ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡದ ಬಲಿಷ್ಠ ಪ್ಲೇಯಿಂಗ್‌ XI ವಿವರ!

India's Strongest Playing Xi: ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿದೆ. ಈ ವಾರದ ಆರಂಭದಲ್ಲಿ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಆಗಸ್ಟ್‌ 15 ರಂದು ಆರಂಭವಾಗಲಿರುವ ಮೊದಲನೇ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೆ ಭಾರತ ತಂಡದ ಬಲಿಷ್ಠ ಪ್ಲೇಯಿಂಗ್‌ Xi ಅನ್ನು ಇಲ್ಲಿ ವಿವರಿಸಲಾಗಿದೆ.

ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI ವಿವರ. -

Profile
Ramesh Kote Jul 31, 2026 7:57 PM

ನವದೆಹಲಿ: ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಂದು ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಭಾರತ ತನ್ನ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಭಿಯಾನವನ್ನು ಪುನರಾರಂಭಿಸಲಿದೆ. ನಾಯಕ ಶುಭಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI (India's Playing XI) ಆಯ್ಕೆ ಮಾಡುವ ದೊಡ್ಡ ಸವಾಲು ಎದುರಾಗಲಿದೆ. ಈ ವಾರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದ ಸಮಸ್ಯೆ ತಂಡಕ್ಕೆ ತಲೆನೋವಾಗಿದೆ. ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಫಿಟ್ನೆಸ್ ಸಮಸ್ಯೆಯಿಂದ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಜೊತೆಗೆ ಜಸ್‌ಪ್ರೀತ್ ಬುಮ್ರಾ ಮತ್ತು ಸಾಯಿ ಸದರ್ಶನ್ ಅವರ ಲಭ್ಯತೆಯೂ ಅನುಮಾನದಲ್ಲಿದೆ.

ಈ ಕಾರಣದಿಂದಾಗಿ ಭಾರತ ತಂಡದ ಪ್ಲೇಯಿಂಗ್ XI ಆಯ್ಕೆಯಲ್ಲಿ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಭಾರತಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿ ಯಾವುದೇ ಎಡವಟ್ಟು ನಡೆದರೆ ಮುಂದಿನ ವರ್ಷ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಬಹುತೇಕ ಕೈತಪ್ಪುವ ಸಾಧ್ಯತೆಯಿದೆ.

2027ರ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡಬೇಕೆಂದ ಆರ್‌ ಅಶ್ವಿನ್‌!

ಸ್ಪಿನ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ

ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಪಂದ್ಯದಲ್ಲೇ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಗೆದ್ದಿದ್ದ ಎಡಗೈ ಸ್ಪಿನ್ನರ್ ಮಾನವ್ ಸುತಾರ್, ಈ ಬಾರಿ ಪ್ಲೇಯಿಂಗ್ XIಯಿಂದ ಹೊರಗುಳಿಯುವ ಸಾಧ್ಯತೆ ಇದೆ. ವಿಶ್ರಾಂತಿಯ ನಂತರ ರವೀಂದ್ರ ಜಡೇಜಾ ತಂಡಕ್ಕೆ ಮರಳುತ್ತಿರುವುದರಿಂದ ಈ ಬದಲಾವಣೆ ಸಂಭವಿಸಬಹುದು. ಇದೇ ವೇಳೆ, ಮೊದಲ ಬಾರಿಗ ಭಾರತ ತಂಡಕ್ಕೆ ಆಯ್ಕೆಯಾಗಿರುವ ಮಧ್ಯಪ್ರದೇಶದ ಆಫ್‌ಸ್ಪಿನ್ ಆಲ್‌ರೌಂಡರ್ ಸಾರಾಂಶ್ ಜೈನ್ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ವಾಷಿಂಗ್ಟನ್ ಸುಂದರ್ ಗೈರಾಗಿರುವ ಹಿನ್ನೆಲೆಯಲ್ಲಿ ಆಫ್‌ಸ್ಪಿನ್ನರ್ ಹುಡುಕಾಟದಲ್ಲಿರುವ ಭಾರತ, ರಣಜಿ ಟ್ರೋಫಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ್ದ 33 ವರ್ಷದ ಸಾರಾಂಶ್ ಮೇಲೆ ವಿಶ್ವಾಸ ಇಟ್ಟಿದೆ.

ದೀರ್ಘಾವಧಿ ವಿವಿಧ ಮಾದರಿಗಳಲ್ಲಿ ಪ್ಲೇಯಿಂಗ್ XIಯಿಂದ ಹೊರಗುಳಿಯುತ್ತಿದ್ದ ಕುಲ್‌ದೀಪ್ ಯಾದವ್ ಅವರಿಗೆ ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಪ್ರಮುಖ ಪಾತ್ರ ಸಿಗುವ ನಿರೀಕ್ಷೆಯಿದೆ. ಭಾರತ ಮೂರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

ಎರಡು ವೇಗಿಗಳೊಂದಿಗೆ ಭಾರತ?

ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತ ಇಬ್ಬರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಅನುಭವಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಬುಮ್ರಾ ಸಂಪೂರ್ಣ ಫಿಟ್ ಇಲ್ಲವಾದರೆ, ಪ್ರಸಿಧ್‌ ಕೃಷ್ಣ ಅವರಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ.

ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆ ಇಲ್ಲ

ಭಾರತ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಬಹುತೇಕ ಅದೇ ಆಟಗಾರರನ್ನು ಆಡಿಸುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಿದರೆ, ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್‌ ಆಡಲಿದ್ದಾರೆ ಹಾಗೂ ನಾಯಕ ಶುಭಮನ್‌ ಗಿಲ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ರಿಷಭ್‌ ಪಂತ್‌ ಕಾಣಿಸಿಕೊಳ್ಳಲಿದ್ದಾರೆ.

ಈ ವಾರ ಬೌಲಿಂಗ್ ಆರಂಭಿಸಲಿರುವ ಜಸ್ಪ್ರೀತ್ ಬುಮ್ರಾ; ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಫಿಟ್ ಸಾಧ್ಯತೆ

ಒಂದು ವೇಳೆ ಸಾಯಿ ಸುದರ್ಶನ್‌ ಫಿಟ್‌ ಇಲ್ಲವಾಗಿದ್ದರೆ, ಅವರ ಸ್ಥಾನವನ್ನು ದೇವದತ್‌ ಪಡಿಕ್ಕಲ್‌ ಅಲಂಕರಿಸಲಿದ್ದಾರೆ. ಕನ್ನಡಿಗ ವೆಸ್ಟ್‌ ಇಂಡೀಸ್‌ ವಿರುದ್ಧದ ತವರು ಟೆಸ್ಟ್‌ ಸರಣಿಯಿಂದ ಭಾರತ ತಂಡದಲ್ಲಿದ್ದಾರೆ. ಆದರೆ ಅವರಿಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುತ್ತಿಲ್ಲ. 2024ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಕೊನೆಯ ಬಾರಿ ಟೆಸ್ಟ್‌ ಪಂದ್ಯವನ್ನು ಆಡಿದ್ದರು.

ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ತಂಡದ ಬಲಿಷ್ಠ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಧ್ರುವ್‌ ಜುರೆಲ್‌, ರವೀಂದ್ರ ಜಡೇಜಾ, ಸಾರಾಂಶ್‌ ಜೈನ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