Women’s T20 Trophy 2026: ರೈಲ್ವೇಸ್ ವಿರುದ್ಧ ಗೆದ್ದ ಕರ್ನಾಟಕ ವನಿತೆಯರಿಗೆ ಚೊಚ್ಚಲ ಟ್ರೋಫಿ!
ಹಿರಿಯದ ಮಹಿಳಾ ಟಿ20 ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧ 3 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಮೊದಲು 149 ರನ್ ಗಳಿಸಿದ ಕರ್ನಾಟಕ, ರೈಲ್ವೇಸ್ ತಂಡವನ್ನು 146 ರನ್‌ಗಳಿಗೆ ನಿಯಂತ್ರಿಸಿ ಚೊಚ್ಚಲ ಟಿ20 ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ರೈಲ್ವೇಸ್ ವಿರುದ್ಧ ಗೆದ್ದ ಕರ್ನಾಟಕಕ್ಕೆ ಚೊಚ್ಚಲ ಟಿ20 ಗರಿ. -
ಅಹಮದಾಬಾದ್: ಹಿರಿಯರ ಮಹಿಳಾ ಟಿ20 ಟ್ರೋಫಿ 2026ರ ಟೂರ್ನಿಯ (Senior Women's T20 Trophy 2026) ಫೈನಲ್ ಪಂದ್ಯದಲ್ಲಿ (KAR vs RL) ಕರ್ನಾಟಕ ಮಹಿಳಾ ತಂಡ ರೋಚಕ ಗೆಲುವು ದಾಖಲಿಸಿದೆ. ದಾಖಲೆಯ 11 ಬಾರಿ ಚಾಂಪಿಯನ್ ಆಗಿದ್ದ ಬಲಿಷ್ಠ ರೈಲ್ವೇಸ್ ತಂಡವನ್ನು 3 ರನ್‌ಗಳಿಂದ ಮಣಿಸಿದ ಕರ್ನಾಟಕ, ಚೊಚ್ಚಲ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ತಂಡದ ನಾಯಕಿ ಶುಭಾ ಸತೀಶ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 39 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 48 ರನ್ ಸಿಡಿಸಿದರು.
ಗುರಿ ಬೆನ್ನಟ್ಟಿದ ರೈಲ್ವೇಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಮೊದಲ 9 ಓವರ್‌ಗಳಲ್ಲೇ 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಪ್ರತಿಕಾ ರಾವಲ್, ಶಿಪ್ರಾ ಗಿರಿ ಮತ್ತು ರಿಯಾ ಚೌಧರಿ ವಿಕೆಟ್ ಒಪ್ಪಿಸುವ ಮೂಲಕ ರೈಲ್ವೇಸ್ ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಮಿನ್ನು ಮಣಿ ಮತ್ತು ಅರುಷಿ ಗೋಯಲ್ ನಾಲ್ಕನೇ ವಿಕೆಟ್‌ಗೆ 68 ರನ್‌ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ತರಲು ಪ್ರಯತ್ನಿಸಿದರು. ಆದರೆ 16ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಬಿಜಿ ತೇಜಸ್ವಿನಿ ಈ ಜೊತೆಯಾಟವನ್ನು ಮುರಿದರು. 23 ಎಸೆತಗಳಲ್ಲಿ 30 ರನ್ ಗಳಿಸಿದ್ದ ಮಿನ್ನು ಮಣಿಯನ್ನು ಪೆವಿಲಿಯನ್‌ಗೆ ಕಳುಹಿಸಿದರು.
Asia Cup Rising Stars: ನೇಪಾಳ 26ಕ್ಕೆ ಆಲ್‌ಔಟ್; ಭಾರತ ತಂಡಕ್ಕೆ 306 ರನ್‌ಗಳ ಭರ್ಜರಿ ಜಯ!
ಇದಾದ ಬಳಿಕ ಕೌಶಲ್ಯ ಚೌಧರಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಅರುಷಿ ಗೋಯಲ್ 28 ಎಸೆತಗಳಲ್ಲಿ 41 ರನ್ ಗಳಿಸಿ 18ನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ರೈಲ್ವೇಸ್ ತಂಡಕ್ಕೆ ಕೊನೆಯ 13 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು.
ತನುಜಾ ಕನ್ವರ್ ಕೇವಲ 7 ಎಸೆತಗಳಲ್ಲಿ 18 ರನ್ ಸಿಡಿಸಿ ರೈಲ್ವೇಸ್ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಕೊನೆಯ ಎಸೆತದಲ್ಲಿ ಅವರು ರನ್‌ಔಟ್ ಆದರು. ಅಂತಿಮವಾಗಿ ರೈಲ್ವೇಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕರ್ನಾಟಕ 3 ರನ್‌ಗಳ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಎತ್ತಿಹಿಡಿಯಿತು.
IND vs NZ: ನ್ಯೂಜಿಲೆಂಡ್ ತಂಡದಲ್ಲಿರುವ ನೂತನ ಕೇನ್ ವಿಲಿಯಮ್ಸನ್ ಹೆಸರಿಸಿದ ದಿನೇಶ್ ಕಾರ್ತಿಕ್!
ಶುಭಾ ಸತೀಶ್ ಅರ್ಧಶತಕದಂಚಿನಲ್ಲಿ ಔಟ್
ಇದಕ್ಕೂ ಮೊದಲು ಕರ್ನಾಟಕದ ಬ್ಯಾಟಿಂಗ್‌ನಲ್ಲಿ ನಾಯಕಿ ಶುಭಾ ಸತೀಶ್ ಪ್ರಮುಖ ಪಾತ್ರ ವಹಿಸಿದರು. ಎರಡನೇ ಓವರ್‌ನಲ್ಲೇ ವೃಂದಾ ದಿನೇಶ್ ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ಶುಭಾ ಮತ್ತು ಶಿಶಿರಾ ಗೌಡ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್‌ಗೆ 40 ರನ್‌ಗಳ ಜೊತೆಯಾಟ ನೀಡಿತು.
ತಾಳ್ಮೆಯ ಆಟವಾಡಿದ ಶುಭಾ 39 ಎಸೆತಗಳಲ್ಲಿ 48 ರನ್ ಗಳಿಸಿ 13ನೇ ಓವರ್‌ನಲ್ಲಿ ಔಟಾದರು. ಅವರ ವಿಕೆಟ್ ಪತನದ ಬಳಿಕ ಕರ್ನಾಟಕ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಒಂದು ಹಂತದಲ್ಲಿ 3 ವಿಕೆಟ್‌ಗೆ 97 ರನ್ ಗಳಿಸಿದ್ದ ತಂಡ, 119 ರನ್ ತಲುಪುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
𝗪.𝗜.𝗡.𝗡.𝗘.𝗥.𝗦 🏆 A picture-perfect moment for Karnataka Women with their historic #SWT20 silverware ✨ @mflone_ https://t.co/Ou4VPBlxUL
— BCCI Domestic (@BCCIdomestic) November 20, 2026
ಆದರೆ ಅಂತಿಮ ಹಂತದಲ್ಲಿ ಶ್ರೇಯಾಂಕಾ ಪಾಟೀಲ್, ಲಾವಣ್ಯ ಚಲನಾ ಮತ್ತು ಮೋನಿಕಾ ಪಟೇಲ್ ಸಮಯೋಚಿತ ಬೌಂಡರಿಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು 149ಕ್ಕೆ ಕೊಂಡೊಯ್ದರು.
ರೈಲ್ವೇಸ್ ಪರ ಪೂನಂ ಯಾದವ್ 18 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇತ್ತ ಕರ್ನಾಟಕದ ಪರ ಬಿ.ಜಿ. ತೇಜಸ್ವಿನಿ 20 ರನ್ ನೀಡಿ 3 ವಿಕೆಟ್ ಪಡೆದು ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.
WPL 2027: ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಕ್ಕೆ ಕ್ರಿಕೆಟ್ ನಿರ್ದೇಶಕರಾಗಿ ಮಹೇಲಾ ಜಯವರ್ಧನೆ ನೇಮಕ!
37 ತಂಡಗಳು ಭಾಗಿ
2026ರ ಸೀನಿಯರ್ ಮಹಿಳಾ ಟಿ20 ಟ್ರೋಫಿಯಲ್ಲಿ ಒಟ್ಟು 37 ತಂಡಗಳು ಭಾಗವಹಿಸಿದ್ದವು. ಎಲೈಟ್ ವಿಭಾಗದಲ್ಲಿ 31 ತಂಡಗಳು ಹಾಗೂ ಪ್ಲೇಟ್ ವಿಭಾಗದಲ್ಲಿ 6 ತಂಡಗಳು ಸ್ಪರ್ಧಿಸಿದ್ದವು. ಪ್ಲೇಟ್ ವಿಭಾಗದ ಫೈನಲ್‌ನಲ್ಲಿ ಮಿಜೋರಾಂ ತಂಡವನ್ನು 10 ರನ್‌ಗಳಿಂದ ಸೋಲಿಸಿದ ಬಿಹಾರ ಪ್ರಶಸ್ತಿ ಗೆದ್ದುಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್‌ಗಳಿಗೆ 149/8 (ಶುಭ ಸತೀಶ್ 49; ಪೂನಮ್ ಯಾದವ್ 18/3)
ರೈಲ್ವೇಸ್: 20 ಓವರ್‌ಗಳಿಗೆ 146/9 (ಆರುಷಿ ಗೋಯಲ್ 41; ಬಿಜೆ ತೇಜಸ್ವಿನಿ 20 ಕ್ಕೆ 3)