ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: 65 ಸಿಕ್ಸರ್‌ಗಳ ಮೂಲಕ ಕ್ರಿಸ್‌ ಗೇಲ್‌ರ ವಿಶ್ವ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಹಲವು ದಾಖಲೆಗಳನ್ನು ಮುರಿದಿರುವುದು ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಇದೀಗ, ಆರ್‌ಸಿಬಿ ದಿಗ್ಗಜ ಕ್ರಿಸ್‌ ಗೇಲ್‌ ಅವರ ಸಿಕ್ಸರ್‌ಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅವರು ಈ ಸೀಸನ್‌ನಲ್ಲಿ 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಕ್ರಿಸ್‌ ಗೇಲ್‌ರ ವಿಶ್ವ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಕ್ರಿಸ್‌ ಗೇಲ್‌ರ ವಿಶ್ವ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ. -

Profile
Ramesh Kote May 27, 2026 9:13 PM

ಚಂಡೀಗಢ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇತಿಹಾಸದಲ್ಲಿ ಕ್ರಿಸ್‌ ಗೇಲ್‌ (Chris Gayle) ಅವರ ಅತ್ಯಂತ ವೇಗದ ಶತಕದ ದಾಖಲೆಯನ್ನು ಮುರಿಯುವ ಅವಕಾಶವನ್ನು ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು. ಆದರೂ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ವೆಸ್ಟ್‌ ಇಂಡೀಸ್‌ ದಿಗ್ಗಜನ ಐಪಿಎಲ್‌ ಟೂರ್ನಿಯ ಸಿಕ್ಸರ್‌ಗಳ ವಿಶ್ವ ದಾಖಲೆಯನ್ನು 15ರ ವಯಸ್ಸಿನ ಬ್ಯಾಟ್ಸ್‌ಮನ್‌ ಮುರಿದಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ (SRH vs RR) ಅವರು ಈ ನೂತನ ಮೈಲುಗಲ್ಲು ತಲುಪಿದ್ದಾರೆ.

ಬುಧವಾರ ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಜಸ್ಥಾನ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ, ಪವರ್‌ಪ್ಲೇನಲ್ಲಿ ಅಬ್ಬರಿಸಿದರು. ಅವರು ಆಡಿದ ಕೇವಲ 16 ಎಸೆತಗಳಲ್ಲಿಯೇ ಅರ್ಧಶತಕವನ್ನು ಬಾರಿಸಿದರು. ಈ ವೇಳೆ ಅವರು 8 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅಂತಿಮವಾಗಿ ಅವರು 29 ಎಸೆತಗಳಲ್ಲಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 97 ರನ್‌ ಗಳಿಸಿದ ಬಳಿಕ ಫಫ್ರುಲ್‌ ಹಿಂಗೆ ಔಟ್‌ ಆದರು. ಆ ಮೂಲಕ ಕ್ರಿಸ್‌ ಗೇಲ್‌ ಅವರ 30 ಎಸೆತಗಳಲ್ಲಿ ಸಿಡಿಸಿದ್ದ ವೇಗದ ಶತಕದ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು.

SRH vs RR: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸುರೇಶ್‌ ರೈನಾ ದಾಖಲೆ ಸರಿಗಟ್ಟಿದ ವೈಭವ್‌ ಸೂರ್ಯವಂಶಿ!

ಕ್ರಿಸ್‌ ಗೇಲ್‌ ವಿಶ್ವ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ

ಆದರೂ, ಅವರು ತಮ್ಮ 12 ಸಿಕ್ಸರ್‌ಗಳ ಮೂಲಕ ವೆಸ್ಟ್‌ ಇಂಡೀಸ್‌ ದಿಗ್ಗಜ ಸಿಕ್ಸರ್‌ಗಳ ವಿಶ್ವ ದಾಖಲೆಯನ್ನು 15ರ ವಯಸ್ಸಿನ ಪೋರ ಮುರಿದಿದ್ದಾರೆ. 2026ರ ಐಪಿಎಲ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ ವೈಭವ್‌ ಒಟ್ಟು 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಏಕೈಕ ಐಪಿಎಲ್‌ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ತಲುಪಿದರು ಹಾಗೂ ಕ್ರಿಸ್‌ ಗೇಲ್‌ ದಾಖಲೆಯನ್ನು ಮುರಿದಿದ್ದಾರೆ. ಗೇಲ್‌ 2012ರ ಟೂರ್ನಿಯಲ್ಲಿ ಒಟ್ಟು 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಸನ್‌ರೈಸರ್ಸ್‌ ಎದುರು 7 ಸಿಕ್ಸರ್‌ ಬಳಿಕ ವೈಭವ್‌ ಈ ದಾಖಲೆಯನ್ನು ಮುರಿದಿದ್ದಾರೆ.



ಎರಡನೇ ಸ್ಥಾನದಲ್ಲಿ ಅಭಿಷೇಕ್‌ ಶರ್ಮಾ

ಏಕೈಕೈ ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿಯೂ ವೈಭವ್‌ ಅಗ್ರ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಆರಂಭಿಕ ಅಭಿಷೇಕ್‌ ಶರ್ಮಾ 43 ಸಿಕ್ಸರ್‌ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಏಕೈಕ ಆವೃತ್ತಿಯ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್ಸ್‌

ವೈಭವ್‌ ಸೂರ್ಯವಂಶಿ (ರಾಜಸ್ತಾನ ರಾಯಲ್ಸ್‌): 65 ಸಿಕ್ಸರ್‌ (ಐಪಿಎಲ್‌ 2026)

ಕ್ರಿಸ್‌ ಗೇಲ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು): 59 ಸಿಕ್ಸರ್‌ (ಐಪಿಎಲ್‌ 2012)

ಆಂಡ್ರೆ ರಸೆಲ್‌ (ಕೋಲ್ಕತಾ ನೈಟ್‌ ರೈಡರ್ಸ್‌): 52 ಸಿಕ್ಸರ್‌ (ಐಪಿಎಲ್‌ 2029)

ಕ್ರಿಸ್‌ ಗೇಲ್‌ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) 51 ಸಿಕ್ಸರ್‌ (ಐಪಿಎಲ್‌ 2013)

ಕ್ರಿಸ್‌ ಗೇಲ್ (‌ರಂಗ್ಪುರ್‌ ರೈಡರ್ಸ್)‌: 47 ಸಿಕ್ಸರ್‌ (ಬಿಪಿಎಲ್‌ 2017)