ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hong Kong Open: ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ಸ್‌ಗೆ ಲಗ್ಗೆಯಿಟ್ಟ ಲಕ್ಷ್ಯಸೇನ್‌, ಸಾತ್ವಿಕ್‌ ಜೋಡಿ!

ಪ್ರಸ್ತುತ ನಡೆಯುತ್ತಿರುವ 2026ರ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಲಕ್ಷ್ಯಸೇನ್‌ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ ಜೋಡಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದೆ. ಆದರೆ, ಭಾರತದ ರಕ್ಷಿತಾ ರಾಮರಾಜ್‌ ಅವರು ಚೆನ್‌ ಯು ಫೀ ಮತ್ತು ಮಿಯಾ ಬ್ಲಿಚ್‌ಫೀಲ್ಡ್‌ ಅವರ ವಿರುದ್ಧ ಗೆಲುವು ಪಡೆದ ಹೊರತಾಗಿಯೂ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಹಾಂಕಾಂಗ್‌ ಓಪನ್‌: ಸೆಮೀಸ್‌ಗೆ ಲಕ್ಷ್ಯಸೇನ್‌, ಸಾತ್ವಿಕ್‌ ಜೋಡಿ!

ಹಾಂಕಾಂಗ್‌ ಓಪನ್‌ ಸೆಮಿಪೈನಲ್‌ಗೆ ಸಾತ್ವಿಕ್‌-ಚಿರಾಗ್‌. -

Profile
Ramesh Kote Nov 20, 2026 7:27 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಹಾಂಕಾಂಗ್‌ ಓಪನ್‌ ( Hong Kong Open) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಂಕಿರೆಡ್ಡಿ (Satwiksairaj Rankireddy) ಮತ್ತು ಲಕ್ಷ್ಯಸೇನ್‌ (Lakshya Sen) ಜೋಡಿ ತಮ್ಮ ಗೆಲುವಿನ ಲಯವನ್ನು ಮುಂದುವರಿಸಿದೆ. ಬಿಡಬ್ಲ್ಯುಎಫ್‌ ಸೂಪರ್‌ 500ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರುವ ಮೂಲಕ ಭಾರತದ ಜೋಡಿ, ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿದೆ. ಇನ್ನು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತ ರಕ್ಷಿತಾ ರಾಮರಾಜ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದ್ದಾರೆ.

ಲಕ್ಷ್ಯ ಸೇನ್ 21-17, 10-21, 21-13 ಗೇಮ್‌ಗಳ ಅಂತರದಿಂದ ಲೋ ಕೀನ್ ಯೂ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿದ್ದ ಲಕ್ಷ್ಯ, ಎರಡನೇ ಗೇಮ್‌ನಲ್ಲಿ ಎದುರಾಳಿಗೆ ಶರಣಾದರು. ಆದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಅಂಧರ ಕ್ರಿಕೆಟ್ ಏಷ್ಯಾಕಪ್ ಟ್ರೋಫಿ ಪ್ರದಾನ ಸಮಾರಂಭ ಬಹಿಷ್ಕರಿಸಿದ ಭಾರತ, ಪಾಕ್‌ಗೆ ಚಾಂಪಿಯನ್‌ಪಟ್ಟ!

ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಅವರ ಯಶಸ್ವಿ ಋತುವಿಗೆ ಮತ್ತೊಂದು ಮೈಲುಗಲ್ಲು ಸೇರ್ಪಡೆಯಾಗಿದೆ. ಅವರು ಈಗಾಗಲೇ ಹೈಲೋ ಓಪನ್ ಮತ್ತು ಜಪಾನ್ ಮಾಸ್ಟರ್ಸ್ ಟೂರ್ನಿಗಳಲ್ಲಿ ಸತತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಎರಡೂ ಟೂರ್ನಿಗಳು ಸೂಪರ್ 500 ವಿಭಾಗಕ್ಕೆ ಸೇರಿವೆ. ಅಲ್ಲದೆ, ಮಾರ್ಚ್‌ನಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ರನ್ನರ್‌ಅಪ್ ಆಗಿದ್ದರು. ಡಿಸೆಂಬರ್‌ನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿರುವ ಲಕ್ಷ್ಯ, ಹಾಂಕಾಂಗ್ ಓಪನ್‌ನಲ್ಲೂ ಗೆಲುವಿನ ಓಟ ಮುಂದುವರಿಸಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.

