RCB vs KKR: ವಿರಾಟ್ ಕೊಹ್ಲಿ ಶತಕದ ಬಲದಿಂದ ಗೆದ್ದು ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!
RCB vs KKR Match Highlights: ವಿರಾಟ್ ಕೊಹ್ಲಿ ಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ಎದುರು 6 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಪುನಃ ಅಗ್ರ ಸ್ಥಾನಕ್ಕೆ ಮರಳಿತು ಹಾಗೂ ಪ್ಲೇಆಫ್ಸ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇನ್ನು ಸೋತ ಕೆಕೆಆರ್‌ಗೆ ನಾಕೌಟ್ ಹಾದಿ ಕಠಿಣವಾಗಿದೆ.
ಕೆಕೆಆರ್ ಎದುರು ಶತಕ ಸಿಡಿಸಿದ ವಿರಾಟ್ ಕೊಹ್ಲಿ. -
ರಾಯ್ಪುರ: ವಿರಾಟ್ ಕೊಹ್ಲಿಯ(Virat Kohli) 9ನೇ ಐಪಿಎಲ್ ಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 57ನೇ ಪಂದ್ಯದಲ್ಲಿ (RCB vs KKR) ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳು ಹಾಗೂ ಅತ್ಯುತ್ತಮ ರನ್‌ರೇಟ್ (+1.053 ) ಮೂಲಕ ಪುನಃ ಅಗ್ರ ಸ್ಥಾನಕ್ಕೆ ಮರಳಿತು. ಇನ್ನು ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡಕ್ಕೆ ಈ ಸೋಲಿನೊಂದಿಗೆ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ.
ಬುಧವಾರ ಇಲ್ಲಿನ ಶಾಹೀದ್ ವೀರ್ ನಾರಾಯನ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿಕೆಕೆಆರ್ ನೀಡಿದ್ದ 193 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಚೇಸ್ ಮಾಡಲು ಯಾವುದೇ ಕಠಿಣತೆ ಎದುರಾಗಲಿಲ್ಲ. ಇದಕ್ಕೆ ಕಾರಣ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಕ್ಲಾಸ್ ಬ್ಯಾಟಿಂಗ್. ಕಳೆದ ಎರಡು ಪಂದ್ಯಗಳಲ್ಲಿ ಡಕ್‌ಔಟ್ ಆಗಿದ್ದ ಕಿಂಗ್ ಕೊಹ್ಲಿ, ಕೆಕೆಆರ್ ಎದುರಿನ ಚೇಸ್‌ನಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ 9ನೇ ಶತಕ ಸಿಡಿಸಿ ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
RCB vs KKR ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಎಂಎಸ್ ಧೋನಿ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಶತಕದ ಮೂಲಕ ಕಮ್‌ಬ್ಯಾಕ್ ಮಾಡಿದ ವಿರಾಟ್ ಕೊಹ್ಲಿ
ಜೇಕಬ್ ಬೆಥೆಲ್ (15) ಅವರು ಈ ಪಂದ್ಯದಲ್ಲಿಯೂ ವಿಫಲರಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ಮತ್ತೊಂದು ಶ್ರೇಷ್ಠ ಇನಿಂಗ್ಸ್ ಆಡಿದರು. ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ 60 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು. ಅಲ್ಲದೆ ದೇವದತ್ ಪಡಿಕ್ಕಲ್ ಅವರ ಜೊತೆ 92 ರನ್ ಅದ್ಭುತ ಜೊತೆಯಾಟವನ್ನು ಆಡಿದರು. ಪಡಿಕ್ಕಲ್ 27 ಎಸೆತಗಳಲ್ಲಿ 39 ರನ್ ಗಳಿಸಿದರು. ಅಂದ ಹಾಗೆ ವಿರಾಟ್ ಕೊಹ್ಲಿ ಈ ಇನಿಂಗ್ಸ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದ್ದು ವಿಶೇಷ.
Some classics never go out of style 💯👑
— IndianPremierLeague (@IPL) May 13, 2026
Give Virat Kohli a target and he writes history 🙌
Updates ▶️ https://t.co/X27WecYjiZ#TATAIPL | #KhelBindaas | #RCBvKKR | @imVkohli pic.twitter.com/LcdqKiwYVo
192 ರನ್ ಕಲೆ ಹಾಕಿದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಅಂಗ್‌ಕೃಷ್ ರಘುವಂಶಿ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 192 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 193 ರನ್‌ಗಳ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಕೆಕೆಆರ್ ಪರ ರಘುವಂಶಿ ಜೊತೆಗೆ ಕ್ಯಾಮೆರಾನ್ ಗ್ರೀನ್ 32 ರನ್ ಹಾಗೂ ರಿಂಕು ಸಿಂಗ್ ಅಜೇಯ 49 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಪಿಚ್, ಈ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಅನುಕೂಲಕರವಾಗಿರುವಂತೆ ಕಂಡಿತು.
