ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಸ್‌ಯುವಿ ಡಸ್ಟರ್‌ ಅನ್ನು ಮರಳಿ ಬಿಡುಗಡೆ ಮಾಡುವುದಾಗಿ ರೆನಾಲ್ಟ್ ಘೋಷಣೆ

ಅಭಿಮಾನಿಗಳೇ, ನಿಮ್ಮ ಸೀಟ್‌ ಬೆಲ್ಟ್‌ ಗಳನ್ನು ಗಟ್ಟಿ ಕಟ್ಟಿಕೊಳ್ಳಿ- ಯಾಕೆಂದರೆ ಎಸ್‌ಯುವಿ ವಿಭಾಗದ ದಂತಕತೆ ಮರಳಿ ಬರುತ್ತಿದೆ! ಭಾರತದಾದ್ಯಂತ ಇರುವ ಎಸ್‌ಯುವಿ ಪ್ರಿಯರ ಉತ್ಸಾಹವನ್ನು ಮತ್ತೆ ಹೆಚ್ಚಿಸಲು ಮತ್ತು ಉಲ್ಲಾಸವನ್ನು ದುಪ್ಪಟ್ಟಾಗಿಸಲು ಡಸ್ಟರ್ ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ.

ಎಸ್‌ಯುವಿ ಡಸ್ಟರ್‌ ಅನ್ನು ಮರಳಿ ಬಿಡುಗಡೆ ಮಾಡುವುದಾಗಿ ರೆನಾಲ್ಟ್ ಘೋಷಣೆ

-

Ashok Nayak Ashok Nayak Oct 29, 2025 10:12 PM

ನವದೆಹಲಿ: ಅತ್ಯಂತ ಪ್ರತಿಷ್ಠಿತ ಫ್ರೆಂಚ್ ಕಾರು ತಯಾರಕ ಕಂಪನಿ ಆಗಿರುವ ರೆನಾಲ್ಟ್ ಗ್ರೂಪ್‌ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೆನಾಲ್ಟ್ ಇಂಡಿಯಾ, ಇಂದು ತನ್ನ ಬಹುನೀರಿಕ್ಷಿತ ಐತಿಹಾಸಿಕ ಎಸ್‌ಯುವಿ ಡಸ್ಟರ್ ಅನ್ನು ಮರಳಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಡಸ್ಟರ್ ನ ಶ್ರೀಮಂತ ಪರಂಪರೆಯನ್ನು ಮುಂದುವರೆಸುವುದಾಗಿ ಅಧಿಕೃತವಾಗಿ ತಿಳಿಸಿದೆ.

2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ರೆನಾಲ್ಟ್ ಡಸ್ಟರ್ ವಾಹನವು ಎಸ್‌ಯುವಿ ವಿಭಾಗದಲ್ಲಿ ಸಂಚಲನ ಸೃಷ್ಟಿಸಿತ್ತು. ಈಗ ಪ್ರಯಾಣಿಕ ವಾಹನ ಮಾರುಕಟ್ಟೆಯ ಸುಮಾರು ನಾಲ್ಕನೇ ಒಂದು ಭಾಗವನ್ನು ಡಸ್ಟರ್ ಆಕ್ರಮಿಸಿಕೊಂಡಿರುವುದು ಗಮನಾರ್ಹವಾಗಿದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಡಸ್ಟರ್ ಕಂಪನಿಯ ಇಂಟರ್‌ ನ್ಯಾಷನಲ್ ಗೇಮ್ ಪ್ಲಾನ್ 2027 ಅಡಿಯಲ್ಲಿ ಬಿಡುಗಡೆಯಾಗುವ ಮೊದಲ ಉತ್ಪನ್ನವಾಗಿರಲಿದೆ. ಈ ಕಾರು ಕಂಪನಿಯ ಭಾರತ ಕೇಂದ್ರಿತ ರೂಪಾಂತರ ತಂತ್ರವಾದ ರೆನಾಲ್ಟ್ ರೀಥಿಂಕ್ ನ ಆಧಾರದಲ್ಲಿ ಮೂಡಿ ಬರಲಿದೆ.