ಸೆಮಿಫೈನಲ್‌ಗೆ ಸಾತ್ವಿಕ್-ಚಿರಾಗ್ ಜೋಡಿ

ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಚೀನಾದ ಹೂ ಕೆಯುವಾನ್ ಮತ್ತು ಲಿನ್ ಕ್ಸಿಯಾಂಗ್ಯಿ ಜೋಡಿಯನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಮಣಿಸಿದರು.‌ ಸಾತ್ವಿಕ್-ಚಿರಾಗ್ ಜೋಡಿ 21-12, 13-21, 21-16 ಗೇಮ್‌ಗಳ ಅಂತರದಿಂದ ಗೆಲುವು ದಾಖಲಿಸಿತು. ಆ ಮೂಲಕ ಹಾಂಕಾಂಗ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಮ್ಮ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

WPL 2027: ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡಕ್ಕೆ ಕ್ರಿಕೆಟ್‌ ನಿರ್ದೇಶಕರಾಗಿ ಮಹೇಲಾ ಜಯವರ್ಧನೆ ನೇಮಕ!

ಈ ಋತುವಿನಲ್ಲಿ ಭಾರತದ ಈ ಜೋಡಿ ಉತ್ತಮ ಪ್ರದರ್ಶನ ನೀಡಿದೆ. ಮೇ ತಿಂಗಳಲ್ಲಿ ಸಿಂಗಾಪುರ ಓಪನ್ ಮತ್ತು ಸೆಪ್ಟೆಂಬರ್‌ನಲ್ಲಿ ಚೀನಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ಎರಡೂ ಟೂರ್ನಿಗಳು ಸೂಪರ್ 750 ವಿಭಾಗಕ್ಕೆ ಸೇರಿವೆ. ಥಾಯ್ಲೆಂಡ್ ಓಪನ್‌ನಲ್ಲೂ ಫೈನಲ್ ತಲುಪಿದ್ದರು. ಇದೀಗ ಹಾಂಕಾಂಗ್ ಓಪನ್‌ನಲ್ಲಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಅವಕಾಶ ಎದುರಾಗಿದೆ.

ಥಾಯ್ಲೆಂಡ್ ಆಟಗಾರ್ತಿಗೆ ಶರಣಾದ ರಕ್ಷಿತಾ

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ರಕ್ಷಿತಾ ನಿರಾಸೆ ಅನುಭವಿಸಿದ್ದಾರೆ. ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ವಿರುದ್ಧ 19-21, 16-21 ಗೇಮ್‌ಗಳ ಅಂತರದಿಂದ ಸೋಲು ಕಂಡರು. ಆದರೆ ಟೂರ್ನಿಯಲ್ಲಿ ರಕ್ಷಿತಾ ಗಮನಾರ್ಹ ಪ್ರದರ್ಶನ ನೀಡಿದ್ದರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಹಾಗೂ ಪ್ರಸ್ತುತ ವಿಶ್ವದ ನಾಲ್ಕನೇ ಶ್ರೇಯಾಂಕದ ಚೀನಾದ ಚೆನ್ ಯು ಫೀ ಅವರನ್ನು 21-18, 24-22ರಿಂದ ಸೋಲಿಸಿದ್ದರು. ಇದಕ್ಕೂ ಮೊದಲು ಡೆನ್ಮಾರ್ಕ್‌ನ ವಿಶ್ವದ 20ನೇ ಶ್ರೇಯಾಂಕದ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಟ್ ಅವರನ್ನು 21-18, 21-18ರಿಂದ ಮಣಿಸಿದ್ದರು.

IND vs NZ: ನ್ಯೂಜಿಲೆಂಡ್‌ ತಂಡದಲ್ಲಿರುವ ನೂತನ ಕೇನ್‌ ವಿಲಿಯಮ್ಸನ್‌ ಹೆಸರಿಸಿದ ದಿನೇಶ್‌ ಕಾರ್ತಿಕ್‌!

ಶ್ರೀಕಾಂತ್‌ಗೆ ಮುನ್ನಡೆ; ತ್ರೀಸಾ-ಗಾಯತ್ರಿ, ಅಶ್ಮಿತಾಗೆ ಸೋಲು

ಭಾರತದ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಯೂ ಟೇ-ಬಿನ್ ಅವರನ್ನು 12-21, 21-18, 21-14ರಿಂದ ಸೋಲಿಸಿ ಮುಂದಿನ ಸುತ್ತಿಗೆ ಮುನ್ನಡೆದಿದ್ದಾರೆ. ಇನ್ನು ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಅಮೆರಿಕದ ಲಾರೆನ್ ಲ್ಯಾಮ್ ಮತ್ತು ಅಲಿಸನ್ ಲೀ ವಿರುದ್ಧ ಸೋಲು ಕಂಡಿತು. ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ ಜಪಾನ್‌ನ ಹಿನಾ ಅಕೆಚಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದರು.