Women's World Cup: ಶತಕ ಬಾರಿಸಿ ಮಿಥಾಲಿ ರಾಜ್ ದಾಖಲೆ ಮುರಿದ ಲಾರಾ ವಾಲ್ವಾರ್ಡ್ಟ್!
SAW vs ENGW Semifinal: 2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವಾಲ್ವಾರ್ಡ್ಟ್ 169 ರನ್‌ಗಳ ದಾಖಲೆಯ ಇನಿಂಗ್ಸ್ ಆಡಿದರು. ಕೇವಲ 115 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಅವರು ಇತಿಹಾಸವನ್ನು ಬರೆದಿದ್ದಾರೆ. ಆ ಮೂಲಕ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆಯನ್ನು ಮುರಿದಿದ್ದಾರೆ.
ಮಿಥಾಲಿ ರಾಜ್ ದಾಖಲೆಯನ್ನು ಮುರಿದ ಲಾರಾ ವೊಲ್ವಾರ್ಡ್ಟ್. -
ಗುವಾಹಟಿ: ಇಂಗ್ಲೆಂಡ್ ವಿರುದ್ಧ 2025ರ ಮಹಿಳಾ ಏಕದಿನ ವಿಶ್ವಕಪ್ (Women ODI World Cup 2025) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ (SAW vs ENGW) ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವಾಲ್ವಾರ್ಡ್ಟ್ (Laura Wolvaardt) ದಾಖಲೆಯ ಶತಕವನ್ನು ಬಾರಿಸಿದ್ದಾರೆ. ಮೂಲಕ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಶತಕವನ್ನು ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾ ನಾಯಕಿ ಎಂದು ದಾಖಲೆಯನ್ನು ಅವರು ಬರೆದಿದ್ದಾರೆ. ಬುಧವಾರ ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಭರ್ಜರಿ ಬ್ಯಾಟ್ ಮಾಡಿ 115 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ತಮ್ಮ ತಂಡ 319 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಪರ ಇನಿಂಗ್ಸ್ ಆರಂಭಿಸಿದ ಲಾರಾ ವಾಲ್ವಾರ್ಡ್ಟ್ ಭರ್ಜರಿ ಪ್ರದರ್ಶನವನ್ನು ತೋರಿದರು. ಅವರು ಆಡಿದ 143 ಎಸೆತಗಳಲ್ಲಿ 4 ಸಿಕ್ಸರ್‌ಗಳು ಹಾಗೂ 12 ಬೌಂಡರಿಗಳೊಂದಿಗೆ 169 ರನ್‌ಗಳನ್ನು ಕಲೆ ಹಾಕಿದರು. ಇದು ಅವರ ಎರಡನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ಇದಕ್ಕೂ ಮುನ್ನ ಲಾರಾ ವಾಲ್ವಾರ್ಡ್ಟ್ ಕಳೆದ ವರ್ಷ ಶ್ರೀಲಂಕಾ ವಿರುದ್ಧ ಅಜೇಯ 184 ರನ್‌ಗಳನ್ನು ಗಳಿಸಿದ್ದರು. ಅವರು ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ವುಮೆನ್ ಆಗಿದ್ದಾರೆ. ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಅತಿ ಹೆಚ್ಚು ಶತಕಗಳನ್ನು (15) ಹೊಂದಿದ್ದಾರೆ. ಈ ಇನಿಂಗ್ಸ್‌ನಲ್ಲಿ ವೊಲ್ವಾರ್ಡ್ಟ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.
INDW vs AUSW: ಆಸ್ಟ್ರೇಲಿಯಾ ವಿರುದ್ದ ಸೆಮಿಫೈನಲ್ ಕದನಕ್ಕೆ ಭಾರತ ವನಿತೆಯರು ಸಜ್ಜು!
ಮಹಿಳಾ ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ್ತಿಯರು
15 - ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ)
14 - ಸ್ಮೃತಿ ಮಂಧಾನಾ (ಭಾರತ)
13 - ಸುಜಿ ಬೇಟ್ಸ್ (ನ್ಯೂಜಿಲೆಂಡ್)
12 - ಟಾಮಿ ಬ್ಯೂಮಾಂಟ್ (ಇಂಗ್ಲೆಂಡ್)
10 - ನ್ಯಾಟ್ ಸೀವರ್-ಬ್ರಂಟ್ (ಇಂಗ್ಲೆಂಡ್)
10 - ಲಾರಾ ವೊಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ)
One of the all-time great @cricketworldcup knocks from Proteas skipper Laura Wolvaardt 🥵
— ICC (@ICC) October 29, 2025
Watch #ENGvSA LIVE in your region, #CWC25 broadcast details here ➡️ https://t.co/ULC9AuHQ4P pic.twitter.com/Qjlhdx4Nk9
ಮಿಥಾಲಿ ರಾಜ್ ದಾಖಲೆ ಮುರಿದ ಲಾರಾ ವೊಲ್ವಾರ್ಡ್ಟ್
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ನಾಕ್‌ಔಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ನಾಯಕಿ ಎಂಬ ದಾಖಲೆಯನ್ನು ಲಾರಾ ವೊಲ್ವಾರ್ಡ್ಟ್ ಬರೆದಿದ್ದಾರೆ. ಆ ಮೂಲಕ ನಾಕ್‌ಔಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳುವ ಮೂಲಕ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದಿದ್ದಾರೆ. 2005ರಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಮಿಥಾಲಿ ರಾಜ್ 91 ರನ್‌ಗಳನ್ನು ಕಲೆ ಹಾಕಿದ್ದಾರೆ. ಬೆಲಿಂಡಾ ಕ್ಲಾರ್ಕ್ 2000ರ ಟೂರ್ನಿಯ ಫೈನಲ್‌ನಲ್ಲಿ 91 ರನ್‌ಗಳನ್ನು ಕಲೆ ಹಾಕಿದ್ದರು.
IND vs AUS: ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ, ನಿತೀಶ್ ರೆಡ್ಡಿಗೆ ಗಾಯ!
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ಇನಿಂಗ್ಸ್ ಆಡಿದವರು
169 - ಲಾರಾ ವೊಲ್ವಾರ್ಡ್ಟ್ vs ಇಂಗ್ಲೆಂಡ್ (2025)
102* - ಮರಿಜಾನ್ನೆ ಕಪ್ vs ಪಾಕಿಸ್ತಾನ (2013)
101* - ಲಿಂಡಾ ಒಲಿವಿಯರ್ vs ಐರ್ಲೆಂಡ್ (2000)
101 - ಟಾಜ್ಮಿನ್ ಬ್ರಿಟ್ಸ್ vs ನ್ಯೂಜಿಲೆಂಡ್ (2025)