ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDA vs SAA: ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲ ಸಾಧಿಸಿದ ದಕ್ಷಿಣ ಆಫ್ರಿಕಾ ಎ!

India A vs South Africa A: ಭಾರತ ಎ ವಿರುದ್ಧದ 417 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಎ ತಂಡ ಚೇಸ್‌ ಮಾಡಿ ಗೆಲುವು ಸಾಧಿಸಿತು. ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿಧ್‌ ಕೃಷ್ಣ ಮತ್ತು ಕುಲ್ದೀಪ್ ಯಾದವ್ ಇದ್ದರೂ, ಭಾರತ ಎ ತಂಡ, ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಈ ಗೆಲುವಿನ ಮೂಲಕ ಪ್ರವಾಸಿ ತಂಡ ಸರಣಿಯನ್ನು 1-1 ಸಮಬಲ ಸಾಧಿಸಿತು.

ಭಾರತ ಎ ವಿರುದ್ಧ ಎರಡನೇ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ಎ!

ಭಾರತ ಎ ವಿರುದ್ಧ ದಕ್ಷಿಣ ಆಫ್ರಿಕಾ ಎ ತಂಡಕ್ಕೆ 5 ವಿಕೆಟ್‌ ಜಯ. -

Profile
Ramesh Kote Nov 9, 2025 7:16 PM

ಬೆಂಗಳೂರು: ದಕ್ಷಿಣ ಆಫ್ರಿಕಾ ಎ (South Africa A) ತಂಡ, ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ (India A) ತಂಡವನ್ನು ಸೋಲಿಸಿತು. ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಎ ತಂಡ, ಎದುರಾಳಿ ತಂಡಕ್ಕೆ 417 ರನ್‌ಗಳ ಗುರಿಯನ್ನು ನೀಡಿತ್ತು. ಭಾರತ ಎ ತಂಡದ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿಧ್‌ ಕೃಷ್ಣ ಮತ್ತು ಕುಲ್ದೀಪ್ ಯಾದವ್ ಅವರು ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ ಎ ತಂಡ, ಐವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ ಈ ಮೊತ್ತವನ್ನು ಚೇಸ್‌ ಮಾಡಿ 5 ವಿಕೆಟ್‌ಗಳ ಗೆಲುವು ದಾಖಲಿಸಿತು ಹಾಗೂ ಎರಡು ಪಂದ್ಯಗಳ ಅನಧಿಕೃತ ಸರಣಿಯನ್ನು 1-1 ಸಮಬಲ ಸಾಧಿಸಿತು.

ಭಾರತ ಎ ತಂಡದ ಗುರಿಯನ್ನು ಮುಟ್ಟಲು ದಕ್ಷಿಣ ಆಫ್ರಿಕಾ ಎ ಪರ ಏಳು ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಇಳಿದಿದ್ದರು. ಇವರ ಪೈಕಿ ಐದು ಮಂದಿ ಅರ್ಧಶತಕ ಗಳಿಸಿದರು. ಜೋರ್ಡಾನ್ ಹರ್ಮನ್ ಮತ್ತು ಲೆಸೆಗೊ ಸೆನೊಕ್ವಾನೆ ಅವರ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳನ್ನು ಸೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿತ್ತು. ಹರ್ಮನ್ 123 ಎಸೆತಗಳಲ್ಲಿ 91 ರನ್ ಗಳಿಸಿದರೆ, ಲೆಸೆಗೊ 77 ರನ್ ಗಳಿಸಿದರು. ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದ್ದ ಜುಬೈರ್ ಹಮ್ಜಾ ಮತ್ತು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ತೆಂಬಾ ಬವೂಮಾ ಕೂಡ ಅರ್ಧಶತಕ ಗಳಿಸಿದರು. ಹಮ್ಜಾ 88 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿದರು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವೂಮಾ 59 ರನ್‌ಗಳ ಕೊಡುಗೆ ನೀಡಿದರು. ಈ ಜೋಡಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿತು. ವಿಕೆಟ್ ಕೀಪರ್ ಕಾನರ್ ಎಸ್ಟರ್‌ಹುಯಿಜೆನ್ ಉಳಿದ ಕಾರ್ಯವನ್ನು ಪೂರ್ಣಗೊಳಿಸಿದರು. ಅವರು 53 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿ ತಂಡವನ್ನು ಗುರಿ ತಲುಪಿಸಿದರು. ಇಂಡಿಯಾ ಎ ಬೌಲರ್‌ಗಳು ದುಬಾರಿಯಾದರು. ಮೊಹಮ್ಮದ್ ಸಿರಾಜ್ 17 ಓವರ್‌ಗಳಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟರು. ಆಕಾಶ್ ದೀಪ್ 22 ಓವರ್‌ಗಳಲ್ಲಿ 106 ರನ್‌ಗಳನ್ನು ಬಿಟ್ಟುಕೊಟ್ಟರೆ, ಪ್ರಸಿಧ್‌ ಕೃಷ್ಣ 15 ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟರು. ಕುಲ್ದೀಪ್ ಯಾದವ್ 17 ಓವರ್‌ಗಳಲ್ಲಿ 81 ರನ್‌ಗಳನ್ನು ಬಿಟ್ಟುಕೊಟ್ಟರು. ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿರುವ ಎಡಗೈ ಸ್ಪಿನ್ನರ್ ಹರ್ಷ್ ದುಬೆ 25 ಓವರ್‌ಗಳಲ್ಲಿ 111 ರನ್‌ಗಳನ್ನು ಬಿಟ್ಟುಕೊಟ್ಟರು.



ಭಾರತ ಎ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿತ್ತು. ಧ್ರುವ್ ಜುರೆಲ್ ಅವರ ಶತಕದ ನೆರವಿನಿಂದ ಭಾರತ ಎ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 255 ರನ್‌ಗಳನ್ನು ಕಲೆ ಹಕಿತ್ತು. ದಕ್ಷಿಣ ಆಫ್ರಿಕಾ ಕೇವಲ 221 ರನ್ ಗಳಿಸಲು ಸಾಧ್ಯವಾಯಿತು, 34 ರನ್‌ಗಳ ಹಿನ್ನಡೆಯಲ್ಲಿತ್ತು. ಧ್ರುವ್ ಜುರೆಲ್ ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದರು ಮತ್ತು ಭಾರತ ಎ ತಂಡ 7 ವಿಕೆಟ್‌ಗಳಿಗೆ 382 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ದಕ್ಷಿಣ ಆಫ್ರಿಕಾ ಎ ತಂಡಕ್ಕೆ 417 ರನ್‌ಗಳ ಗುರಿಯನ್ನು ನೀಡಿತ್ತು. ಭಾರತ ಎ ತಂಡವು ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದು, ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು.