IND vs NZ: ಗುರ್ನೂರ್ ಬ್ರಾರ್ ಮಾರಕ ದಾಳಿಗೆ 134ಕ್ಕೆ ನ್ಯೂಜಿಲೆಂಡ್ ಆಲ್‌ಔಟ್, ಭಾರತಕ್ಕೆ 135 ರನ್ ಗುರಿ!
IND vs NZ 2nd ODI: ಗುರ್ನೂರ್ ಬ್ರಾರ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ 40 ಓವರ್‌ಗಳಿಗೆ 134 ರನ್‌ಗಳಿಗೆ ಆಲ್‌ಔಟ್ ಆಗಿದೆ. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ ಕೇವಲ 135 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.
ಎರಡನೇ ಏಕದಿನ ಪಂದ್ಯದಲ್ಲಿ 134ಕ್ಕೆ ನ್ಯೂಜಿಲೆಂಡ್ ಆಲ್‌ಔಟ್. -
ವೆಲ್ಲಿಂಗ್ಟನ್: ಗುರ್ನೂರ್ ಬ್ರಾರ್ (Gurnoor Brar) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ, ಎರಡನೇ ಏಕದಿನ ಪಂದ್ಯದಲ್ಲಿಯೂ (IND vs NZ) 134 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲ್‌ಔಟ್ ಆಗಿದೆ. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ ಕೇವಲ 135 ರನ್‌ಗಳ ಸುಲಭ ಗುರಿಯನ್ನು ನೀಡಿದೆ. ಮೊದಲನೇ ಪಂದ್ಯದಲ್ಲಿಯೂ ಮೊದಲು ಬ್ಯಾಟ್ ಮಾಡಿ ಸಾಧಾರಣ ಮೊತ್ತಕ್ಕೆ ಆಲ್‌ಔಟ್ ಆಗಿದ್ದ ಆತಿಥೇಯ ಕಿವೀಸ್, ಇದೀಗ ಎರಡನೇ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ.
ಶನಿವಾರ ಇಲ್ಲಿನ ಹೆನ್ರಿ ಸ್ಟೇಡಿಯನಲ್ಲಿ ನಡೆದ ಪಂದ್ಯದಲ್ಲಿಯೂ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಬೌಲಿಂಗ್ ಆಯ್ದುಕೊಂಡರು ಹಾಗೂ ಎದುರಾಳಿ ಕಿವೀಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಹವಾಮಾನ ಪಂದ್ಯಕ್ಕೆ ಪೂರಕವಾಗಿರದ ಕಾರಣ ಪಂದ್ಯದ ಟಾಸ್ ಅನ್ನು ತಡವಾಗಿ ನಡೆಸಲಾಗಿತ್ತು. ಈ ಪಂದ್ಯವನ್ನು 47 ಓವರ್‌ಗಳಿಗೆ ಸೀಮಿತ ಗೊಳಿಸಲಾಯಿತು.
ʻಇನ್ನೂ 30 ರಿಂದ 40 ವಿಕೆಟ್ ಪಡೆಯಬಹುದಿತ್ತುʼ: ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿಗೆ ರವಿಶಾಸ್ತ್ರಿ ಬೇಸರ!
ಕಿವೀಸ್‌ಗೆ ಆರಂಭಿಕ ಆಘಾತ ನೀಡಿದ ಆಕಿಬ್ ನಬಿ
ಮೊದಲು ಬ್ಯಾಟ್ ಮಾಡಿದ ಕಿವೀಸ್ ಪರ ಕ್ರೀಸ್‌ಗೆ ಬಂದ ಟಿಮ್ ಸೈಫರ್ಟ್ ಹಾಗೂ ವಿಲ್ ಯಂಗ್ ಅವರನ್ನು ಆಕಿಬ್ ಔಟ್ ಮಾಡಿದರು. ಆ ಮೂಲಕ ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಮೂರನೇ ಕ್ರಮಾಮಕದಲ್ಲಿ ಕ್ರೀಸ್‌ಗೆ ಬಂದ ಹೆನ್ರಿ ನಿಕೋಲ್ಸ್ ಅವರನ್ನು ಅನ್ಶುಲ್ ಕಾಂಬೋಜ್ ಔಟ್ ಮಾಡಿದರು. ಇದರೊಂದಿಗೆ ಕಿವೀಸ್ ಕೇವಲ 23 ರನ್‌ಗಳಿಗೆ ಮೂರು ವಿಕೆಟ್ ಕಲೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Career-best figures for Gurnoor Brar 👏 Rate his performance today 👇 Scorecard ▶️ https://t.co/pxZRYf6dYV #TeamIndia | #NZvIND https://t.co/7JmCFaKSDK
— BCCI (@BCCI) November 7, 2026
ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ ಬ್ರಾರ್
ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಆಕಿಬ್ ನಬಿ ಕಟ್ಟಿ ಹಾಕಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಗುರ್ನೂರ್ ಬ್ರಾರ್ ನಿಯಂತ್ರಿಸಿದರು. ಓವರ್ ಕಾಸ್ಟ್ ಕಂಡೀಷನ್ಸ್ ಅನ್ನು ಸಂಪೂರ್ಣವಾಗಿ ಬಳಿಸಿಕೊಂಡ ಬ್ರಾರ್, ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ ಸೇರಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
ಕಿವೀಸ್‌ಗೆ ಡ್ಯಾರಿಲ್ ಮಿಚೆಲ್ ಅರ್ಧಶತಕದ ಆಸರೆ
ಕಿವೀಸ್ ಪರ ಡ್ಯಾರಿಲ್ ಮಿಚೆಲ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ಅವರು ಭಾರತದ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತರು. ಮಿಚೆಲ್ 104 ಎಸೆತಗಳಲ್ಲಿ 55 ರನ್ ಗಳಿಸಿದರೆ, ಸ್ಯಾಂಟ್ನರ್ 38 ಎಸೆತಗಳಲ್ಲಿ 31 ರನ್ ಗಳಿಸಿದರು. ಈ ಇಬ್ಬರೂ 59 ರನ್‌ಗಳ ಉಪಯುಕ್ತ ಜೊತೆಯಾಟವನ್ನು ಆಡಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಜೋಡಿಯಿಂದ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ.
ಭಾರತ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಗುರ್ನೂರ್ ಬ್ರಾರ್ 10 ಓವರ್‌ಗಳಿಗೆ ಕೇವಲ 30 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆಕಿಬ್ ನಬಿ, ಅನ್ಶುಲ್ ಕಾಂಬೋಜ್ ಹಾಗೂ ಅಕ್ಷರ್ ಪಟೇಲ್ ಕೂಡ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.