IND vs IRE: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ, ವೈಭವ್ ಸೂರ್ಯವಂಶಿಗೆ ಸ್ಥಾನವಿಲ್ಲ!
IND vs IRE 1st T20I Match: ಬೆಲ್‌ಫಾಸ್ಟ್‌ನ ಸಿವಿಲ್ ಸರ್ವೀಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಐರ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಭಾರತ ಹಾಗೂ ಐರ್ಲೆಂಡ್ ನಡುವಣ ಮೊದಲನೇ ಟಿ20ಐ ಪಂದ್ಯ. -
ಬೆಲ್‌ಫಾಸ್ಟ್: ಇಲ್ಲಿನ ಸಿವಿಲ್ ಸರ್ವೀಸ್ ಕೋರ್ಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಐರ್ಲೆಂಡ್ (IND vs IRE) ತಂಡಗಳು ಕಾದಾಟ ಡನೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಬೌಲಿಂಗ್ ಆಯ್ದುಕೊಂಡಿದ್ದು, ಆತಿಥೇಯ ಐರ್ಲೆಂಡ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಆ ಮೂಲಕ ಎದುರಾಳಿ ತಂಡವನ್ನು ಬಹುಬೇಗ ಆಲ್‌ಔಟ್ ಮಾಡಲು ಪ್ರವಾಸಿ ತಂಡ ಯೋಜನೆಯನ್ನು ರೂಪಿಸಿಕೊಂಡಿದೆ. ಅಂದ ಹಾಗೆ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಭಾರತದ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಲಾಗಿಲ್ಲ.
ಭಾರತ ಹಾಗೂ ಐರ್ಲೆಂಡ್ ತಂಡಗಳು ಎರಡು ಪಂದ್ಯಗಳ ಟಿ20ಐ ಸರಣಿ ಇದಾಗಿದೆ. ಈ ಸರಣಿಯ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತ ಕಾದಾಟ ನಡೆಸಲಿದೆ. ಹಾಗಾಗಿ ಈ ಸರಣಿಯ ಭಾರತಕ್ಕೆ ತಯಾರಿ ನಡೆಸಲು ಉತ್ತಮ ವೇದಿಕೆಯಾಗಿದೆ. ಭಾರತ ತಂಡದ ಪ್ಲೇಯಿಂಗ್ XIನಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ಸಿಕ್ಕಿಲ್ಲ. ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾದ ಅಗತ್ಯವಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಬಹುತೇಕ ಅದೇ ಆಟಗಾರರನ್ನು ಕಣಕ್ಕೆ ಇಳಿಸಲಾಗಿದೆ. ಅಂದ ಹಾಗೆ ಶ್ರೇಯಸ್ ಅಯ್ಯರ್ ಅವರಿಗೆ ತಮ್ಮ ನಾಯಕತ್ವದಲ್ಲಿ ಮೊದಲ ಟಿ20ಐ ಸರಣಿ ಇದಾಗಿದೆ.
ʻಸಿಂಹಗಳಂತೆ ಆಡೋಣʼ: ಮೊದಲನೇ ಟಿ20ಐಗೂ ಮುನ್ನ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಲಹೆ!
ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡದೇ ಇರಲು ಕಾರಣ ತಿಳಿಸಿದ ಅಯ್ಯರ್
ವೈಭವ್ ಸೂರ್ಯವಂಶಿ ಗನ್ ಆಟಗಾರ. ಆದರೆ, ಈಗಾಗಲೇ ತಂಡದಲ್ಲಿ ಅಪಾರ ಅನುಭವವುಳ್ಳ ಆಟಗಾರರು ಇದ್ದಾರೆ ಹಾಗೂ ಅವರು ಭಾರತದ ಪರ ಸಾಕಷ್ಟು ಅದ್ಭುತ ಸರಣಿಗಳನ್ನು ಆಡಿದ್ದಾರೆ. ಹಾಗಾಗಿ ಸೀಸನ್ ಪೂರ್ತಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನು ನಾವು ಬೆಂಬಲಿಸಬೇಕಾದ ಅಗತ್ಯವಿದೆ. ಅವರ ಸಮಯ ಬಂದಾಗ ಅವಕಾಶ ಖಂಡಿತಾ ಸಿಗಲಿದೆ. ಆದರೆ, ಈಗ ಮೂವರು ಸೀಮರ್‌ಗಳು, ಒಬ್ಬರು ಆಲ್‌ರೌಂಡರ್ ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸುತ್ತಿದ್ದೇವೆ ಎಂದು ಟಾಸ್ ಬಳಿಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
Here is how #TeamIndia lines up for the 1️⃣st T20I against Ireland 📝
— BCCI (@BCCI) June 26, 2026
Updates ▶️ https://t.co/gdoXw2dAKR#IREvIND pic.twitter.com/H5nvE6XpQE
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ
ಐರ್ಲೆಂಡ್: ಟಿಮ್ ಟೆಕ್ಟರ್ (ನಾಯಕ), ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲಾರ್ಕನ್ ಟಕ್ಕರ್ (ವಿಕೆಟ್ ಕೀಪರ್), ಬೆಂಜಮಿನ್ ಕಾಲಿಟ್ಜ್, ಗೆರೆಥ್ ಡೆಲಾನಿ, ಜಾರ್ಜ್ ಡಾರ್ಕೆಲ್, ಲಿಯಾಮ್ ಮೆಗಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮೂಂಡ್ರಿ, ಮ್ಯಾಥ್ಯೂ ಹೋಲಾರ್ಡ್
Our XI for the first T20I of the series! 🫡
— Cricket Ireland (@cricketireland) June 26, 2026
India won the toss and have elected to bowl first.#BackingGreen | #IREvIND | #FailteSolar pic.twitter.com/jeRIuIP0Ve
ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಸೂರ್ಯಾಂಶ್ ಶೆಡ್ಗೆ, ವೈಭವ್ ಸೂರ್ಯವಂಶಿ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್
ಐರ್ಲೆಂಡ್: ಟಿಮ್ ಟೆಕ್ಟರ್ (ನಾಯಕ), ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಲಾರ್ಕನ್ ಟಕ್ಕರ್ (ವಿಕೆಟ್ ಕೀಪರ್), ಬೆಂಜಮಿನ್ ಕಾಲಿಟ್ಜ್, ಗೆರೆಥ್ ಡೆಲಾನಿ, ಜಾರ್ಜ್ ಡಾರ್ಕೆಲ್, ಲಿಯಾಮ್ ಮೆಗಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮೂಂಡ್ರಿ, ಮ್ಯಾಥ್ಯೂ ಹೋಲಾರ್ಡ್, ಸ್ಟೆಫನ್ ಡೊಹೇನಿ, ರಿಬನ್ ವಿಲ್ಸನ್, ಗಾವಿನ್ ಹೋವಿ