ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026 Schedule: ಐಪಿಎಲ್‌ 19ನೇ ಆವೃತ್ತಿಯ ಮೊದಲ ಅವಧಿಗೆ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH!

IPL 2026 Schedule: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲ ಅವಧಿಗೆ ಬಿಸಿಸಿಐ ವೇಳಾಪಟ್ಟಿಯನ್ನು ಮಾರ್ಚ್‌ 11 ರಂದು ಪ್ರಕಟಿಸಿದೆ. ಮಾರ್ಚ್‌ 28 ರಂದು ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುವ ಮೂಲಕ ಹತ್ತೊಂಬತ್ತನೇ ಆವೃತ್ತಿಯು ಶುರುವಾಗಲಿದೆ.

2026ರ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

2026ರ ಐಪಿಎಲ್‌ ವೇಳಾಪಟ್ಟಿ ಪ್ರಕಟ. -

Profile
Ramesh Kote Mar 11, 2026 7:46 PM

ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಮಾರ್ಚ್‌ 11 ರಂದು ಬುಧವಾರ ಪ್ರಕಟಿಸಿದೆ. ಮಾರ್ಚ್‌ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡಯುವ ಉದ್ಘಾಟನಾ ಪಂದ್ಯದಲ್ಲಿ (RCB vs SRH) ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸಲಿವೆ. ಟೂರ್ನಿಯ ಮೊದಲನೇ ಹಂತದ ಪಂದ್ಯಗಳು ಮಾರ್ಚ್‌ 28 ರಿಂದ ಏಪ್ರಿಲ್‌ 12ರವರೆಗೆ ನಡೆಯಲಿವೆ. ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಬಳಿಕ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಬಲ್‌ ಹೆಡರ್‌ ಪಂದ್ಯಗಳು ಸೇರಿದಂತೆ ಮೊದಲ ಹಂತದ 20 ಪಂದ್ಯಗಳನ್ನು ವಿಭಿನ್ನ 10 ಸ್ಥಳಗಳಲ್ಲಿ ಆಡಿಸಲಾಗುತ್ತದೆ. ಬೆಂಗಳೂರು, ಮುಂಬೈ, ಗುವಾಹಟಿ, ನ್ಯೂ ಚಂಡೀಗಢ, ಲಖನೌ, ಕೋಲ್ಕತಾ, ಚೆನ್ನೈ, ದೆಹಲಿ, ಅಹಮದಾಬಾದ್‌ ಹಾಗೂ ಹೈದರಾಬಾದ್‌ನಲ್ಲಿ ಮೊದಲ ಹಂತದ ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದ ಹಾಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ನೋಡಿಕೊಂಡು ಅಂತಿಮವಾಗಿ ಬಿಸಿಸಿಐ, ಟೂರ್ನಿಯ ಇನ್ನುಳಿದ ಭಾಗದ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

IPL 2026: ಗುಜರಾತ್‌ ಟೈಟನ್ಸ್‌ ತಂಡಕ್ಕೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

ಕಳೆದ ವರ್ಷದಂತೆ ಈ ಆವೃತ್ತಿಯಲ್ಲಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಾರ್ಚ್‌ 29 ರಂದು ಭಾನುವಾರ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಲಿವೆ. ನಂತರ ಮಾರ್ಚ್‌ 30 ರಂದು ಸೋಮವಾರ ಗುವಾಹಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮೂರನೇ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ.



2026ರ ಐಪಿಎಲ್ ವೇಳಾಪಟ್ಟಿ (ಮಾರ್ಚ್ 28 ರಿಂದ ಏಪ್ರಿಲ್ 12)

ಶನಿವಾರ, ಮಾರ್ಚ್ 28 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್ - ಬೆಂಗಳೂರು

ಭಾನುವಾರ, ಮಾರ್ಚ್ 29 - ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ - ಮುಂಬೈ

ಸೋಮವಾರ, ಮಾರ್ಚ್ 30 - ರಾಜಸ್ಥಾನ್‌ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ - ಗುವಾಹಟಿ

ಮಂಗಳವಾರ, ಮಾರ್ಚ್ 31 - ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ - ಮುಲ್ಲಾನ್‌ಪುರ

ಬುಧವಾರ, ಏಪ್ರಿಲ್ 1 - ಲಖನೌ ಸೂಪರ್ ಜಯಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಲಖನೌ

ಗುರುವಾರ, ಏಪ್ರಿಲ್ 2 - ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಕೋಲ್ಕತಾ

ಶುಕ್ರವಾರ, ಏಪ್ರಿಲ್ 3 - ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ - ಚೆನ್ನೈ

ಶನಿವಾರ, ಏಪ್ರಿಲ್ 4 - ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ - ದೆಹಲಿ

ಶನಿವಾರ, ಏಪ್ರಿಲ್ 4 - ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ - ಅಹಮದಾಬಾದ್

ಭಾನುವಾರ, ಏಪ್ರಿಲ್ 5 - ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್ ಜೈಂಟ್ಸ್ - ಹೈದರಾಬಾದ್

ಭಾನುವಾರ, ಏಪ್ರಿಲ್ 5 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ - ಬೆಂಗಳೂರು

ಸೋಮವಾರ, ಏಪ್ರಿಲ್ 6 - ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ - ಕೋಲ್ಕತ್ತಾ

ಮಂಗಳವಾರ, ಏಪ್ರಿಲ್ 7 - ರಾಜಸ್ಥಾನ್‌ ರಾಯಲ್ಸ್ vs ಮುಂಬೈ ಇಂಡಿಯನ್ಸ್ - ಗುವಾಹಟಿ

ಬುಧವಾರ, ಏಪ್ರಿಲ್ 8 - ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟನ್ಸ್ - ದೆಹಲಿ

ಗುರುವಾರ, ಏಪ್ರಿಲ್ 9 - ಕೋಲ್ಕತಾ ನೈಟ್ ರೈಡರ್ಸ್ vs ಲಖನೌ ಸೂಪರ್ ಜಯಂಟ್ಸ್ - ಕೋಲ್ಕತಾ

ಶುಕ್ರವಾರ, ಏಪ್ರಿಲ್ 10 - ರಾಜಸ್ಥಾನ್‌ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಗುವಾಹಟಿ

ಶನಿವಾರ, ಏಪ್ರಿಲ್ 11 - ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ - ಮುಲ್ಲಾನ್‌ಪುರ

ಶನಿವಾರ, ಏಪ್ರಿಲ್ 11 - ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ - ಚೆನ್ನೈ

ಭಾನುವಾರ, ಏಪ್ರಿಲ್ 12 - ಲಖನೌ ಸೂಪರ್ ಜಯಂಟ್ಸ್ vs ಗುಜರಾತ್ ಟೈಟನ್ಸ್ - ಲಖನೌ

ಭಾನುವಾರ, ಏಪ್ರಿಲ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮುಂಬೈ