹೇಳಿದ್ದರು. ಈ ಘಟನೆ ವಿವಾದವನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಅಂದ ಹಾಗೆ ಬೆನ್ ಡಕೆಟ್ ಅವರು 38 ಎಸೆತಗಳಲ್ಲಿ 43 ರನ್‌ಗಳನ್ನು ಕಲೆ ಹಾಕಿದ್ದರು. ಈ ಸರಣಿಯಲ್ಲಿ ಆಕಾಶ್ ದೀಪ್, ಬೆನ್ ಡಕೆಟ್ ಅವರನ್ನು ನಾಲ್ಕನೇ ಬಾರಿ ಔಟ್ ಮಾಡಿದ್ದರು.
IND vs ENG: ಸಿರಾಜ್-ಪ್ರಸಿಧ್ ಮಾರಕ ದಾಳಿಗೆ ಇಂಗ್ಲೆಂಡ್ 247ಕ್ಕೆ ಆಲ್‌ಔಟ್, ಭಾರತಕ್ಕೆ 52 ರನ್ ಮುನ್ನಡೆ!
ಆಕಾಶ್ ದೀಪ್‌ಗೆ ಪಂಚ್ ಮಾಡುತ್ತಿದ್ದೆ: ಪಂಟರ್
ಈ ಪಂದ್ಯಕ್ಕೆ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಸ್ಕೈ ಸ್ಪೋರ್ಟ್ಸ್ ನಿರೂಪಕ ಇಯಾನ್ ವಾರ್ಡ್ ಅವರು ಈ ಘಟನೆ ಬಗ್ಗೆ ರಿಕಿ ಪಾಂಟಿಂಗ್ ಅವರನ್ನು ಕೇಳಿದರು. "ಇದರಿಂದ ಕೋಪಗೊಳ್ಳುವ ಕೆಲವು ಬ್ಯಾಟ್ಸ್‌ಮನ್‌ಗಳ ಬಗ್ಗೆ ನನಗೆ ನೆನಪಿದೆ ಮತ್ತು ಇದರ ಬಗ್ಗೆ ನಾನು ನಿಮ್ಮ ಅಭಿಪ್ರಾಯವನ್ನು ಎದುರು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ ಪಾಂಟಿಂಗ್ ಸರಿಯಾಗಿ ಪಂಚ್ ಕೊಡುತ್ತಿದ್ದರು ಅಲ್ಲವೇ?" ಎಂಬ ಇಯಾನ್ ವಾರ್ಡ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಂಟಿಂಗ್, "ಬಹುಶಃ ಹೌದು, ಬಹುಶಃ," ಎಂದು ತಿಳಿಸಿದ್ದಾರೆ.
AKASHDEEP REACTION AFTER GETTING BEN DUCKETT. 🤣#akashdeep #benduckett #INDvsENG pic.twitter.com/mZQ8SRNc91
— RIcky (@Rickycricketr) August 1, 2025
ಬೆನ್ ಡಕೆಟ್‌ಗೆ ರಿಕಿ ಪಾಂಟಿಂಗ್ ಮೆಚ್ಚುಗೆ
ಈ ಸಂದರ್ಭದಲ್ಲಿ ತಾಳ್ಮೆ ಹಾಗೂ ಶಾಂತವಾಗಿ ವರ್ತಿಸಿದ ಬೆನ್ ಡಕೆಟ್ ಅವರನ್ನು ರಿಕಿ ಪಾಂಟಿಂಗ್ ಗುಣಗಾನ ಮಾಡಿದ್ದಾರೆ.
"ಆದರೂ ನಾನು ಹೇಳುತ್ತಿರುವುದೇನೆಂದರೆ, ನಾನು ಅದನ್ನು ನೋಡಿದಾಗ, ಅವರು ಸಹಪಾಠಿಗಳಿರಬೇಕು ಅಥವಾ ಎಲ್ಲೋ ಅಥವಾ ಒಟ್ಟಿಗೆ ಪರಸ್ಪರ ವಿರುದ್ಧವಾಗಿ ಆಡಿರಬೇಕು ಎಂದು ನಾನು ಭಾವಿಸಿದೆ. ನನಗೂ ಅಂತಹದ್ದೇನಾದರೂ ಬೇಕು. ಆದರೆ, ನೀವು ಇದನ್ನು ಗಲ್ಲಿ ಕ್ರಿಕೆಟ್‌ನಲ್ಲಿ ನೋಡಬಹುದು, ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಅಲ್ಲ. ಬೆನ್ ಡಕೆಟ್ ಆಡಿದ ಕ್ರಿಕೆಟ್ ಬಗ್ಗೆ ನಾನು ಮೆಚ್ಚಿಕೊಳ್ಳುತ್ತೇನೆ. ಆಕಾಶ್ ದೀಪ್ ಘಟನೆಗೆ ಡಕೆಟ್ ಪ್ರತಿಕ್ರಿಯಿಸಿದ ರೀತಿ ನನಗೆ ಇಷ್ಟವಾಯಿತು," ಎಂದು ಪಾಯಿಂಟ್ ಹೇಳಿದ್ದಾರೆ.
IND vs ENG: ಜೋ ರೂಟ್-ಪ್ರಸಿಧ್ ಕೃಷ್ಣ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್
ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಓವಲ್ ಪಿಚ್
ಓವಲ್ ಟೆಸ್ಟ್ ಪಂದ್ಯದ ಎರಡನೇ ದಿನ ಪಿಚ್ ಅತ್ಯಂತ ಕಠಿಣವಾಗಿತ್ತು. ಈ ಕಾರಣದಿಂದಲೇ ಎರಡೂ ತಂಡಗಳಿಂದ 16 ವಿಎಕಟ್‌ಗಳನ್ನು ಉರುಳಿದ್ದವು. ಭಾರತ ತಂಎ ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ, ಇಂಗ್ಲೆಂಡ್ ತಂಡ ಕೂಡ ಪ್ರಥಮ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ನಂತರ 23 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ, ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ ಹಾಗೂ 52 ರನ್ ಮುನ್ನಡೆ ಪಡದಿದೆ.