ಇದನ್ನೂ ಓದಿ: Bangalore News: ಅ.19ರಂದು‌ ಪರಮ್‌ ಫೌಂಡೇಶನ್‌ನ ಕಲಾ ಸಂವಾದದಲ್ಲಿ ʻಮಹಾಕ್ಷತ್ರಿಯʼ ನೃತ್ಯರೂಪಕ, ಸಂವಾದ!

ಈ ಸಂದರ್ಭದಲ್ಲಿ ಮಾತನಾಡಿದ ರೆನಾಲ್ಟ್ ಗ್ರೂಪ್ ಇಂಡಿಯಾದ ಸಿಇಓ ಸ್ಟಿಫಾನೆ ಡೆಬ್ಲೈಸ್ ಅವರು, "ಡಸ್ಟರ್ ಅನ್ನುವುದು ಹೆಸರನ್ನು ಮೀರಿದ್ದಾಗಿದ್ದು, ಅದೊಂದು ದಂತಕತೆಯಾಗಿದೆ. ಅದೊಂದು ಅಡ್ವೆಂಚರ್, ವಿಶ್ವಾಸಾರ್ಹತೆ ಮತ್ತು ಹೊಸತನದ ಸಂಕೇತವಾಗಿದೆ. ಡಸ್ಟರ್ ಅನ್ನು ಮರಳಿ ಕರೆತರುತ್ತಿರುವುದು ಭಾರತೀಯ ಮಾರುಕಟ್ಟೆಯಲ್ಲಿ ನಾವು ಹೊಂದಿರುವ ನಮ್ಮ ಬದ್ಧತೆ ಯನ್ನು ಮತ್ತು ಗ್ರಾಹಕರೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವ ವಾಹನಗಳನ್ನು ಒದಗಿಸುವ ನಮ್ಮ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಹೊಸ ಡಸ್ಟರ್ ತನ್ನ ಶ್ರೀಮಂತ ಪರಂಪರೆಯನ್ನು ಮುಂದುವರೆಸುವುದರ ಜೊತೆಗೆ ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಉನ್ನತ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ" ಎಂದು ಹೇಳಿದರು.

ಭಾರತೀಯ ಆಟೋಮೊಬೈಲ್ ಉತ್ಸಾಹಿಗಳಿಗೆ ಈ ಸುದ್ದಿ ಒಂದು ಮಹತ್ವದ ಸುದ್ದಿಯಾಗಿದ್ದು, ಅನೇಕರು ಈ ಪ್ರೀತಿಯ ಎಸ್‌ಯುವಿಯ ಮರಳುವಿಕೆಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ವಿಶ್ವಾದ್ಯಂತ ಸುಮಾರು 18 ಲಕ್ಷ ಗ್ರಾಹಕರನ್ನು ಮತ್ತು ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಆನಂದ ದಾಯಕ ಮಾಲೀಕರನ್ನು ಹೊಂದಿರುವ ಡಸ್ಟರ್, ಒಂದು ದೊಡ್ಡ ಪ್ರಮಾಣದ ಅನುಯಾಯಿ ಗಳನ್ನು ಹೊಂದಿದೆ ಮತ್ತು ರೆನಾಲ್ಟ್‌ ನ ಜಾಗತಿಕ ಉತ್ಪನ್ನ ಸಂಗ್ರಹಗಳಲ್ಲಿಯೇ ಅತ್ಯಂತ ಯಶಸ್ವಿ ಎಸ್‌ಯುವಿ ಗಳಲ್ಲಿ ಒಂದಾಗಿದೆ.

ಈ ಹೊಸ ಡಸ್ಟರ್ 2026ರ ಜನವರಿ 26ರಂದು ಗಣರಾಜ್ಯೋತ್ಸವದಂದು ಅನಾವರಣಗೊಳ್ಳಲಿದೆ. ಅಲ್ಲಿಯವರೆಗೆ, ಆಸಕ್ತ ಗ್ರಾಹಕರು ಕಾಯಬಹುದು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕದಲ್ಲಿರ ಬಹುದು.