𝗛.𝗨.𝗡.𝗗.𝗥.𝗘.𝗗 💯
— IndianPremierLeague (@IPL) May 13, 2026
A scintillating ton from the chase master 👏👏
9th #TATAIPL hundred for Virat Kohli 🫡
Updates ▶️ https://t.co/X27WecYjiZ#KhelBindaas | #RCBvKKR | @imVkohli pic.twitter.com/GgyzG63rUf
ಅಂಗ್‌ಕೃಷ್ ರಘುವಂಶಿ ಅರ್ಧಶತಕ
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರಂಭಿಕ ಫಿನ್ ಆಲೆನ್ ಈ ಪಂದ್ಯದಲ್ಲಿ ಅದೇ ಬ್ಯಾಟಿಂಗ್ ಲಯವನ್ನು ಮುಂದುವರಿಸಲು ಭುವನೇಶ್ವರ್ ಕುಮಾರ್ ಬಿಡಲಿಲ್ಲ. ಅವರು ಕೇವಲ 18 ರನ್ ಗಳಿಸಿದ ಬಳಿಕ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರೆ, ಅಜಿಂಕ್ಯ ರಹಾನೆ ಕೇವಲ 19 ರನ್ ಗಳಿಸಿದ ಬಳಿಕ ಜಾಶ ಹೇಝಲ್‌ವುಡ್‌ಗೆ ಔಟ್ ಆದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ನಿಂತು ಬ್ಯಾಟ್ ಮಾಡಿದ ಅಂಗ್‌ಕೃಷ್ ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಕೊನೆಯವರೆಗೂ ಬ್ಯಾಟ್ ಮಾಡಿದ 46 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 71 ರನ್‌ಗಳನ್ನು ಗಳಿಸಿದರು. ಅಲ್ಲದೆ ಕ್ಯಾಮೆರಾನ್ ಗ್ರೀನ್ ಅವರ ಜೊತೆ 68 ರನ್ ಹಾಗೂ ರಿಂಕು ಸಿಂಗ್ ಅವರ ಜೊತೆ 76 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಕೆಕೆಆರ್ 190 ರ ಗಡಿ ದಾಟಲು ನೆರವು ನೀಡಿದ್ದರು.
The heart and soul of #KKR's innings today 💜
— IndianPremierLeague (@IPL) May 13, 2026
Angkrish Raghuvanshi keeps impressing in this tournament 👏👏
Relive his knock ▶️ https://t.co/vsdMJ7WIUU #TATAIPL | #KhelBindaas | #RCBvKKR pic.twitter.com/X7hN9OrCIb
ಅಂಗ್‌ಕೃಷ್ ರಘುವಂಶಿ ಅವರ ಜೊತೆಗೆ ಅತ್ಯುತ್ತಮ ಬ್ಯಾಟ್ ಮಾಡಿದ ಕ್ಯಾಮೆರಾನ್ ಗ್ರೀನ್ ಅವರು 24 ಎಸೆತಗಳಲ್ಲಿ 32 ರನ್‌ಗಳನ್ನು ಕಲೆ ಹಾಕಿದರು ಹಾಗೂ ಕೊನೆಯವರೆಗೂ ಬ್ಯಾಟ್ ಮಾಡಿದ 29 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 49 ರನ್‌ಗಳನ್ನು ಕಲೆ ಹಾಕಿದರು.
ಸ್ಕೋರ್ ವಿವರ
ಕೋಲ್ಕತಾ ನೈಟ್ ರೈಡರ್ಸ್: 20 ಓವರ್‌ಗಳಿಗೆ 192-4 (ಅಂಗ್‌ಕೃಷ್ ರಘುವಂಶಿ 71, ರಿಂಕು ಸಿಂಗ್ 49*, ಕ್ಯಾಮೆರಾನ್ ಗ್ರೀನ್ 32; ಭುವನೇಶ್ವರ್ ಕುಮಾರ್ 34 ಕ್ಕೆ 1, ಜಾಶ್ ಹೇಝಲ್‌ವುಡ್ 35 ಕ್ಕೆ 1, ರಸಿಖ್ ದಾರ್ ಸಲಾಮ್ 35 ಕ್ಕೆ 1)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 19.5 ಓವರ್‌ಗಳಿಗೆ 194-4 (ವಿರಾಟ್ ಕೊಹ್ಲಿ 105* ದೇವದತ್ ಪಡಿಕ್ಕಲ್ 39, ಕಾರ್ತಿಕ್ ತ್ಯಾಗಿ 32 ಕ್ಕೆ 3)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