ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಡಗೌಟ್‌ನಲ್ಲಿ ನಗೋದಿಲ್ಲ ಏಕೆ? ಕೊನೆಗೂ ಕಾರಣ ತಿಳಿಸಿದ ಗೌತಮ್ ಗಂಭೀರ್‌!

2026ರ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳೆ ಡಗೌಟ್‌ನಲ್ಲಿ ಒತ್ತಡ ಹೆಚ್ಚಿರುತ್ತದೆ. ಅದರಿಂದಲೇ ನಗು ಕಾಣಿಸದಿರಬಹುದು ಎಂದು ಮಾಜಿ ನಾಯಕ ಎಂಎಸ್‌ ಧೋನಿ ಅವರ ತಮಾಷೆಯ ಕಾಮೆಂಟ್‌ಗೆ ಟೀಮ್ ಇಂಡಿಯಾ ಹಾಲಿ ಕೋಚ್ ಗೌತಮ್ ಗಂಭೀರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಡಗೌಟ್‌ನಲ್ಲಿ ನಗದೇ ಇರಲು ಕಾರಣ ತಿಳಿಸಿದ ಗೌತಮ್ ಗಂಭೀರ್‌!

ಡಗೌಟ್‌ನಲ್ಲಿ ನಗದೇ ಇರಲು ಕಾರಣ ತಿಳಿಸಿದ ಗೌತಮ್‌ ಗಂಭೀರ್‌. -

Profile
Ramesh Kote Mar 11, 2026 9:45 PM

ಬೆಂಗಳೂರು: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌(Gautam Gambhir), ಡಗೌಟ್‌ನಲ್ಲಿ ಸದಾ ಮುಖ ಗಂಟು ಹಾಕಿಕೊಂಡು ಇರುವಂತೆಯೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಒಂದು ವೈರಲ್ ಆಗಿತ್ತು, ಆ ಬಗ್ಗೆ ಗೌತಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಅಂತ್ಯಗೊಂಡ 2026ರ ಸಾಲಿನ ICC Men's T20 World Cup ಟೂರ್ನಿಯಲ್ಲಿ ಟೀಮ್ ಇಂಡಿಯಾದ ಜಯದ ನಂತರ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದರು. ಈ ಬಗ್ಗೆ ಗೌತಮ್‌ ಇದೀಗ ತಮ್ಮ 'ಗಂಭೀರ' ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತ ವಿಶ್ವಕಪ್ ಗೆದ್ದ ಬಳಿಕ ಧೋನಿ ಸಾಮಾಜಿಕ ಜಾಲತಾಣದಲ್ಲಿ ಅಪರೂಪವಾಗಿ ಪೋಸ್ಟ್ ಮಾಡಿ ತಂಡವನ್ನು ಅಭಿನಂದಿಸಿದ್ದರು. ಆ ಪೋಸ್ಟ್‌ನಲ್ಲಿ ಗಂಭೀರ್‌ ಅವರ ದೃಢತೆ, ತೀವ್ರತೆ ಮತ್ತು ಅವರ ನಗು ತಂಡದ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ಧೋನಿ ಪ್ರಶಂಸಿಸಿದ್ದರು.

ಈ ಕುರಿತು ಮಾತನಾಡಿದ ಗಂಭೀರ್, ಧೋನಿ ನೀಡಿದ ಮೆಚ್ಚುಗೆಗೆ ಧನ್ಯವಾದ ತಿಳಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಡಗೌಟ್‌ನಲ್ಲಿ ಕುಳಿತಿರುವಾಗ ನಗುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.

ICC T20I Rankings: ವೃತ್ತಿ ಜೀವನದ ಶ್ರೇಷ್ಠ ಸ್ಥಾನಕ್ಕೆ ಪ್ರವೇಶಿಸಿದ ಸಂಜು ಸ್ಯಾಮ್ಸನ್‌, ಅಭಿಷೇಕ್‌, ಇಶಾನ್‌ಗೂ ಜಾಕ್‌ಪಾಟ್‌!

"ಕೋಚ್ ಆಗಿ ತಂಡದೊಂದಿಗೆ ಡಗೌಟ್‌ನಲ್ಲಿ ಇರುವ ಸಮಯದಲ್ಲಿ ಒತ್ತಡ ಹೆಚ್ಚಿರುತ್ತದೆ. ಹೊರಗಿನಿಂದ ನೋಡುವವರಿಗೆ ಅದು ಸುಲಭವಾಗಿ ಕಾಣಬಹುದು. ಆದರೆ ಆ ಕ್ಷಣದಲ್ಲಿ ತಂಡದ ಮೇಲೆ ಇರುವ ನಿರೀಕ್ಷೆ ಮತ್ತು ಒತ್ತಡವನ್ನು ಅರ್ಥಮಾಡಿಕೊಳ್ಳುವುದು ಕಷ್ಟ," ಎಂದು ಗಂಭೀರ್ ಹೇಳಿದ್ದಾರೆ.

ಇದ ವೇಳೆ ಭಾರತದಲ್ಲಿ ಕ್ರಿಕೆಟ್ ಒಂದು ಭಾವನಾತ್ಮಕ ಸಂಗತಿ ಎಂಬುದನ್ನು ಅವರು ಗಂಭೀರ್‌ ಹೇಳಿದ್ದಾರೆ. "ಭಾರತದಲ್ಲಿ ಸೋಲು ಒಪ್ಪಿಕೊಳ್ಳುವುದು ಸುಲಭವಲ್ಲ. ಜನರು ತಂಡದಿಂದ ಯಾವಾಗಲೂ ಜಯವನ್ನೇ ನಿರೀಕ್ಷಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ನಗು ಅಥವಾ ಹಾಸ್ಯ ಮಾಡುವುದು ಎಲ್ಲ ಸಮಯದಲ್ಲೂ ಸಾಧ್ಯವಾಗುವುದಿಲ್ಲ," ಎಂದು ಅವರು ತಿಳಿಸಿದ್ದಾರೆ.

T20I Rankings: ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ವರುಣ್‌ ಚಕ್ರವರ್ತಿ!

"ಒಂದು ವರ್ಷ ಅಥವಾ ಎರಡು ವರ್ಷ ಶ್ರಮಿಸಿದರೂ ವಿಶ್ವಕಪ್ ಗೆಲ್ಲುತ್ತೇವೆ ಎಂಬ ಖಾತ್ರಿ ಇರೋದಿಲ್ಲ. ಇದು ಸ್ಟಾಕ್ ಮಾರ್ಕೆಟ್‌ನಂತೆ ಲೆಕ್ಕ ಹಾಕಿ ಲಾಭ ಕಾಣುವ ವಿಷಯವಲ್ಲ. ನಾವು ವಿಶ್ವಕಪ್ ಗೆದ್ದಿರಲಿಲ್ಲ ಅಂದರೆ, ಅಥವಾ ಸೆಮಿಫೈನಲ್‌ನಲ್ಲಿ ಸೋತಿದ್ದರೆ, ನಾವು ಮಾಡಿದ ಶ್ರಮದ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಅದಕ್ಕಾಗಿಯೇ ಕ್ರೀಡೆ ಇತರ ವೃತ್ತಿಗಳಿಗಿಂತ ತುಂಬಾ ವಿಭಿನ್ನ," ಎಂದು ಟೀಮ್ ಇಂಡಿಯಾ ಕೋಚ್ ವಿವರಿಸಿದ್ದಾರೆ.