ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL: ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್‌ ಪಂತ್‌ಗೆ ದೀಪ್‌ ದಾಸ್‌ಗುಪ್ತಾ ಮಹತ್ವದ ಸಲಹೆ!

ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಸ್ಪಿನ್‌ ಬೌಲರ್‌ಗಳ ಎದುರು ರಕ್ಷಣಾತ್ಮಕವಾಗಿ ಬ್ಯಾಟ್‌ ಮಾಡುವ ಬದಲು ತಮ್ಮ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್‌ ಮಾಡಬೇಕೆಂದು ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ. ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮೊದಲನೇ ಟೆಸ್ಟ್‌ ಆರಂಭವಾಗಲಿದೆ.

ರಿಷಭ್‌ ಪಂತ್‌ಗೆ ಮಹತ್ವದ ಸಲಹೆ ನೀಡಿದ ದೀಪ್‌ ದಾಸ್‌ಗುಪ್ತಾ!

ರಿಷಭ್‌ ಪಂತ್‌ಗೆ ದೀಪ್‌ ದಾಸ್‌ಗುಪ್ತಾ ಮಹತ್ವದ ಸಲಹೆ. -

Profile
Ramesh Kote Aug 11, 2026 6:37 PM

ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (Rishabh Pant) ರಕ್ಷಣಾತ್ಮಕವಾಗಿ ಆಡದೆ, ಎಂದಿನಂತೆ ತಮ್ಮ ಆಕ್ರಮಣಕಾರಿಯ ನೈಜ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಬೇಕೆಂದು ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ (Deep Dasgupta) ಸಲಹೆಯನ್ನು ನೀಡಿದ್ದಾರೆ. ದೀರ್ಘಾವಧಿ ಸ್ವರೂಪದಲ್ಲಿ ರಿಷಭ್‌ ಪಂತ್‌ ಭಾರತ ತಂಡಕ್ಕೆ ಮ್ಯಾಚ್‌ ವಿನ್ನರ್‌ ಎಂದ ಕ್ರಿಕೆಟ್‌ ನಿರೂಪಕ, ಎಡಗೈ ಬ್ಯಾಟ್ಸ್‌ಮನ್‌ ಉಪಸ್ಥಿತಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾ ತಂಡದ ಸ್ಪಿನ್‌ ದಾಳಿಯ ಎದುರು ಭಾರತ ತಂಡದ ಬ್ಯಾಟಿಂಗ್‌ ವಿಭಾಗ ರಕ್ಷಣಾತ್ಮಕವಾಗಿ ಆಡುವುದನ್ನು ತಡೆಯಬೇಕು ಎಂದು ದೀಪ್‌ ದಾಸ್‌ಗುಪ್ತಾ ಅವರ ಅಭಿಪ್ರಾಯ. ಮಧ್ಯಮ ಕ್ರಮಾಂಕದಲ್ಲಿ ಪಂತ್‌ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡಬಲ್ಲರು, ಹಾಗಾಗಿ ಇತರೆ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ಮೇಲೆ ಒತ್ತಡವನ್ನು ಹೇರಬೇಕು. ಅತ್ಯುತ್ತಮ ರಣತಂತ್ರವನ್ನು ರೂಪಿಸಿಕೊಂಡರೆ, ಶ್ರೀಲಂಕಾದಲ್ಲಿ ಟೀಮ್‌ ಇಂಡಿಯಾ ಯಶಸ್ವಿಯಾಗಬಹುದು ಎಂಬುದು ದಾಸ್‌ಗುಪ್ತಾ ಅವರ ಅಭಿಪ್ರಾಯ.

"ರಿಷಭ್‌ ಪಂತ್‌ ಸಾಮಾನ್ಯವಾಗಿ ಹೇಗೆ ಬ್ಯಾಟ್‌ ಮಾಡುತ್ತಾರೆ, ಅದೇ ರೀತಿ ಆಡಬೇಕು. ಕಳೆದ ಕೆಲವು ಪಂದ್ಯಗಳನ್ನು ನಾನು ನೋಡಿದ್ದೇನೆ ಹಾಗೂ ಅಲ್ಲಿ ಇವರು ರಕ್ಷಣಾತ್ಮಕವಾಗಿ ಬ್ಯಾಟ್‌ ಮಾಡಿದ್ದರು. ಬಲವಂತವಾಗಿ ರಕ್ಷಣಾತ್ಮಕ ಆಟವನ್ನು ಆಡುವುದರ ಬದಲು ಸಿಕ್ಸರ್‌ ಹೊಡೆಯಲು ಪ್ರಯತ್ನಿಸುವುದು ಅವರ ಪಾಲಿಗೆ ಒಳ್ಳೆಯದು," ಎಂದು ಅವರು ತಿಳಿಸಿದ್ದಾರೆ.

