ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಡ್ರೆಸ್ಸಿಂಗ್‌ ರೂಂಗೆ ತೆರಳುತ್ತಿದ್ದ ಡ್ಯಾರಿಲ್‌ ಮಿಚೆಲ್‌ರನ್ನು ತಳ್ಳಿದ ವಿರಾಟ್‌ ಕೊಹ್ಲಿ! ವಿಡಿಯೊ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ಶತಕ ಸಿಡಿಸಿದ ಬಳಿಕ ಡ್ಯಾರಿಲ್ ಮಿಚೆಲ್ ಔಟಾದರು. ನಂತರ ಡ್ರೆಸ್ಸಿಂಗ್‌ ಕೊಠಡಿಗೆ ತೆರಳುತ್ತಿದ್ದ ಕಿವೀಸ್‌ ಆಟಗಾರನನ್ನು ವಿರಾಟ್ ಕೊಹ್ಲಿ ಬೌಂಡರಿ ಲೈನ್‌ ಬಳಿ ತಳ್ಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬೌಂಡರಿ ಲೈನ್‌ ಬಳಿ ಡ್ಯಾರಿಲ್‌ ಮಿಚೆಲ್‌ರನ್ನು ತಳ್ಳಿದ ಕೊಹ್ಲಿ!

ಡ್ಯಾರಿಲ್‌ ಮಿಚೆಲ್‌ರನ್ನು ತಳ್ಳಿದ ವಿರಾಟ್‌ ಕೊಹ್ಲಿ. -

Profile
Ramesh Kote Jan 18, 2026 6:31 PM

ಇಂದೋರ್‌: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ (IND vs NZ) ಮತ್ತು ನಿರ್ಣಾಯಕ ಏಕದಿನ ಪಂದ್ಯ ಜನವರಿ 18 ರಂದು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲೂ ನ್ಯೂಜಿಲೆಂಡ್‌ ತಂಡದ ಡ್ಯಾರಿಲ್ ಮಿಚೆಲ್ (Daryl Mitchell) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಭಾರತದ ವಿರುದ್ಧ ಮಿಚೆಲ್ ಅವರ ಬ್ಯಾಟ್ ಮತ್ತೊಮ್ಮೆ ಮಾತನಾಡಿತು ಮತ್ತು ಅವರು 106 ಎಸೆತಗಳಿಗೆ ಶತಕ ಬಾರಿಸಿದರು. ಒಟ್ಟಾರೆ ಅವರು 131 ಎಸೆತಗಳನ್ನು ಎದುರಿಸಿ 137 ರನ್ ಗಳಿಸಿದ ನಂತರ ಮಿಚೆಲ್ ವಿಕೆಟ್‌ ಒಪ್ಪಿಸಿದರು. ಇವರು ತಮ್ಮ ಇನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಮಿಚೆಲ್‌ ಔಟ್‌ ಆದ ಬಳಿಕ ವಿರಾಟ್‌ ಕೊಹ್ಲಿ (Virat Kohli) ವಿಭಿನ್ನ ವರ್ತನೆಯನ್ನು ತೋರಿದರು.

ಶತಕ ಸಿಡಿಸಿದ ಸ್ಪೋಟಕ ಬ್ಯಾಟ್‌ ಮಾಡುತ್ತಿದ್ದ ಡ್ಯಾರಿಲ್‌ ಮಿಚೆಲ್‌ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಸಿರಾಜ್‌ ಎಸೆತದಲ್ಲಿ ಮಿಚೆಲ್‌ ಪುಲ್‌ ಮಾಡಿ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ಗೆ ಸಂಪೂರ್ಣವಾಗಿ ಸಿಗದೆ ಗಾಳಿಯಲ್ಲಿ ಹಾರಿತು. ಈ ವೇಳೆ ಕುಲ್ದೀಪ್ ಯಾದವ್ ಕ್ಯಾಚ್‌ ಪಡೆಯುವಲ್ಲಿ ಸಫಲರಾದರು. ಡ್ಯಾರಿಲ್‌ ಮಿಚೆಲ್ ಔಟಾದ ನಂತರ ವಿರಾಟ್ ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಮಾಡಿದ್ದು ಈಗ ವೈರಲ್ ಆಗುತ್ತಿದೆ.

IND vs NZ: ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಸರಿಗಟ್ಟಿದ ಡ್ಯಾರಿಲ್‌ ಮಿಚೆಲ್!

ವಿರಾಟ್ ಕೊಹ್ಲಿ ಮತ್ತು ಡ್ಯಾರಿಲ್ ಮಿಚೆಲ್ ನಡುವೆ ಏನು ನಡೆಯಿತು?

ಡ್ಯಾರಿಲ್ ಮಿಚೆಲ್ ಔಟಾದ ನಂತರ ಬೌಂಡರಿ ಗೆರೆ ತಲುಪಿದಾಗ, ವಿರಾಟ್ ಕೊಹ್ಲಿ ಅಲ್ಲಿ ನಿಂತಿದ್ದರು. ಮೊದಲು, ವಿರಾಟ್ ಕೊಹ್ಲಿ ಡ್ಯಾರಿಲ್ ಮಿಚೆಲ್ ಅವರನ್ನು ಶ್ಲಾಘಿಸಿ ಅವರ ಇನಿಂಗ್ಸ್‌ಗಾಗಿ ಚಪ್ಪಾಳೆ ತಟ್ಟಿದರು. ಆದರೆ, ತಕ್ಷಣವೇ ವಿರಾಟ್ ತಮಾಷೆಯಾಗಿ ಡ್ಯಾರಿಲ್ ಮಿಚೆಲ್ ಅವರನ್ನು ಮೈದಾನದಿಂದ ಹೊರಗೆ ತಳ್ಳಿದರು. ವಿರಾಟ್ ಕೊಹ್ಲಿಯ ಸನ್ನೆಯನ್ನು ನೋಡಿ ಮಿಚೆಲ್ ನಗುತ್ತಿರುವುದು ಕಂಡುಬಂದಿದೆ. ಈ ಇಡೀ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.



337 ರನ್‌ ಕಲೆ ಹಾಕಿದ ಕಿವೀಸ್‌

ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ಶುಭ್‌ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದಾಗ್ಯೂ, ಈ ನಿರ್ಧಾರ ತಪ್ಪೆಂದು ಸಾಬೀತಾಯಿತು. ನ್ಯೂಜಿಲೆಂಡ್ ತನ್ನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 337 ರನ್ ಗಳಿಸಿತು. ಡ್ಯಾರಿಲ್ ಮಿಚೆಲ್ 137 ರನ್‌ಗಳ ಗರಿಷ್ಠ ಸ್ಕೋರರ್ ಆದರು. ಇವರ ಜೊತೆಗೆ ಗ್ಲೆನ್‌ ಫಿಲಿಪ್ಸ್‌ ಅವರು ಕೂಡ 88 ಎಸೆತಗಳಲ್ಲಿ 106 ರನ್‌ಗಳನ್ನು ಕಲೆ ಹಾಕಿದರು.