ಜುರೆಲ್‌ or ಸರ್ಫರಾಝ್‌? ಭಾರತ ತಂಡದ 6ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಮೊಹಮ್ಮದ್‌ ಕೈಫ್‌!

ಪಂತ್‌ ಏಕೆ ಆಕ್ರಮಣಕಾರಿಯಾಗಿ ಆಡಬೇಕು?

ವಿಭಿನ್ನ ರೀತಿಯ ಬೌಲಿಂಗ್ ದಾಳಿಯನ್ನು ಎದುರಿಸುವಾಗ ಪ್ರತಿಯೊಬ್ಬ ಬ್ಯಾಟರ್‌ಗೂ ತನ್ನದೇ ಆದ ಸಾಮರ್ಥ್ಯಗಳಿರುತ್ತವೆ ಎಂದು ದೀಪ್ ದಾಸ್‌ಗುಪ್ತ ವಿವರಿಸಿದ್ದಾರೆ. ಎಲ್ಲಾ ಆಟಗಾರರೂ ರಕ್ಷಣಾತ್ಮಕ ಬ್ಯಾಟಿಂಗ್‌ನಲ್ಲಿ ಒಂದೇ ರೀತಿಯ ಕೌಶಲ ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ. “ಕೆಲವು ಬ್ಯಾಟರ್‌ಗಳ ಪ್ರಮುಖ ಶಕ್ತಿ ರಕ್ಷಣಾತ್ಮಕ ಆಟವಾಗಿದ್ದರೆ, ಇನ್ನು ಕೆಲವರ ಶಕ್ತಿ ಆಕ್ರಮಣಕಾರಿ ಬ್ಯಾಟಿಂಗ್ ಆಗಿದೆ. ಇದು ಸತ್ಯ,” ಎಂದು 49 ವರ್ಷದ ದಾಸ್‌ಗುಪ್ತ ಹೇಳಿದ್ದಾರೆ.

ರಿಷಭ್‌ ಪಂತ್‌ರ ಪ್ರಸ್ತುತ ಫಾರ್ಮ್‌ ಹೇಗಿದೆ?

ರಿಷಭ್‌ ಪಂತ್‌ ಅವರ ಟೆಸ್ಟ್‌ ಕ್ರಿಕೆಟ್‌ ಅಂಕಿಅಂಶಗಳನ್ನು ನೋಡಿದಾಗ ಅವರ ದೊಡ್ಡ ಮ್ಯಾಚ್‌ ವಿನ್ನರ್‌ ಎಂಬುದು ಸಾಬೀತಾಗುತ್ತದೆ. ಇಲ್ಲಿಯವರೆಗೂ ಆಡಿದ 50 ಟೆಸ್ಟ್‌ ಪಂದ್ಯಗಳಲ್ಲಿ ರಿಷಭ್‌ ಪಂತ್‌ 43.37ರ ಸರಾಸರಿಯಲ್ಲಿ 8 ಶತಕಗಳು ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು 97 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಪಂತ್‌ಗೆ ಇನ್ನೂ 3 ಸಿಕ್ಸರ್‌ಗಳ ಅಗತ್ಯವಿದೆ.

ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಮೂವರು ಸ್ಪಿನ್ನರ್‌ಗಳನ್ನು ಹೆಸರಿಸಿದ ವಾಸೀಮ್‌ ಜಾಫರ್‌!

ಪ್ರಸ್ತುತ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತವಿನಲ್ಲಿ ಇತ್ತೀಚೆಗೆ ರಿಷಭ್‌ ಪಂತ್‌ ಅತ್ಯುತ್ತಮ ಫಾರ್ಮ್‌ ಅನ್ನು ಹೊಂದಿದ್ದಾರೆ ಅವರು ಇತ್ತೀಚೆಗೆ 50ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದಾರೆ. ಆದರೆ, ಶ್ರೀಲಂಕಾ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಪಂತ್‌ ಎರಡೂ ಇನಿಂಗ್ಸ್‌ಗಳಲ್ಲಿ 30 ರನ್‌ಗಳಿಗೆ ಸೀಮಿತರಾಗಿದ್ದರು. ಆಗಸ್ಟ್‌ 15 ರಂದು ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ಮೊದಲನೇ ಟೆಸ್ಟ್‌ ಪಂದ್ಯವನ್ನು ಆಡಲಿದೆ.